ಮೇಷ ರಾಶಿ 2022 ರ ಮೇ ತಿಂಗಳ ಭವಿಷ್ಯ.2022 ರ ಮೇ ತಿಂಗಳಲ್ಲಿ ಗೋಚಾರ ಫಲ ಅಂದರೆ ನವಗ್ರಹಗಳ ಸಂಚಾರ ಹೇಗಿರುತ್ತದೆ. ಮತ್ತು ಇದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಹೇಗೆ ಬೀರುತ್ತದೆ. ಅದರಲ್ಲೂ ಮುಖ್ಯವಾಗಿ ಈ ಮಾಸದಲ್ಲಿ ಬದಲಾಗುವ ಗ್ರಹಗಳು ಯಾರು ಎಂಬ ಮಾಹಿತಿಯನ್ನು ತಿಳಿದು ಕೊಂಡು ದ್ವಾದಶ ರಾಶಿಗಳ ಮೇಲೆ ಪ್ರಭಾವ ನೋಡೋಣ. ಈ ಮೇ ತಿಂಗಳಲ್ಲಿ ಪ್ರಮುಖವಾಗಿ ರವಿಯು ಮೇಷ ರಾಶಿಯಿಂದ ವೃಷಭ ರಾಶಿಗೆ ಮೇ15 ರಿಂದ ಪ್ರವೇಶವಾಗುತ್ತಾನೆ. ಹಾಗೆಯೇ ಕುಜನು ಸಹ 18ನೇ ತಾರೀಖು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶವಾಗುತ್ತಾನೆ. ಹಾಗೇಯೆ 24 ನೇ ತಾರೀಖು ಶುಕ್ರ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ. ಉಚ್ಚಾ ಸ್ಥಾನದಲ್ಲಿರುವಂತಹ ಶುಕ್ರ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಮೂರು ಬದಲಾವಣೆಗಳನ್ನು ಬಿಟ್ಟರೆ ಬೇರೆ ಯಾವ ಗ್ರಹಗಳ ಬದಲಾವಣೆ ಈ ಮಾಸದಲ್ಲಿ ಇರುವುದಿಲ್ಲ.
ಈ ಬದಲಾವಣೆಗಳು ಹಾಗೂ ಗೋಚಾರದಲ್ಲಿ ನವಗ್ರಹಗಳ ಪ್ರಭಾವ ಮೇಷ ರಾಶಿಗೆ ಹೇಗೇ ಇರುತ್ತದೆ ಎಂದು ನೋಡೋಣ. ಮೇಷ ರಾಶಿಗೆ ರಾಶ್ಯಾಧಿಕಾರಿಯಾಗಿ ಇರುವಂತಹ ಕುಜನು ಪ್ರಾರಂಭದಲ್ಲಿ ಅಂದರೆ 18 ತಾರೀಖಿನವರೆಗೂ ಏಕದಶ್ಯ ಭಾವದಲ್ಲಿ ಇರುತ್ತಾನೆ. ಹನ್ನೊಂದನೇ ಮನೆಯಲ್ಲಿ ಬಲಿಷ್ಟ ಸ್ಥಾನದಲ್ಲಿ ಇರುತ್ತಾನೆ. ಜನ್ಮಕ್ಕೆ ರಾಹು ಪ್ರವೇಶವಾಗಿ ಇದ್ದಾನೆ. ಅಂದರೆ ನಿಮ್ಮ ರಾಶಿಯಲ್ಲಿ ರಾಹು ಸ್ಥಿತನಾಗಿ ಇದ್ದಾನೆ. ಉಚ್ಚ ರವಿಯು ಕೂಡ ಅಲ್ಲಿಯೇ ಇದ್ದನೇ. ಈ ರಾಹುವಿನ ಸಂಘರ್ಷ ಸ್ವಲ್ಪ ಜಾಸ್ತಿ ಇರುತ್ತದೆ. ಸ್ವಲ್ಪ ಉದ್ವೇಗಕ್ಕೆ ಒಳಗಾಗುವುದು, ಅತಿ ವೇಗವಾಗಿ ಕೋಪ ತಾಪಗಳು ಬರುವಂತಹದ್ದು, ಚಿಕ್ಕ ಪುಟ್ಟ ಅನಾರೋಗ್ಯದ ಭೀತಿ, ಏನಾದರೂ ಚರ್ಮ ದೋಷಗಳು, ಬೆನ್ನುನೋವು ಬರುವ ಸಾಧ್ಯತೆಗಳು ಇರುತ್ತವೆ.
ಆರೋಗ್ಯದ ಕಡೆಗೆ ಸ್ವಲ್ಪ ಗಮನ ಹರಿಸಬೇಕು, ಜನ್ಮ ರಾಶಿಯಲ್ಲಿ ಇರುವ ಜನ್ಮ ರಾಹುವನ್ನು ಸಮಾಧಾನ ಪಡಿಸಿಕೊಳ್ಳಬೇಕು. ವೇದಗಳ ಕಾಲದಿಂದಲೂ ಯಾವುದೇ ಗ್ರಹಕ್ಕು ಅದೀದೇವತಾ ಪ್ರತ್ಯಿದಿದೇವತಾ ಆರಾಧನೆ ಮಾಡಿದರೆ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ವಾಡಿಕೆ ಇದೆ. ನೇರವಾಗಿ ಗ್ರಹಗಳನ್ನು ಆರಾಧಿಸುವುದಕ್ಕಿಂತ ಅದಿದೇವತಾ ಪ್ರತ್ಯಿದಿದೇವತಾ ಆರಾಧನೆ ಮಾಡುವುದು. ರಾಹು ಜನ್ಮಸ್ಥಿತನಾಗಿ ಇದ್ದನೆ ಅಂದರೆ ರಾಹು ಸರ್ಪಾರಾಧನೆ ಮಾಡಿದಾಗ ರಾಹುವಿನ ದೋಷ ಕಡಿಮೆ ಆಗುತ್ತದೆ. ಇಲ್ಲದಿದ್ದರೆ ಜನ್ಮ ರಾಹು ಮೇಷ ರಾಶಿಗೆ ಮಾನಸಿಕ ಅಶಾಂತಿ, ಚಂಚಲ ಮನಸ್ಸು ಇರುವ ಹಾಗೆ ಪ್ರಭಾವ ಬೀರುತ್ತಾನೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.