ಪತಿ ಜೊತೆಗೆ ಕುಳಿತು ಆಹಾರ ಸೇವಿಸುವ ಪ್ರತಿಯೊಬ್ಬ ಗೃಹಿಣಿಯ ತಿಳಿದುಕೊಳ್ಳಲೇ ಬೇಕಾದ ವಿಷಯ ಇದು.ನಮ್ಮ ಸಂಸ್ಕೃತಿಯಲ್ಲಿ ಆಹಾರಕ್ಕೆ ತನ್ನದೇ ಆದ ಒಂದು ಗೌರವವಿದೆ ಹಾಗೂ ಮಹತ್ವದ ಸ್ಥಾನವಿದೆ. ನಮ್ಮಲ್ಲಿ ಆಹಾರ ತಯಾರಿಸುವ ಕ್ರಿಯೆಯಿಂದ ಅದನ್ನು ಬಡಿಸುವಾಗ ಮತ್ತು ಸೇವಿಸುವವರೆಗೂ ಒಂದು ರೀತಿಯ ಪದ್ಧತಿಯನ್ನು ಹಿರಿಯರು ಹಾಕಿಕೊಟ್ಟಿದ್ದಾರೆ. ಆ ಪದ್ಧತಿಯನ್ನು ಅನುಸರಿಸಿ ನಡೆದರೆ ಆರೋಗ್ಯವಾಗಿಯೂ ಇರುತ್ತೇವೆ ಹಾಗೂ ಆಹಾರಕ್ಕೆ ಗೌರವ ನೀಡಿದಂತೆಯೂ ಆಗುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮೊದಲಿಂದಲೂ ನಡೆದುಕೊಂಡು ಬಂದಿರುವ ಹಾಗೆ ಆಹಾರ ತಯಾರಿಸುವ ಮೊದಲು ಮನೆಯಲ್ಲಿ ಆಹಾರ ತಯಾರಿಸುವ ಗೃಹಿಣಿಯು ಸ್ನಾನ ಮಾಡಿದ ಬಳಿಕವೇ ಅಡುಗೆ ಮನೆಗೆ ಹೋಗಬೇಕು ಹಾಗೂ ಪ್ರೀತಿಯಿಂದ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳನ್ನು ಇಟ್ಟುಕೊಂಡು ಮಂತ್ರಗಳನ್ನು ಜಪಿಸುತ್ತಾ ಆಹಾರ ತಯಾರಿಸಬೇಕು. ಯಾಕೆಂದರೆ ಆಹಾರ ತಯಾರಿಸುವ ಭಾವನೆಗಳು ಹೇಗಿರುತ್ತವೆ ಎನ್ನುವುದು ಆಹಾರವನ್ನು ಸೇರಿಸಿದವರ ಆರೋಗ್ಯದ ಮೇಲೆ ಹಾಗೂ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದನ್ನು ನಮ್ಮ ಹಿರಿಯರು ಆಗಲೇ ಹೇಳಿದ್ದರು.
ಹಾಗೂ ತಯಾರಿಸಿದ ಆಹಾರವನ್ನು ಬಡಿಸುವಾಗ ಪದ್ಧತಿಯ ಅನುಸಾರ ಮೊದಲು ಸಿಹಿಯನ್ನು ಬಡಿಸಬೇಕು ನಂತರ ಉಳಿದ ಪದಾರ್ಥಗಳನ್ನು ಬಡಿಸಬೇಕು. ಊಟಕ್ಕೆ ಮೊದಲು ನೀರು ಇಟ್ಟುಕೊಂಡಿರಬೇಕು ಹಾಗೂ ಊಟಕ್ಕೆ ಕುಳಿತುಕೊಳ್ಳುವ ಸ್ಥಳ ಸ್ವಚ್ಛವಾಗಿರಬೇಕು ನೆಲದ ಮೇಲೆ ಚಾಪೆ ಹಾಕಿ ಕಾಲನ್ನು ಮಡಚಿ ಕುಳಿತು ಆಹಾರ ಸೇವಿಸಬೇಕು, ಎರಡು ಕೈಗಳನ್ನು ಚೆನ್ನಾಗಿ ಸ್ವಚ್ಛ ಮಾಡಿಕೊಂಡ ಬಳಿಕ ಊಟಕ್ಕೆ ಬರಬೇಕು ಹಾಗೂ ಆಹಾರವನ್ನು ಕೈಯಲ್ಲಿ ಬೆರಳುಗಳ ಸಹಾಯದಿಂದ ಸೇವಿಸಬೇಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಆಹಾರ ಸೇವಿಸುವ ಮೊದಲು ತಾಯಿ ಅನ್ನಪೂರ್ಣೇಶ್ವರಿ ಯಲ್ಲಿ ಪ್ರಾರ್ಥನೆ ಮಾಡಿ ಮಂತ್ರಗಳನ್ನು ಹೇಳಬೇಕು ಹಾಗೂ ಈ ಹೊತ್ತಿನ ಊಟ ದೊರೆಯಲು ತನಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಹೇಳಬೇಕು. ನಾವು ಆಹಾರ ಸೇವಿಸುವುದರ ಜೊತೆಗೆ ನಮ್ಮ ಮನೆಯಲ್ಲಿ ಸಾಕಿರುವ ಪ್ರಾಣಿಗಳು ಹಾಗೂ ಹೊರಗಡೆ ಇರುವ ಕೆಲವು ಪಕ್ಷಿಗಳಿಗೂ ಸಹ ಕೈಲಾದಷ್ಟು ಆಹಾರವನ್ನು ಕೊಡಬೇಕು.
ಮನೆಮಂದಿಯಲ್ಲಾ ಒಟ್ಟಿಗೆ ಕುಳಿತು ಊಟ ಮಾಡಬೇಕು. ಊಟ ಮಾಡುವಾಗ ಮನಸ್ಸು ಶಾಂತವಾಗಿರಬೇಕು ಕೋಪದಲ್ಲಿ ಅಥವಾ ಮನಸ್ಸಿನಲ್ಲಿ ಕಸಿವಿಸಿ ಇಟ್ಟುಕೊಂಡು ಊಟ ಮಾಡಬಾರದು. ಸೂರ್ಯ ಹುಟ್ಟಿದ ಎರಡು ತಾಸುಗಳ ಬಳಿಕ ಹಾಗೂ ಸೂರ್ಯಾಸ್ತದ ನಂತರ ಎರಡು ತಾಸುಗಳ ಒಳಗಡೆ ಆಹಾರ ಸೇವನೆ ಮುಗಿದಿರಬೇಕು. ಈ ರೀತಿಯಾಗಿ ಇನ್ನು ಹತ್ತು ಹಲವು ರೂಢಿಗಳು ಮೊದಲಿನಿಂದಲೂ ನಮ್ಮ ಭಾರತೀಯ ಪರಂಪರೆಯಲ್ಲಿ ಇದೆ. ಹಾಗೆಯೇ ಪತ್ನಿಯಾದವಳು ಯಾವಾಗ ಊಟ ಮಾಡಬೇಕು ಹಾಗೇ ಪತಿಯ ಜೊತೆ ಕುಳಿತು ಊಟ ಮಾಡಬಾರದು ಎನ್ನುವ ನಿಯಮ ಕೂಡ ಇದೆ. ಇದರ ಬಗ್ಗೆ ಸಂಪೂರ್ಣವಾಗಿ ಕಾರಣವನ್ನು ತಿಳಿದುಕೊಳ್ಳಲು ವೀಡಿಯೋವನ್ನು ಪೂರ್ತಿಯಾಗಿ ನೋಡಿ.