ನಾಗವಲ್ಲಿ ಯಾರು ? ಅವಳ ಆತ್ಮ ಎಲ್ಲಿದೆ? ಸಿನಿಮಾ 10% ಮಾತ್ರ ಅಸಲಿ ಕಥೆಯೆ ಬೇರೆ!2004ರಲ್ಲಿ ತೆರೆಕಂಡ ಆಪ್ತಮಿತ್ರ ಚಿತ್ರವು ಎಲ್ಲರಲ್ಲಿಯೂ ಎದರಿಕೆ ಮತ್ತು ಕುತೂಹಲ ಮೂಡಿಸಿತು. ಯಾಕೆಂದರೆ ಇದು ಅಸಲಿ ಕಥೆಯ ಚಿತ್ರ. ಈ ಚಿತ್ರ ಮಾಡಿದ್ದರಿಂದಲೇ ನಟಿ ಸೌಂದರ್ಯ ಅವರು ಮೃತಪಟ್ಟರು ಎಂಬ ಹೂಹ ಪೋಹಗಳು ಕೂಡ ಬಹಳ ದಿನಗಳು ಹರಿದಾಡಿದವು. ಈ ಚಿತ್ರವು ಕನ್ನಡ ಭಾಷೆ ಮಾತ್ರವಲ್ಲದೆ,ತೆಲುಗು ತಮಿಳು ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿಯೂ ಕೂಡ ತೆರೆ ಕಂಡಿದೆ.ಹಾಗೆಯೇ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿದೆ.ಈಗ ಸಿನಿಮಾದಲ್ಲಿ ಹೇಳಿರುವ ಕಥೆಗೂ ನಿಜವಾದ ಕಥೆಗೂ ವ್ಯತ್ಯಾಸ ಏನು,ಚಂದ್ರಮುಖಿ ಯಾರು ಅವಳನ್ನು ಕೊಂದವರಾರು ಎಂಬ ಸತ್ಯ ಕಥೆಯನ್ನು ಇಲ್ಲಿ ತಿಳಿಯೋಣ.ಕೇರಳ ರಾಜ್ಯದ ಮುಟಂ ಪ್ರಾಂತ್ಯದ ಅಲೆ ಮುಟ್ಟಿ ಎಂಬ ಚಿಕ್ಕ ಪಟ್ಟಣದಲ್ಲಿ ಭವನದಂತಹ ಒಂದು ಮನೆ.ಸುತ್ತಲೂ ಅರಣ್ಯದ ವಾತಾವರಣ. ಅದನ್ನು ನೋಡಿದರೆ ಆ ಮನೆ ಯಾವುದೋ ಒಬ್ಬ ದೊಡ್ಡ ಜಮೀನ್ದಾರನ ಮನೆ ಎಂದು ತಿಳಿಯುತ್ತದೆ.
ಅದು ಟ್ರ್ಯಾವಂಕೋ ರಾಜ್ಯದಲ್ಲಿನ ಒಬ್ಬ ಜಮೀನ್ದಾರನ ಮನೆ. ಆ ಇಡಿ ಪ್ರಾಂತ್ಯವೆಲ್ಲವೂ ಕೂಡ ಅವನ ಆಡಳಿತದಲ್ಲಿಯೇ ಇತ್ತು. ಚರಿತ್ರೆಯ ಪ್ರಕಾರ ಅವನು ಒಬ್ಬ ಕ್ರೂರಿ. ಅವನ ಮನೆಯ ಕೆಳಭಾಗದಲ್ಲಿ ಸಂಬಂಧಿಕರು ಇದ್ದರು, ಮೇಲ್ಭಾಗದಲ್ಲಿ ಅವನು ಇದ್ದ. ಇವನ ಹೆಂಡತಿ, ಮಕ್ಕಳು, ಸೊಸೆಯಂದಿರು ಎಲ್ಲರೂ ಅದೇ ಮನೆಯಲ್ಲಿ ವಾಸವಿದ್ದರು. ಬ್ರಿಟಿಷರ ಪಾಲನೆಯಲ್ಲು ಕುಡ ಬ್ರಿಟಿಷರಿಗೆ ಟ್ಯಾಕ್ಸ್ ಕಟ್ಟುತ್ತ ಆತ ಇದೇ ಮನೆಯಲ್ಲಿ ವಾಸವಿದ್ದ. ಆ ಪ್ರಾಂತ್ಯವನ್ನು ಪಾಲಿಸುತ್ತಿದ್ದ. ಅವನಿಗಾಗಿ ಕೆಲಸ ಮಾಡುವವರಿಗಾಗಿ ಅಲ್ಲಿಯೆ ಮನೆಗಳನ್ನು ನಿರ್ಮಿಸಿಕೊಟ್ಟಿದ್ದ.
ಮನೆಯಿಂದ ಸ್ವಲ್ಪ ದೂರದಲ್ಲಿ ಅವನು ಇಟ್ಟುಕೊಂಡಿದ್ದ ಮಹಿಳೆಯರಿಗಾಗಿ ಒಂದು ಮನೆಯನ್ನು ನಿರ್ಮಿಸಿಕೊಂಡಿದ್ದ . ಆ ಮನೆ ಹೇಗಿತ್ತು ಎಂದರೆ ರಾಜ ಅವನ ಮನೆಯ ಮೇಲೆ ನಿಂತು ನೋಡಿದರೆ ಅವನಿಗಾಗಿ ಅಪಹರಿಸಿ ಬಂದಿದ್ದ ಹೆಣ್ಣು ಮಕ್ಕಳು ಕಾಣಿಸುವಂತೆ ಆ ಮನೆಯನ್ನು ನಿರ್ಮಿಸಲಾಗಿತ್ತು.ಆಗಾಗ ಸುಂದರವಾದ ನಾಟ್ಯಗಾರರನ್ನು ಕರೆಸಿಕೊಂಡು ಆಗಾಗ ನಾಟ್ಯ ಮಾಡಿಸಿಕೊಂಡು ಅವರಿಗೆ ಬಹುಮಾನಗಳನ್ನು ಸಹ ಕೊಟ್ಟು ಕಳುಹಿಸುತ್ತಿದ್ದ.ಸೌಂದರ್ಯವನ್ನು ಸ್ವಾದಿಸುವಲ್ಲಿ ಇವನು ಎತ್ತಿದ ಕೈ. ಚಂದ್ರಮುಖಿ ಕಥೆಯು ಸಹ ಈ ರೀತಿ ಹುಟ್ಟಿಕೊಂಡಿತು.ಬ್ರಿಟಿಷ್ ಅಧಿಕಾರಿಗಳಿಗೆ ಸರಿಸಮಾನವಾಗಿ 4 ಕಾರುಗಳು ಇದ್ದವು.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.