ತುಲಾ ರಾಶಿ 2022 ರ ಮೇ ತಿಂಗಳ ಭವಿಷ್ಯ! 2022ರ ಮೇ ತಿಂಗಳಲ್ಲಿ ತುಲಾ ರಾಶಿ ಅವರ ಭವಿಷ್ಯ ಹೇಗಿದೆ ಏನಾದರೂ ಒಳಿತನ್ನು ಕಾಣಬಹುದಾ ಅಥವಾ ಏನಾದರೂ ಕೆಡುಕು ಇದಿಯಾ, ಯಾವ ತರಹದ ಅನುಭವ, ಸುಖ, ದುಃಖಗಳು ಪ್ರಾಪ್ತಿ ಆಗಬಹುದು ಎಂದು ತಿಳಿಯೋಣ. ವೈಶಾಖ ಮಾಸವು 2022 ರ ಮೇ ತಿಂಗಳ ಪೂರ್ತಿ ಇದ್ದೆ ಇರುತ್ತದೆ. ಇದು ಉತ್ತರಾಯಣದ ಮಾಸವಾಗಿ ಇರುವುದರಿಂದ ಶುಭ ಕಾರ್ಯಗಳಿಗೆ ಹೇಳಿ ಮಾಡಿಸಿದಂತ ಶುಭ ಮಾಸವಾಗಿ ಇರುವುದರಿಂದ ಮನೆಯಲ್ಲಿ ಶುಭ ಕಾರ್ಯಗಳನ್ನು ಮಾಡುತ್ತಿದ್ದರೆ ಅವರಿಗೆ ಶುಭವಾಗುತ್ತದೆ. ಯಾವುದಾದರೂ ಶುಭ ಕಾರ್ಯಗಳು, ಪೂಜೆಗಳನ್ನು ಮಾಡಬೇಕೆಂದು ಇದ್ದರೆ ಈ ಮಾಸದಲ್ಲಿ ಮಾಡುವುದು ಒಳ್ಳೆಯದು. ಈ ಮಾಸದಲ್ಲಿ ತುಲಾ ರಾಶಿ ಅವರ ಭವಿಷ್ಯ ಹೇಗಿದೆ, ಗ್ರಹ ಗತಿಗಳ ಚಲನ ವಲನಗಳನ್ನು ತಿಳಿಯೋಣ.ಏಪ್ರಿಲ್ ತಿಂಗಳಲ್ಲಿ ಕೆಲವು ಗ್ರಹಗಳು ಬದಲಾವಣೆ ಆಗಿದ್ದು ಅವು ಮೇ ತಿಂಗಳಲ್ಲಿ ಆಗುತ್ತಿಲ್ಲ. ಏಪ್ರಿಲ್ 24 ನೇ ತಾರೀಖು ಬುಧ ಗ್ರಹವು ವೃಷಭ ರಾಶಿಗೆ ಪ್ರವೇಶಿದ್ದಾರೆ ಆದ್ದರಿಂ ಬದಲಾವಣೆ ಮಾಡುತ್ತಿಲ್ಲ.
ಹಾಗೆಯೇ ಏಪ್ರಿಲ್ 27 ನೇ ತಾರೀಖು ಶುಕ್ರ ಮೀನ ರಾಶಿಗೆ ಪ್ರವೇಶಿಸುತ್ತಾರೆ ಉಚ್ಚ ಸ್ಥಾನಕ್ಕೆ ಹಾಗೆಯೇ ಮೇ 23 ನೇ ತಾರೀಖು ಮೀನ ರಾಶಿಯಿಂದ ಮೇಷ ರಾಶಿಗೆ ಬಂದರು ಅವರು ಒಳ್ಳೆಯ ಫಲವನ್ನೆ ಕೊಡುವ ಸ್ಥಾನದಲ್ಲಿಯೆ ಇರುತ್ತಾರೆ. ಏಪ್ರಿಲ್ 28 ರಂದು ಶನಿ ಕುಂಭ ರಾಶಿಗೆ ಪ್ರವೇಶ ಮಾಡುತ್ತಾರೆ. ಮೇ ತಿಂಗಳಲ್ಲಿ ಆಗುವ ಬದಲಾವಣೆಗಳು ಎಂದರೆ ಮೇ 14 ನೇ ತಾರೀಖು ಸುರ್ಯ ವೃಷಭ ರಾಶಿಗೆ ಪ್ರವೇಶ, 17 ರಂದು ಕುಜ ಮೀನ ರಾಶಿಗೆ ಪ್ರವೇಶ. ಇದು ಮೇ ತಿಂಗಳಲ್ಲಿ ಆಗುವ ಬದಲಾವಣೆಗಳು.
ಮೇ ತಿಂಗಳಲ್ಲಿ ತುಲಾ ರಾಶಿಯ ರಾಶ್ಯಾದಿಪತಿ ಶುಕ್ರ. ರಾಶ್ಯಾಧಿಪತಿ, ಅಷ್ಟಮಾಧಿಪತಿ ಮತ್ತು ನಿಮ್ಮ ಅದೃಷ್ಟಾಧಿಪತಿ ಅಗಿರುವಂತಹ ಶುಕ್ರ ಪ್ರಸ್ತುತ ಉಚ್ಚ ಸ್ಥಾನದಲ್ಲಿ ಇದ್ದಾನೆ. ರಾಶ್ಯಾಧಿಪತಿ ಬಲಿಷ್ಠ, ಆಯುಷ್ಯಾಧಿಪತಿ ಬಲಿಷ್ಠ, ಆರೋಗ್ಯಾಧಿಪತಿಯು ಬಲಿಷ್ಠ. ಬಲಿಷ್ಠಾಧಿಪತಿ ಆಗಿ ಇರುವ ಶುಕ್ರನು ತುಲಾ ರಾಶಿಯ ರಾಶ್ಯಾಧಿಪತಿ. ಹಾಗಾಗಿ ಶುಕ್ರನ ಬಲ ತುಲಾ ರಾಶಿ ಅವರಿಗೆ ತುಂಬಾ ಚೆನ್ನಾಗಿ ಇದೆ ಇದು ಮೊದಲನೆಯದು. ಎರಡನೆಯದು ದ್ವಿತೀಯ ಹಾಗೂ ಸಪ್ತಮಾಧಿಪತಿ, ಕುಂಟುಂಬ ಧನ ಸ್ಥಾನ ಮತ್ತು ವಾಕ್ ಮತ್ತು ವಿದ್ಯಾಭ್ಯಾಸ ಸ್ಥಾನ ತುಂಬ ಚೆನ್ನಾಗಿ ಇದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ಸಂಪೂರ್ಣವಾಗಿ ವೀಕ್ಷಿಸಿ.