Monthly income scheme 2022 ಪ್ರತಿ ತಿಂಗಳು ಬಡ್ಡಿ ಬರುತ್ತೆ 50 ಸಾವಿರಕ್ಕೆ = 3300 / 1 ಲಕ್ಷಕ್ಕೆ = 6600 / ಎಲ್ಲಾರೂ ಮಾಡಿಸಬಹುದು.ಪೋಸ್ಟ್ ಆಫೀಸ್ ಪ್ರತಿ ತಿಂಗಳು ಕೂಡ ಅಧಿಕ ಲಾಭಗಳಿಸುವಂತಹ ಒಂದು ಸ್ಕೀಮ್ ನ ಬಗ್ಗೆ ತಿಳಿಸುತ್ತಿದ್ದೇವೆ ಹೌದು ಕೇವಲ ನೀವು ಐವತ್ತು ಸಾವಿರ ರೂಪಾಯಿ ಡಿಪೋಸಿಟ್ ಮಾಡಿದರೆ ಸಾಕು ಪ್ರತಿ ತಿಂಗಳು ಕೂಡ 3300 ರೂಪಾಯಿ ಬಡ್ಡಿಯನ್ನು ಪಡೆಯಬಹುದಾಗಿದೆ. ಹೌದು ಪೋಸ್ಟ್ ಆಫೀಸ್ ನಲ್ಲಿ ಹಲವರು ರೀತಿಯಾದಂತಹ ಸ್ಕೀಮ್ ಗಳು ಇರುವುದು ನೀವು ನೋಡಬಹುದು. ಈಗ ಇರುವಂತಹ ಸ್ಕಿಮ್ ಗಳಲ್ಲಿ ಇದು ತುಂಬಾನೇ ಉತ್ತಮ ಸ್ಕೀಮ್ ಅಂತನೇ ಹೇಳಬಹುದು ಪ್ರತಿ ತಿಂಗಳು ಕೂಡ 3300 ರೂಪಾಯಿಗಳನ್ನು ಪೆನ್ಷನ್ ಮುಖಾಂತರ ಪಡೆಯಬಹುದು. ಹಾಗಾದರೆ ಈ ಸ್ಕಿಮ್ ನಾ ಹೆಸರೇನು ಯಾವ ರೀತಿಯಾಗಿ ನಾವು ಹಣವನ್ನು ಇಲ್ಲಿ ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ತಿಳಿಸಿ ಕೊಡುತ್ತೆವೆ.
ಇನ್ನು ಈ ಒಂದು ಸ್ಕೀಮ್ ನಾ ಇಂಟರೆಸ್ಟ್ ರೇಟ್ ಎಷ್ಟಿದೆ ಅಂತ ನೋಡುವುದಾದರೆ 6.6 ಪರ್ಸೆಂಟ್ ಇರುವುದನ್ನು ನೋಡಬಹುದು ಈ ಸ್ಕಿಮ್ ಗೆ ನೀವು ಕನಿಷ್ಠ ಪಕ್ಷ ಒಂದುವರೆ ಸಾವಿರ ರೂಪಾಯಿ ಗರಿಷ್ಠ ನಾಲ್ಕುವರೆ ಲಕ್ಷ ರೂಪಾಯಿ ಡೆಪೋಸಿಟ್ ಮಾಡಬಹುದಾಗಿದೆ ಇದು ಸಿಂಗಲ್ ಅಕೌಂಟ್ ಗೆ ಮಾತ್ರ ಸೀಮಿತವಾಗಿರುತ್ತದೆ. ಒಂದು ವೇಳೆ ನೀವು ಜಾಯಿಂಟ್ ಅಕೌಂಟ್ ಮಾಡಿಸಿಕೊಂಡಿದ್ದಾರೆ ಅದರಲ್ಲಿ ನೀವು 9 ಲಕ್ಷ ರೂಪಾಯಿವರೆಗೂ ಕೂಡ ಡೆಪೋಸಿಟ್ ಮಾಡಬಹುದಾಗಿದೆ. ಪ್ರತಿ ತಿಂಗಳು ನೀವೇನಾದರೂ ಪೆನ್ಷನ್ ಪಡೆಯಬೇಕು ಅಂತ ಅಂದುಕೊಂಡಿದ್ದಾರೆ ಕೇವಲ ಒಂದು ಬಾರಿ ಡೆಪಾಸಿಟ್ ಮಾಡಿದರೆ ಸಾಕು ಒನ್ ಟೈಮ್ ಇನ್ವೆಸ್ಟ್ ಮೆಂಟ್. ಈ ಒಂದು ಸ್ಕಿಮ್ ಗೆ ನೀವು ಸೇರಿಕೊಂಡರೆ ಪ್ರತಿ ತಿಂಗಳು ಕೂಡ ನಿಮ್ಮ ಪೋಸ್ಟ್ ಆಫೀಸ್ ನಲ್ಲಿ ಇರುವಂತಹ ಸೇವಿಂಗ್ಸ್ ಅಕೌಂಟ್ ಗೆ ಬಡ್ಡಿ ಬಂದು ಬಿಡುತ್ತದೆ.
ಇನ್ನು ನೀವು ಹೂಡಿಕೆ ಮಾಡಿದಂತಹ ಹಣಕ್ಕೆ ನೂರಕ್ಕೆ ನೂರರಷ್ಟು ಗ್ಯಾರೆಂಟಿಯನ್ನು ನೀಡಲಾಗುತ್ತದೆ ಏಕೆಂದರೆ ಇದು ಭಾರತೀಯ ಸರ್ಕಾರಕ್ಕೆ ಸೇರಿರುತ್ತದೆ. ಇನ್ನು ನೀವು ಇನ್ವೆಸ್ಟ್ ಮೆಂಟ್ ಮಾಡಿದ ಹಣದ ಮೆಚುರಿಟಿ 5 ವರ್ಷಗಳು ನೀವು ಕಾಯಬೇಕಾಗುತ್ತದೆ ಅಷ್ಟೇ ಅಲ್ಲದೆ ಈ ಒಂದು ಸ್ಕಿಮ್ ಗೆ ಯಾರು ಬೇಕಾದರೂ ಕೂಡ ಡಿಪೋಸಿಟ್ ಮಾಡಬಹುದು ಇದರಲ್ಲಿ ವಯಸ್ಸಿನ ಅಂತರ ಇರುವುದಿಲ್ಲ. ಕೆಲವೊಮ್ಮೆ ಕೆಲವೊಂದು ಸ್ಕೀಮ್ ಗಳಿಗೆ ನೀವು ಡೆಪೋಸಿಟ್ ಮಾಡಬೇಕು ಅಂದರೆ ಗರಿಷ್ಠ ವಯಸ್ಸಿನ ಮಿತಿ ಹಾಗೂ ಕನಿಷ್ಟ ವಯಸ್ಸಿನ ಮಿತಿ ಇರುತ್ತದೆ. ಆದರೆ ಈ ಸ್ಕಿಮ್ ಗೆ ಯಾವುದೇ ರೀತಿಯಾದಂತಹ ವಯಸ್ಸಿನ ಮಿತಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.