ಇದನ್ನು ತಿನ್ನಿ ಬೇಗ ಮುದುಕರಾಗಲ್ಲ, ಕೂದಲು ಎಷ್ಟು ಉದ್ದ ಆಗುತ್ತೆ ನೋಡಿ, ಬಿಳಿ ಕೂದಲು ಕಪ್ಪು ಮಾಡುತ್ತೆ, ದಿನಾಲೂ ಒಂದು ಚಮಚ ಇದನ್ನು ತಿನ್ನಿ ನಿಮ್ಮ ಆಯಸ್ಸು ಹೆಚ್ಚುತ್ತದೆ.ಇತ್ತೀಚಿನ ದಿನದಲ್ಲಿ ಕೆಲವರು ಕೂದಲು ಉದುರುವ ಸಮಸ್ಯೆಯಿಂದ ತುಂಬಾನೇ ಬಾದೆ ಪಡುತ್ತಿದ್ದಾರೆ ಇನ್ನು ಕೆಲವರಂತೂ ಮುಖದ ಕಾಂತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಕಡಿಮೆ ವಯಸ್ಸಿನಲ್ಲಿ ಮುಖ ಸುಕ್ಕುಗಟ್ಟುವುದನ್ನು ನಾವು ನೋಡಬಹುದಾಗಿದೆ ಹಾಗಾಗಿ ಇಂದು ನಾವು ತಿಳಿಸುವಂತಹ ಮನೆ ಮದ್ದು ಸೇವನೆ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ, ಕೂದಲು ಉದ್ದವಾಗಿ ಬೆಳೆಯುತ್ತದೆ, ಅಷ್ಟೇ ಅಲ್ಲದೆ ನೀವೇನಾದರೂ ಬಿಳಿಕೂದಲ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಅದು ಕೂಡಾ ನಿವಾರಣೆಯಾಗುತ್ತದೆ. ಹಾಗಾಗಿ ಈ ಮನೆಮದ್ದನ್ನು ಯಾವ ರೀತಿಯಾಗಿ ಸೇವನೆ ಮಾಡಬೇಕು ಹಾಗೂ ಇದಕ್ಕೆ ಬೇಕಾಗುವಂತಹ ಪದಾರ್ಥಗಳು ಏನು ಎಂಬುದನ್ನು ನೋಡುವುದಾದರೆ. ಮೊದಲಿಗೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥ ಕಡಲೆಕಾಯಿಬೀಜ, ಎರಡನೆಯದಾಗಿ ಬಾದಾಮಿ, ಮೂರನೆಯದಾಗಿ ಸೂರ್ಯಕಾಂತಿ ಬೀಜಗಳು, ನಾಲ್ಕನೆಯದಾಗಿ ಒಣಕೊಬ್ಬರಿ, ಐದನೆಯದಾಗಿ ಬೆಲ್ಲೆ.
ಇದಿಷ್ಟು ಪದಾರ್ಥಗಳು ಕೂಡ ನಿಮಗೆ ಮನೆಮದ್ದು ಮಾಡುವುದಕ್ಕೆ ಬೇಕಾಗುತ್ತದೆ ಇನ್ನು ಮನೆಮದ್ದು ಮಾಡುವಂತಹ ವಿಧಾನ ನೋಡುವುದಾದರೆ ಅರ್ಧ ಕಪ್ ನಷ್ಟು ಕಡಲೇ ಬೀಜವನ್ನು ಹಾಕಿ ಇದನ್ನು ನಿಧಾನ ಉರಿಯಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ತದನಂತರ ಅದನ್ನು ತಣ್ಣಗಾಗಲು ಬಿಡಬೇಕು ಇದರ ಮೇಲೆ ಇರುವಂತಹ ಸಿಪ್ಪೆಯನ್ನು ತೆಗೆಯಬೇಕು. ನಂತರ ಅದೇ ಪ್ಯಾನ್ ಗೆ ಅರ್ಧ ಕಪ್ ನಷ್ಟು ಬಾದಾಮಿಯನ್ನು ಹಾಕಿ ಇದನ್ನು ಕೂಡ ನಿಧಾನವಾಗಿ ಹುರಿದುಕೊಳ್ಳಿ. ಕೊನೆಯದಾಗಿ ಕಾಲು ಕಪ್ ನಷ್ಟು ಸೂರ್ಯಕಾಂತಿ ಬೀಜವನ್ನು ಹಾಕಿ ಇದನ್ನು ಕೂಡ ಹುರಿದುಕೊಳ್ಳಬೇಕು ಈಗ ಮೂರು ಪದಾರ್ಥಗಳನ್ನು ಕೂಡ ತಣ್ಣಗಾಗುವುದಕ್ಕೆ ಬಿಡಬೇಕು.
ನಂತರ ಒಂದು ಮಿಕ್ಸಿ ಜಾರಿಗೆ ಈ ಮೂರು ಪದಾರ್ಥಗಳನ್ನು ಹಾಕಿ ಪೌಡರ್ ಮಾಡಿಕೊಳ್ಳಿ ಈಗ ಒಂದು ತಟ್ಟೆಗೆ ಈ ಪೌಡರ್ ಹಾಕಿ ಅದಕ್ಕೆ ಸ್ವಲ್ಪ ಒಣ ಕೊಬ್ಬರಿ 3 ಟೇಬಲ್ ಸ್ಪೂನ್ ನಷ್ಟು ಬೆಲ್ಲವನ್ನು ಹಾಕಿ ಇವೆಲ್ಲವನ್ನು ಕೂಡ ಸಂಪೂರ್ಣವಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದನ್ನು ಒಂದು ಡಬ್ಬದಲ್ಲಿ ಹಾಕಿ ಶೇಖರಣೆ ಮಾಡಿ ಈ ಒಂದು ಮಿಶ್ರಣವನ್ನು ಬೆಳಗಿನ ಸಮಯ ನೀವು ತಿಂಡಿ ಮಾಡುವುದಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಸೇವನೆ ಮಾಡಬಹುದು ತದನಂತರ ಮಧ್ಯಾಹ್ನ ಊಟ ಮಾಡುವುದಕ್ಕಿಂತ ಒಂದು ಗಂಟೆ ಮುಂಚಿತವಾಗಿ ಸೇವನೆ ಮಾಡಿ ಈ ರೀತಿ ಮಾಡುವುದರಿಂದ ಚರ್ಮದ ಕಾಂತಿ ವೃದ್ಧಿಯಾಗುತ್ತದೆ ಕೂದಲಿಗೆ ಬೇಕಾದಂತಹ ಪೋಷಣೆ ದೊರೆಯುತ್ತದೆ.