ಗ್ಯಾಸ್ ಒಲೆ ಸರಿಯಾಗಿ ಉರಿಯುತ್ತಿಲ್ಲ,ಕಡಿಮೆ ಉರಿ ಬರುತ್ತಿದ್ದರೆ ಈ 2 ಕೆಲಸ ಇಂದೇ ಮಾಡಿ..

ಗ್ಯಾಸ್ ಬರ್ನರ್ ನಲ್ಲಿ ಉರಿ ಕಡಿಮೆ ಬರುತ್ತಿದ್ದರೆ ಅದನ್ನು ಹೆಚ್ಚು ಮಾಡುವುದು ಹೇಗೆ ಗೊತ್ತಾ.ಸಾಮಾನ್ಯವಾಗಿ ಎಲ್ಲರೂ ಕೂಡ ಗ್ಯಾಸನ್ನು ಬಳಕೆ ಮಾಡುತ್ತಾರೆ ಇತ್ತೀಚಿನ ದಿನಗಳಲ್ಲಿ ಎಲ್ಲಾರ ಮನೆಯಲ್ಲಿ ಗ್ಯಾಸ್ ಬಳಕೆ ಇದ್ದೇ ಇರುತ್ತದೆ. ಹಳ್ಳಿ ಪ್ರದೇಶದಲ್ಲೂ ಕೂಡ ಈ ಒಂದು ಗ್ಯಾಸ್ ಸಿಲೆಂಡರ್ ಅನ್ನು ಹೆಚ್ಚಾಗಿ ಉಪಯೋಗ ಮಾಡುತ್ತಾರೆ ಮರಗಳನ್ನು ಉಳಿಸುವ ಸಲುವಾಗಿ ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ಹಲವಾರು ಕೊಡುಗೆಗಳನ್ನು ನೀಡಿ ಆ ಮೂಲಕ ಗ್ಯಾಸ್ ಸಿಲೆಂಡರ್ ಅನ್ನು ಉಚಿತವಾಗಿ ನೀಡುವುದರ ಮೂಲಕ ಎಲ್ಲರೂ ಕೂಡ ಈಗ ಗ್ಯಾಸ್ ಅನ್ನು ಅತಿ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಇನ್ನೂ ಸಾಮಾನ್ಯವಾಗಿ ಗ್ಯಾಸ್ ಸ್ಟವ್ ನಲ್ಲಿ ಎರಡು ಬರ್ನರ್ ಅಥವಾ ಮೂರು ಅಥವಾ ನಾಲ್ಕು ಬರ್ನರ್ ಗಳು ಇರುವ ಸ್ಟವ್ ಕಂಡು ಬರುತ್ತದೆ.ಆದರೆ ಎಲ್ಲಾ ಬರ್ನರ್ ಗಳಲ್ಲಿಯೂ ಕೂಡ ಒಂದೇ ರೀತಿಯಾದಂತಹ ಉರಿ ಕಂಡು ಬರುವುದಿಲ್ಲ. ಒಂದು ಕಡೆ ಹೆಚ್ಚಾಗಿ ಉರಿಯುತ್ತದೆ ಮತ್ತೊಂದು ಕಡೆ ಕಡಿಮೆ ಉರಿಯುತ್ತದೆ ಹಾಗಾಗಿ ಎಲ್ಲಾ ಬರ್ನರ್ ಕಡೆಯಲ್ಲೂ ಕೂಡ ಸಮ ಪ್ರಮಾಣದಲ್ಲಿ ಹೆಚ್ಚು ಇಂಧನ ಬಿಡುಗಡೆಯಾಗಬೇಕು ಅಂದರೆ ನಾವು ತಿಳಿಸುವ ಈ ಒಂದು ವಿಧಾನವನ್ನು ಅನುಸರಿಸಿ.

ಸಾಮಾನ್ಯವಾಗಿ ಬರ್ನರ್ ಟೂಬ್ ಗಳಲ್ಲಿ ಏನಾದರೂ ಕಸ ಸಿಕ್ಕಿ ಹಾಕಿಕೊಂಡಿದ್ದಾರೆ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಇಂತಹ ಸಮಯದಲ್ಲಿ ನೀವು ಗ್ಯಾಸ್ ರಿಪೇರಿ ಮಾಡುವವರಿಗೆ ಹೇಳುವ ಬದಲು ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ಗ್ಯಾಸ್ ಹೆಚ್ಚು ಉರಿಯುವಂತೆ ಮಾಡಬಹುದು.ಇದಕ್ಕೆ ಬೇಕಾಗಿರುವುದು ಕೇವಲ ಎರಡು ಪದಾರ್ಥ ನಿಮ್ಮ ಮನೆಯಲ್ಲಿ ಸೇಫ್ಟಿ ಪಿನ್ ಮತ್ತು ಕಟಿಂಗ್ ಪ್ಲೇಯರ್ ಇವೆರಡು ಪದಾರ್ಥಗಳು ಇದ್ದರೆ ಸಾಕು ಸಿಲೆಂಡರ್ ಸಮಸ್ಯೆಯನ್ನು ನಿವಾರಣೆ ಮಾಡಬಹುದು. ಈ ಎರಡು ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಯಾವ ರೀತಿಯಾಗಿ ನಮ್ಮ ಮನೆಯಲ್ಲಿ ಇರುವಂತಹ ಗ್ಯಾಸ್ ಬರ್ನರ್ ಗಳನ್ನು ಶುದ್ಧಗೊಳಿಸಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕಾದರೆ ಈ ಕೆಳಗಿನ ವಿಡಿಯೋವನ್ನು ನೋಡಿ. ಈ ವಿಡಿಯೋ ನೋಡಿದರೆ ಖಚಿತವಾಗಿಯೂ ನಿಮಗೆ ನಿಮ್ಮ ಮನೆಯಲ್ಲಿ ಇರುವಂತಹ ಗ್ಯಾಸ್ ಬರ್ನರ್ ಗಳ ಸಮಸ್ಯೆ ನಿವಾರಣೆಯಾಗುತ್ತದೆ ಇದು ತುಂಬಾನೇ ಸುಲಭವಾದಂತಹ ಒಂದು ಪರಿಹಾರವಾಗಿದೆ.

WhatsApp Group Join Now
Telegram Group Join Now
[irp]