ಒಂದೇ ಸೀರಿಯಲ್ ನಲ್ಲಿ ಒಟ್ಟಾಗಿ ನಟಿಸಿ ಪ್ರೀತಿಸಿ ಮದುವೆಯಾದ ಜೋಡಿಗಳು.ಸೀರಿಯಲ್ ನಲ್ಲಿ ನಟನೆ ಮಾಡುವಾಗ ಒಟ್ಟಾಗಿ ನಟಿಸಿದ ನಂತರ ಅವರನ್ನು ಕೂಡಾ ಪ್ರೀತಿಸಿ ಮುಂದಿನ ಜೀವನದಲ್ಲಿ ತಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡಂತಹ ಬಹಳಷ್ಟು ಜೋಡಿಗಳನ್ನು ನಾವು ನೋಡಿದ್ದೇವೆ. ಹಾಗಾಗಿ ಇಂದು ಅಂತಹ ಜೋಡಿಗಳು ಯಾರು ಅವರು ಯಾವ ಧಾರವಾಹಿ ನಟನೆ ಮಾಡಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ. ಮೊದಲನೇದಾಗಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇವರಿಬ್ಬರೂ ಕೂಡ ನಂದಗೋಕುಲ ಎಂಬ ಧಾರಾವಾಹಿಯಲ್ಲಿ ಮೊಟ್ಟಮೊದಲ ಬಾರಿಗೆ ನಟನೆಯನ್ನು ಪ್ರಾರಂಭ ಮಾಡುತ್ತಾರೆ. ಇದು ಮೊದಲು ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಹುನಿರೀಕ್ಷಿತ ಧಾರವಾಹಿ ಇದರ ಧಾರಾವಾಹಿಯಲ್ಲಿ ನಟನೆ ಮಾಡಿದ ನಂತರ ಇವರಿಬ್ಬರೂ ಕೂಡ ಮೊಗ್ಗಿನ ಮನಸ್ಸು ಎಂಬ ಸಿನಿಮಾದಲ್ಲಿ ಮೊಟ್ಟಮೊದಲಾಗಿ ನಾಯಕ ಮತ್ತು ನಾಯಕಿಯಾಗಿ ಅಭಿನಯ ಮಾಡುತ್ತಾರೆ.
ಎರಡನೆಯದಾಗಿ ಪ್ರಶಾಂತ್ ಮತ್ತು ರೂಪ ಇವರಿಬ್ಬರೂ ಕೂಡ ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದಂತೆ ಸಿಲ್ಲಿ ಮತ್ತು ಲಲ್ಲಿ ಎಂಬ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವಾಗ ಇವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ ತದನಂತರ ಈ ದಂಪತಿಗಳು ಮದುವೆಯಾಗುತ್ತಾರೆ ಇದಾದ ಮೇಲೆ ಇವರು ಎಲ್ಲಿಯೂ ಕೂಡ ಕಾಣಿಸಿಕೊಳ್ಳುವುದಿಲ್ಲ ಆದರೆ ಇದೀಗ ರಾಜ ರಾಣಿ ಎಂಬ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಮುಂದಿನ ಜೋಡಿ ಕುಲವಧು ಖ್ಯಾತಿಯ ದೀಪಿಕಾ ಹಾಗೂ ಆಕಾಶ್ ಇವರಿಬ್ಬರೂ ಕೂಡ ಪ್ರೀತಿಸಿ ಮದುವೆಯಾದಂತಹ ಜೋಡಿ ಅಷ್ಟೇ ಅಲ್ಲದೆ ಈ ಜೋಡಿಯು ಕೂಡ ರಾಜಾ ರಾಣಿ ಎಂಬ ಕಾರ್ಯಕ್ರಮದಲ್ಲಿ ಪ್ರತಿಸ್ಪರ್ಧಿಗಳು ಆಗಿದ್ದರು. ಐಶ್ವರ್ಯ ಸಾಲಿಮಠ ಮತ್ತು ವಿನಯ್ ಜೋಡಿ ಇವರು ಮಹಾಸತಿ ಎಂಬ ಧಾರಾವಾಹಿಯಲ್ಲಿ ಬಹಳ ಪ್ರಸಿದ್ಧಿ ಪಡೆದಂತಹ ಜೋಡಿ.
ಮುಂದಿನ ಜೋಡಿ ಕವಿತಾ ಗೌಡ ಮತ್ತು ಚಂದನ್ ಗೌಡ ಇವರಿಬ್ಬರೂ ಕೂಡ ಲಕ್ಷ್ಮಿಬಾರಮ್ಮ ಎಂಬ ಧಾರಾವಾಹಿಯಲ್ಲಿ ಒಟ್ಟಾಗಿ ನಟನೆ ಮಾಡುತ್ತಾರೆ ತದನಂತರ ಪ್ರೀತಿಸಿ ಮದುವೆಯಾಗುತ್ತಾರೆ ಮದುವೆಯಾದ ನಂತರ ಕುಕ್ಕು ವಿಥ್ ಕಿರಿಕ್ ಎಂಬ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸುತ್ತಾರೆ. ನಂತರದ ಜೋಡಿ ಸಂಘರ್ಷ ಮತ್ತು ದಾಸ ಪುರಂದರ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುತ್ತಿರುವಂತಹ ಲಾವಣ್ಯ ಅವರು ತಮ್ಮೊಟ್ಟಿಗೆ ಕೆಲಸ ಮಾಡುತ್ತಿದ್ದಂತಹ ಶಿಶಿರ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇದೆ ರೀತಿಯ ಇನ್ನಷ್ಟು ಜೋಡಿ ಮಾಹಿತಿ ತಿಳಿಯಲು ಕೆಳಗಿನ ವಿಡಿಯೋ ನೋಡಿ.