ಕಲ್ಲು ವಿಗ್ರಹ-ಹಣೆ ಮುಟ್ಟಿದ್ರೆ ನಿಜವಾದ ಚರ್ಮ..! ತಾಯಿ ಹಣೆಗೆ ಕುಂಕುಮ ಇಟ್ರೆ ಈಡೇರದಿರೋದೆ ಇಲ್ಲ…!!ನಮಸ್ತೆ ಸ್ನೇಹಿತರೆ ದಟ್ಟ ಅರಣ್ಯ ನಟ್ಟನಡುವೆ ಅದ್ಭುತ ತೇಜೋಪುಂಜ ಮೂರ್ತಿ ಮೂರ್ತಿಯ ಮುಂದೆ ಹೋಗಿ ನಿಂತು ಕೈ ಮುಗಿದು ಮೂರ್ತಿ ಹಣೆಗೆ ಕುಂಕುಮವನ್ನು ಇಡಬೇಕು ನಂತರ ಮಂಗಳಾರತಿಯನ್ನು ಮಾಡಬೇಕು ಇಷ್ಟು ಮಾಡಿ ಮನೆ ತಲುಪುವಷ್ಟರಲ್ಲಿ ಅದ್ಭುತವಾದ ಸಂಗತಿಗಳು ಘಟಿಸುತ್ತವೆ ಇದು ಈ ದೇವರನ್ನು ನಂಬಿ ಹೇಳಿರುವ ಅನುಭವದ ಮಾತುಗಳು ಇದು ಇಷ್ಟಾರ್ಥಗಳನ್ನು ಈಡೇರಿಸುವ ಇಷ್ಟಕಾಮೇಶ್ವರಿ ಇಷ್ಟಕಾಮೇಶ್ವರಿ ದೇಗುಲ ಇರುವುದು ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಿಯಿಂದ ಸುಮಾರು 15-20km ದಟ್ಟಾರಣ್ಯದ ಒಳಗೆ ಈ ದಟ್ಟಾರಣ್ಯದ ನಡುವೆ ಒಂದು ಗುಹೆ ಮಾದರಿಯ ದೇಗುಲವಿದೆ ಇಲ್ಲಿ ಶೈಲಪುತ್ರಿ ನೆಲೆಸಿದ್ದಾರೆ ಶೈಲಪುತ್ರಿಯ ಹಿನ್ನೆಲೆ ಎಲ್ಲರಿಗೂ ತಿಳಿದಿದೆ ಸತಿದೇವಿಯ ದಹನವಾಗಿ ನಂತರ ಪಾರ್ವತಿಯಾಗಿ ಹಿಮವಂತನ ಮಗಳಾದ ಜಗದಾಂಬೆ ಶಿವನಿಗಾಗಿ ದೀರ್ಘವಾದ ತಪಸ್ಸನ್ನು ಮಾಡುತ್ತಾಳೆ.
ದಕ್ಷಯಜ್ಞದಲ್ಲಿ ಸತಿದೇವಿಯ ದಹನವಾದ ಮೇಲೆ ಧ್ಯಾನದೊಳಗೆ ಕಳೆದುಹೋಗಿದ್ದ ಶಿವ ಎಲ್ಲದರಿಂದ ದೂರವಾಗಿದ್ದ ಆಗ ಮತ್ತೆ ಪಾರ್ವತಿಯಾಗಿ ಜನಿಸಿದ ಮಾತೆ ಶಿವನನ್ನು ಉಳಿಸಿಕೊಳ್ಳುವುದಕ್ಕೆ ಮತ್ತೆ ದೀರ್ಘವಾದ ತಪಸ್ಸನ್ನು ಮಾಡಿರುತ್ತಾರೆ ನಂತರ ಪರಮೇಶ್ವರನ ಕೃಪೆ ಪಡೆದು ಶಿವನೊಡನೆ ವಿವಾಹವಾಗುತ್ತಾಳೆ ಅಸಾಧ್ಯವಾದದ್ದು ಸಾಧ್ಯವಾದದ್ದು ಈ ಶೈಲಪುತ್ರಿಯ ತಪಸ್ಸಿನಿಂದ ಇದೇ ರೀತಿ ಹಿಮವಂತನ ಪುತ್ರಿಯಾದ ಪಾರ್ವತಿ ಮಾತೆ ಶಿವನಿಗಾಗಿ ತಪಸ್ಸು ಮಾಡಿದ ಶೈಲಪುತ್ರಿ ಭಂಗಿಯಲ್ಲಿದೆ ಈ ವಿಗ್ರಹ ಕಾಲಾನಂತರದಲ್ಲಿ ಈ ಮೂರ್ತಿಯ ಮುಂದೆ ಹರಕೆ ಕಟ್ಟಿ ಇಷ್ಟಾರ್ಥಗಳು ಈಡೇರುತ್ತಾ ಬಂದಿದ್ದರಿಂದ ಈ ದೇವರನ್ನು ಇಷ್ಟಕಾಮೇಶ್ವರಿ ಎಂದು ಕರೆಯುತ್ತಾರೆ ಇಲ್ಲಿ ಮಾತೆಯ ಹಣೆಯ ಮೇಲೆ ಕುಂಕುಮ ಇಟ್ಟು ಬೇಡಿಕೊಂಡಾಗಲೆಲ್ಲ ಇಷ್ಟಾರ್ಥಗಳು ನೆರವೇರಿದೆ ಯಾರಾದರೂ ಈ ರೀತಿಯಾಗಿ ಪೂಜೆಯನ್ನು ಸಲ್ಲಿಸಿದರು ಅವರ ಇಷ್ಟಾರ್ಥಗಳು ಖಂಡಿತವಾಗಿ ನೆರವೇರಿದೆ.
ಈ ವಿಗ್ರಹಕ್ಕೆ ಹಣೆಯ ಮೇಲೆ ಕುಂಕುಮ ಇಡಲು ಮುಟ್ಟಿದರೆ ಮನುಷ್ಯರ ಚರ್ಮವನ್ನು ಸ್ಪರ್ಶಿಸುವಂತೆ ಭಾಸವಾಗುತ್ತದೆ ಪ್ರತಿ ದೇವರಿಗೂ ಕೂಡ ಒಂದು ಮಂತ್ರದ ಅನುಸಂಧಾನವಿರುತ್ತದೆ ಈ ಮಂತ್ರಗಳನ್ನು ಹೇಳಿದಾಗ ಕಾರ್ಯಸಿದ್ಧಿ ಮತ್ತಷ್ಟು ಅನುಕೂಲವಾಗುತ್ತದೆ ಎನ್ನುವುದು ಮಂತ್ರಶಾಸ್ತ್ರದ ನಂಬಿಕೆ ಇಷ್ಟಕಾಮೇಶ್ವರಿ ಮಂತ್ರವನ್ನು ಹೇಳುತ್ತಾ ಧ್ಯಾನ ಮಾಡುತ್ತಾ ಹೋದರೆ ಆಯಸ್ಸು ಸಂಪತ್ತು ಆರೋಗ್ಯ ಯಶಸ್ಸು ಮತ್ತು ವಿದ್ಯೆ ವೃದ್ಧಿಯಾಗುತ್ತದೆ ಎಂಬುದು ಜನರ ನಂಬಿಕೆ.