ಇವರನ್ನು ದೇವರು ಅಂತ ಯಾಕೆ ಪೂಜಿಸುತ್ತಾರೆ ಗೊತ್ತಾ ಇವರಿಗೋಸ್ಕರ ಎಲ್ಲರೂ ಯಾಕೆ ಪ್ರಾಣ ಕೊಡುತ್ತಾರೆ ನೋಡಿ.ಈ ಕಥೆಯನ್ನು ಕೇಳಿದರೆ ನಿಜಕ್ಕೂ ಕೂಡ ನಿಮಗೆ ಒಂದು ರೀತಿಯಲ್ಲಿ ಭಾಸವಾಗಬಹುದು ಏಕೆಂದರೆ ಒಂದು ಪುಟ್ಟ ಹಳ್ಳಿಯಲ್ಲಿ ಶಿಕ್ಷಕರೊಬ್ಬರು ಶಾಲೆಯಲ್ಲಿ ಕುಳಿತಿದ್ದ ಎಲ್ಲ ಮಕ್ಕಳಿಗೂ ಕೂಡ ಗಣಿತದ ಪಾಠವನ್ನು ಹೇಳಿಕೊಡುತ್ತಿದ್ದರು. ನಂತರ ಶಿಕ್ಷಕರು ಬೋರ್ಡಿನ ಮೇಲೆ ಕೆಲವೊಂದಷ್ಟು ಗಣಿತದ ಲೆಕ್ಕ ಗಳನ್ನು ಬರೆದು ಇದನ್ನು ಯಾರಾದರೂ ಪರಿಹರಿಸುತ್ತಿರ ಅಂತ ಅಲ್ಲಿ ಕುಳಿತಿದ್ದಂತಹ ಮಕ್ಕಳಿಗೆ ಶಿಕ್ಷಕರು ಹೇಳುತ್ತಾರೆ. ಆದರೆ ಅಲ್ಲಿ ಇರುವಂತಹ ಯಾವ ಮಕ್ಕಳಿಗೂ ಕೂಡ ಈ ಒಂದು ಲೆಕ್ಕವನ್ನು ಪರಿಹರಿಸುವಂತಹ ಉತ್ತರ ತಿಳಿದಿರುವುದಿಲ್ಲ ಹಾಗಾಗಿ ಶಿಕ್ಷಕರು ಕೇಳುವಂತಹ ಪ್ರಶ್ನೆಗೆ ಉತ್ತರ ನೀಡದೆ ಮೌನವಾಗಿ ಕುಳಿತು ಕೊಳ್ಳುತ್ತಾರೆ. ಆದರೆ ಈ ಎಲ್ಲಾ ಮಕ್ಕಳಿಗಿಂತ ಕೊಠಡಿಯ ಮೂಲೆಯಲ್ಲಿ ಕುಳಿತಿದ್ದಂತಹ ಒಬ್ಬ ವ್ಯಕ್ತಿ ಮಾತ್ರ ನಾನು ಈ ಪ್ರಶ್ನೆಗೆ ಉತ್ತರವನ್ನು ನೀಡುತ್ತೇನೆ ಅಂತ ಬಹಳ ಧೈರ್ಯದಿಂದ ಕೈಯನ್ನು ಮೇಲಕ್ಕೆ ಎತ್ತುತ್ತಾನೆ.ಇದನ್ನು ಕೇಳಿದಂತಹ ಶಿಕ್ಷಕರು ಖುಷಿ ಪಡುತ್ತಾರೆ ತದನಂತರ ಆತನನ್ನು ಕರೆದು ಬೋರ್ಡಿನಲ್ಲಿ ಬಳಿ ಒಂದು ಲೆಕ್ಕವನ್ನು ಪರಿಹರಿಸುವಂತೆ ಹೇಳುತ್ತಾರೆ ಆತ ಅಲ್ಲಿಂದ ಮೇಲೆ ಎದ್ದು ಇನ್ನೇನು ಬೋರ್ಡಿನ ಸಮೀಪ ಬರಬೇಕು
ಅಷ್ಟರ ಹೊತ್ತಿಗೆ ಅಲ್ಲಿ ಇದ್ದಂತಹ ಎಲ್ಲ ಮಕ್ಕಳು ಕೂಡ ಈತನ ವಿರುದ್ಧ ಗಲಾಟೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಅಷ್ಟಕ್ಕೂ ಅಲ್ಲಿ ಇದ್ದಂತಹ ಎಲ್ಲ ಮಕ್ಕಳು ಕೂಡ ಈತನ ವಿರುದ್ಧ ಅಸಮಾಧಾನ ತೋರಿಸುವುದಕ್ಕೆ ಕಾರಣ ಏನೆಂದರೆ ಈ ಹುಡುಗ ಬಂದು ಬೋರ್ಡಿನಲ್ಲಿ ನಿಂತುಕೊಂಡು ಲೆಕ್ಕವನ್ನು ಪರಿಹರಿಸುತ್ತಾನೆ ಅಂತ ಅಲ್ಲ. ಬದಲಿಗೆ ಈ ವ್ಯಕ್ತಿ ಬೋರ್ಡನ್ನು ಮತ್ತು ಬಳಪವನ್ನು ಮುಟ್ಟಿದರೆ ನಾವು ಅದನ್ನು ಕೂಡ ಮುಟ್ಟಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಈ ರೀತಿಯಾದಂತಹ ಅಸಮಾಧಾನವನ್ನು ಹೊರ ಹಾಕುತ್ತಾರೆ.
ಏಕೆಂದರೆ ಈತ ಒಬ್ಬ ದಲಿತ ಆಗಿದ್ದ ಈ ಒಂದು ಕಾರಣಕ್ಕಾಗಿಯೇ ಆತನನ್ನು ಯಾರೂ ಕೂಡ ಮುಟ್ಟುತ್ತಿರಲಿಲ್ಲ ಮುಟ್ಟಿಸಿಕೊಳ್ಳುತ್ತಿರಲಿಲ್ಲ ಹಾಗಾಗಿಯೇ ಶಾಲೆಯ ಕೊಠಡಿಯಲ್ಲಿ ಪ್ರತ್ಯೇಕವಾಗಿ ಆತ ಕುಳಿತುಕೊಳ್ಳುತ್ತಿದ್ದ. ಈ ಶಾಲೆಯ ಕೊಠಡಿಯ ಒಳಗೆ ಒಂದು ನೀರಿನ ಮಡಿಕೆ ಇತ್ತು ಅಲ್ಲಿ ಇದ್ದಂತಹ ವಿದ್ಯಾರ್ಥಿಗೆ ಬಾಯಾರಿಕೆಯಾದಾಗ ನೀರಿನ ಮಡಿಕೆಯ ಬಳಿ ಹೋಗಿ ನೀರನ್ನು ಸೇವನೆ ಮಾಡುತ್ತಿದ್ದರು. ಆದರೆ ಯಾವುದೇ ಕಾರಣಕ್ಕೂ ಕೂಡ ಈ ಯುವಕ ನೀರನ್ನು ಸೇವನೆ ಅವಕಾಶವನ್ನು ನೀಡುತ್ತಿರಲಿಲ್ಲ. ಒಂದು ವೇಳೆ ಈತನಿಗೆ ಬಾಯಾರಿಕೆ ಅಂತ ಹೇಳಿದಾಗ ಅಲ್ಲಿಯ ಪಕ್ಕದಲ್ಲಿ ಇದ್ದಂತಹ ವ್ಯಕ್ತಿಯೊಬ್ಬನು ಮಡಕೆಯ ಒಳಗಿಂದ ನೀರನ್ನು ತೆಗೆದು ಮೇಲಿಂದ ಕೆಳಕ್ಕೆ ಅದನ್ನು ಹಾಕುತ್ತಿದ್ದ ಅದನ್ನು ಕೈಗಳಿಂದ ಸಂಗ್ರಹಿಸಿ ಆತ ಸೇವನೆ ಮಾಡುತ್ತಿದ್ದ.