ಬೆಲ್ಲ ಮತ್ತು ಶೇಂಗಾ ಇವತ್ತೇ ತಿನ್ನಿ ಯಾಕಂದ್ರೆ….ನಮಸ್ತೆ ಸ್ನೇಹಿತರೆ, ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಕಡಲೆಕಾಯಿಬೀಜ ಗಳು ಆರೋಗ್ಯವನ್ನು ಸುಧಾರಿಸಲು ತುಂಬಾ ಸಹಕಾರಿಯಾಗಿದೆ. ಶೇಂಗಾ ಎಂದು ಕರೆಯಲ್ಪಡುವ ಈ ಬೀಜಗಳು ದೀರ್ಘಕಾಲ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಕೆಲಸ ಮಾಡುತ್ತವೆ. ಪ್ರತಿದಿನ ಸುಮಾರು 10 ಗ್ರಾಂನಷ್ಟು ಕಡಲೆಕಾಯಿ ಬೀಜಗಳನ್ನು ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಉಪಯೋಗಗಳನ್ನು ನಾವು ಪಡೆಯಬಹುದಾಗಿದೆ. ಶೇಂಗಾ ಬೀಜವನ್ನು ಬೇಯಿಸಿ ತಿನ್ನುವುದರಿಂದ ತುಂಬಾ ಒಳ್ಳೆಯದು. ಕ್ಯಾನ್ಸರ್ ನಂತಹ ಅಪಾಯಕಾರಿ ಮಾರಣಾಂತಿಕ ರೋಗ ನಿವಾರಣೆಗೆ ಸಹಕಾರಿಯಾಗಿದೆ, ಕ್ಯಾನ್ಸರ್ ಜೀವಕೋಶಗಳು ದೇಹದಲ್ಲಿ ಬೆಳವಣಿಗೆ ಆಗುವುದನ್ನು ತಡೆಗಟ್ಟುವುದರ ಪ್ರಮುಖ ಪಾತ್ರವನ್ನು ಈ ಶೇಂಗಾಬೀಜಗಳು ವಹಿಸುತ್ತದೆ. ಶೇಂಗಾ ಬೀಜಗಳಲ್ಲಿ ಫೈಬರ್ ಅಂಶ ಅಧಿಕವಾಗಿದ್ದು, ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಜೊತೆಗೆ ದೇಹದ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಶೇಂಗಾ ಬೀಜಗಳಲ್ಲಿ ಹೇರಳವಾದ ವಿಟಮಿನ್, ಮಿನರಲ್ಸ್, ಆಂಟಿಆಕ್ಸಿಡೆಂಟ್, ಅಂಶಗಳು ಇರುವುದರಿಂದ ದೇಹವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಶೇಂಗಾ ಬೀಜಗಳನ್ನು ತಾಯಿಯ ಎದೆ ಹಾಲು ಪ್ರಮಾಣ ಹೆಚ್ಚಿಸಲು ಬಳಸುತ್ತಾರೆ. ಜೊತೆಗೆ ಮೂಳೆ ಸಮಸ್ಯೆಗಳಿಗೆ ಮೂಳೆಯನ್ನು ಬಲಪಡಿಸಲು.
ಮಹಿಳೆಯರಲ್ಲಿ ಕಂಡುಬರುವ ಮುಟ್ಟಿನ ಸಮಸ್ಯೆಗಳಿಗೆ ಶೇಂಗಾ ಬೀಜಗಳನ್ನು ಪರಿಹಾರವಾಗಿ ಬಳಸಲಾಗುತ್ತದೆ. ಶೇಂಗಾ ಬೀಜಕ್ಕೆ ನಮ್ಮ ಕರ್ನಾಟಕದಲ್ಲಿಯೇ ಹಲವಾರು ಹೆಸರುಗಳಿವೆ. ಇದರ ಬಗ್ಗೆ ಹೆಚ್ಚು ಅರಿಯದವರಿಗೆ ಇದು ಬಸ್ ಸ್ಟ್ಯಾಂಡುಗಳಲ್ಲಿ ಕೂಗುತ್ತಾ ಹುರಿದ ಶೇಂಗಾವನ್ನು ಮಾರುವವರಿಂದ ನೀಡಲ್ಪಟ್ಟ ಹೆಸರು ಟೈಂ ಪಾಸ್ ಕಡ್ಲೆ ಕಾಯಿ ಅಂಗಡಿಗಳಲ್ಲಿ ಕಡ್ಲೆಬೀಜ, ಉತ್ತರ ಕರ್ನಾಟಕದ ಕೆಲವೆಡೆ ಪುಟಾಣಿ, ಕೆಲವೆಡೆ ವಟಾಣಿ. ಕನ್ನಡ ಪುಸ್ತಕಗಳಲ್ಲಿ ಇದಕ್ಕೆ ಹೆಸರು ನೆಲಗಡಲೆ (ನೆಲದಾಚೆಯಿಂದ ಬಂದ ಕಡಲೆಯೇ ನೆಲಗಡಲೆ).
ಬರೆ ಕರ್ನಾಟದಲ್ಲಿಯೇ ಹೀಗಿದ್ದರೆ ವಿಶ್ವಮಟ್ಟದಲ್ಲಿ ಇದಕ್ಕೆ ಇನ್ನೆಷ್ಟು ಹೆಸರಿರಬಹುದೋ ಗೊತ್ತಿಲ್ಲ. ಆದರೆ ವಿಶ್ವಮಟ್ಟದಲ್ಲಿ ಪೀನಟ್ಸ್ ಎಂಬ ಹೆಸರಿನಿಂದ ಶೇಂಗಾ ಪ್ರಸಿದ್ಧವಾಗಿದೆ. ಭಾರತದಾದ್ಯಂತ ಈ ಬೀಜವನ್ನು ‘ಮೂಂಗ್ ಫಲಿ’ ಎಂದು ಗುರುತಿಸಲಾಗುತ್ತದೆ. ಈ ಶೇಂಗಾ ಬೀಜಗಳನ್ನು ಹಲವಾರು ವಿಧಗಳಲ್ಲಿ ಸೇವಿಸಲಾಗುತ್ತದೆ. ಆದರೆ ಒಂದು ಮಾತು ಇದೆ ಶೇಂಗಾ ಬೀಜಗಳನ್ನು ಸೇವನೆ ಮಾಡಿದ ನಂತರ ನೀರು ಕುಡಿಯಬಾರದು ಎಂದು ಹೇಳಲಾಗುತ್ತದೆ. ಅದು ಏಕೆ ಶೇಂಗಾ ಬೀಜಗಳನ್ನು ಸೇವನೆ ಮಾಡಿದ ನಂತರ ನೀರು ಕುಡಿಯಬಾರದು? ಜೊತೆಗೆ ಶೇಂಗಾಬೀಜ ಜೊತೆಗೆ ಬೆಲ್ಲವನ್ನು ಏಕೆ ಜೊತೆಗೆ ಸೇವನೆ ಮಾಡಬೇಕು? ಇದರಿಂದ ಆಗುವ ಪ್ರಯೋಜನವೇನು? ಈ ವಿಷಯಗಳನ್ನು ತಿಳಿಯಬೇಕೆಂದರೆ, ಮೇಲೆ ನೀಡಿರುವ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಿ ಧನ್ಯವಾದಗಳು.