ಇದೇ ಏಪ್ರಿಲ್ 30ರಂದು ಸೂರ್ಯಗ್ರಹಣ ಉಂಟಾಗಲಿದೆ ಯಾವ ರಾಶಿಯವರಿಗೆ ಶುಭ ಮತ್ತು ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ತಪ್ಪದೇ ನೋಡಿ.ಸೂರ್ಯಗ್ರಹಣ 2022ರ ಮೊದಲ ಸೂರ್ಯ ಗ್ರಹಣವು ಏಪ್ರಿಲ್ 30 ಶನಿವಾರದಂದು ಗೋಚರಿಸಲಿದೆ ಆದರೆ ಈ ಒಂದು ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ ಬದಲಾಗಿ ವಿದೇಶದಲ್ಲಿ ಗೋಚರಿಸುತ್ತದೆ ಎಂಬುದು ತಿಳಿದು ಬಂದಿದೆ. ಅಂಟಾರ್ಟಿಕಾ, ಚಿಲ್ಲಿ, ಅರ್ಜೆಂಟೆನಿಯಾ, ದಕ್ಷಿಣ ಅಮೆರಿಕದ ಕೆಲವು ಭಾಗದಲ್ಲಿ ಮತ್ತು ಇದೇ ರೀತಿಯಾದಂತಹ ಇನ್ನಷ್ಟು ಭಾಗದಲ್ಲಿ ಸೂರ್ಯಗ್ರಹಣ ಕಂಡು ಬರುವುದನ್ನು ನಾವು ನೋಡಬಹುದಾಗಿದೆ. ಇದನ್ನು ಭಾಗಶಹಃ ಸೂರ್ಯಗ್ರಹಣ ಎಂದು ಕಾಯಲಾಗುತ್ತದೆ ಇನ್ನು ಈ ಒಂದು ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ ನಾರ್ಥ್ ಅಮೆರಿಕದಲ್ಲಿ ಗೋಚರಿಸುತ್ತದೆ. ಆದರೂ ಕೂಡ ಭಾರತೀಯ ಕಾಲಮಾನದ ಪ್ರಕಾರ ತೆಗೆದುಕೊಂಡರೆ ಇದು ಏಪ್ರಿಲ್ 30 ಮಧ್ಯರಾತ್ರಿ ಅಂದರೆ ಮೇ ಒಂದನೇ ತಾರೀಕು ಭಾನುವಾರ 12 ಗಂಟೆ ಹದಿನೈದು ನಿಮಿಷಕ್ಕೆ ಗೋಚರಿಸುತ್ತದೆ ಎಂದು ಕಂಡುಬರುತ್ತದೆ.
ಎರಡು ಗಂಟೆ 11 ನಿಮಿಷ ಈ ಗ್ರಹಣ ಇರುವುದನ್ನು ನಾವು ನೋಡಬಹುದಾಗಿದೆ ಇದರ ಜೊತೆಗೆ ಈ ಗ್ರಹಣ ಬಿಡುವಂತಹ ಕಾಲ ಸ್ಥಿತಿಯನ್ನು ನೋಡುವುದಾದರೆ 4 ಗಂಟೆ 8 ನಿಮಿಷಕ್ಕೆ ಗ್ರಹಣ ಬಿಡುತ್ತದೆ. ಇದು ಭಾಗಶಹ ಗ್ರಹಣ ಆಗಿರುವುದರಿಂದ ಭಾರತೀಯದಲ್ಲಿ ಈ ಒಂದು ಗ್ರಹಣದ ಆಚರಣೆ ಇರುವುದಿಲ್ಲ ಈ ಒಂದು ಗ್ರಹಣವು ಶನಿವಾರ ಮಧ್ಯರಾತ್ರಿ ಪ್ರಾರಂಭವಾಗಿ ಭಾನುವಾರ ಬೆಳಗಿನ ಜಾವ ಮುಗಿಯುತ್ತದೆ. ಈ ಸಮಯದಲ್ಲಿ ಕೃಷ್ಣಪಕ್ಷದ ಅಮಾವಾಸ್ಯೆ ಬರುವುದನ್ನು ನೋಡಬಹುದಾಗಿದೆ ಜೊತೆಗೆ ಭರಣಿ ನಕ್ಷತ್ರವು ಕೂಡ ಇರುತ್ತದೆ ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭರಣಿ ನಕ್ಷತ್ರವನ್ನು ಯಮ ನಕ್ಷತ್ರ ಅಂತಾನೂ ಕೂಡ ಕರೆಯುತ್ತೇವೆ. ಈ ಒಂದು ಗ್ರಹಣವು ಮೇಷರಾಶಿಯಲ್ಲಿ ಸಂಭವಿಸುತ್ತದೆ ಯಮ ರಾಶಿ ಮತ್ತು ಅಗ್ನಿ ತತ್ವದಲ್ಲಿ ಈ ಒಂದು ಗ್ರಹಣವು ಗೋಚರಿಸುತ್ತದೆ.
ಈ ಗ್ರಹಣ ನಡೆಯುತ್ತಿರುವುದರಿಂದ ಕೆಲವೊಂದಷ್ಟು ಅಡೆತಡೆಗಳು ಉಂಟಾಗಬಹುದು ಅದು ಯಾವುದು ಅಂದರೆ ಅಗ್ನಿ ಅವಗಡಗಳು ನಡೆಯುವುದು ಈಗಾಗಲೇ ಸಾಕಷ್ಟು ಅಗ್ನಿ ಅವಗಡಗಳು ನಡೆದಿರುವಂತಹ ಸಾಕಷ್ಟು ಉದಾಹರಣೆಗಳನ್ನು ನೋಡುತ್ತಿದ್ದೇವೆ ಸೂರ್ಯ ಗ್ರಹಣ ಆದಮೇಲೆ ಇದರ ಪರಿಸ್ಥಿತಿಯೂ ಕೂಡ ಹೆಚ್ಚಾಗಬಹುದು. ನಮಗೆ ಸೂರ್ಯಗ್ರಹಣ ಎಂಬುವುದು ಶನಿವಾರದ ದಿನ ಗೋಚರಿಸಿದರೆ ಅದು ಪ್ರಕೃತಿಗೆ ಮಾತ್ರ ಒಳ್ಳೆಯದಲ್ಲ ಬದಲಾಗಿ ಇಡೀ ಪ್ರಪಂಚಕ್ಕೆ ಒಳ್ಳೆಯದು ಎಂಬುದನ್ನು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಿರುವುದನ್ನು ನಾವು ನೋಡಬಹುದಾಗಿದೆ. ಸೂರ್ಯ ಗ್ರಹಣದಿಂದ ಯಾವ ರಾಶಿಗೆ ಅಶುಭ ಹಾಗೂ ಯಾವ ರಾಶಿಯವರಿಗೆ ಎಂಬುದನ್ನು ತಿಳಿಯಬೇಕಾದರೆ ಈ ಕೆಳಗಿನ ವಿಡಿಯೋವನ್ನು ನೋಡಿ.