ಏಪ್ರಿಲ್ 30 ಇಂದು ವಿಶೇಷ ಅಮವಾಸ್ಯೆ ಹಾಗೂ ಸೂರ್ಯಗ್ರಹಣ ಯಾವ ರಾಶಿಗಿದೆ ಸಮಸ್ಯೆ ಇದೆ,ಯಾವ ತಪ್ಪನ್ನು ಮಾಡಬಾರದು ನೋಡಿ…

30 ಏಪ್ರಿಲ್ 2022 ರಾಹುಗ್ರಸ್ಥ ಸೂರ್ಯ ಗ್ರಹಣ ಯಾವ ರಾಶಿಗಿದೆ ಸಮಸ್ಯೆ ? ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ.ಗ್ರಹಣ ಅಂದ ತಕ್ಷಣ ನಮ್ಮ ಜನರು ತುಂಬಾನೇ ಭಯಪಡುತ್ತಾರೆ ಗ್ರಹಣದ ದಿನ ಏನಾಗಿ ಬಿಡುತ್ತದೆ ಎಂಬ ಕುತೂಹಲ ಅಥವಾ ಆತಂಕ ಪ್ರತಿಯೊಬ್ಬರನ್ನು ಕೂಡ ಇರುವುದನ್ನು ನಾವು ನೋಡಬಹುದಾಗಿದೆ. ಇನ್ನೂ ಈ ವರ್ಷದಲ್ಲಿ ಒಟ್ಟು ನಾಲ್ಕು ಗ್ರಹಣ ಬರುವುದನ್ನು ನಾವು ನೋಡಬಹುದಾಗಿದೆ ಅದರಲ್ಲಿ ಎರಡು ಸೂರ್ಯಗ್ರಹಣ ಮತ್ತೆರಡು ಚಂದ್ರಗ್ರಹಣ ಹಾಗಾಗಿ ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30 ಅಂದರೆ ಈ ದಿನ ಮಧ್ಯರಾತ್ರಿ ಬರುವುದನ್ನು ನಾವು ನೋಡಬಹುದಾಗಿದೆ. ಈ ಸೂರ್ಯಗ್ರಹಣದಿಂದ ಬಹಳ ಒಳ್ಳೆಯ ಫಲಗಳನ್ನು ನಾವು ನೋಡಬಹುದಾಗಿದೆ ಅಷ್ಟೇ ಭಯಂಕರವಾದ ಕೆಟ್ಟ ಫಲಗಳನ್ನು ಕೂಡ ನಾವು ಪಡೆಯಬಹುದು. ಆದರೆ ಒಂದು ವಿಚಾರ ನೆನಪಿರಲಿ ಫಲಗಳು ನಮ್ಮ ದೇಶದಲ್ಲಿ ಬೀರುವುದಿಲ್ಲ ಏಕೆಂದರೆ ಈ ಗ್ರಹಣ ಭಾಗಶಃ ಗ್ರಹಣ ಇರುವುದರಿಂದ ನಮ್ಮ ದೇಶದಲ್ಲಿ ಗ್ರಹಣ ಗೋಚರಿಸುವುದಿಲ್ಲ ಬದಲಾಗಿ.

ಅಟ್ಲಾಂಟಿಕ, ಚಿಲ್ಲಿ, ಉತ್ತರ ಅಮೇರಿಕ ಮುಂತಾದ ದೇಶಗಳಲ್ಲಿ ಕಂಡುಬರುವುದನ್ನು ನಾವು ನೋಡಬಹುದಾಗಿದೆ ಇದನ್ನು ರಾಹು ಗ್ರಸ್ತ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಮೊದಲನೇದಾಗಿ ನೀವು ಗ್ರಹಣದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ ಸೂರ್ಯ ಒಂದು ಕಡೆ ಇರುತ್ತಾನೆ ಭೂಮಿ ಒಂದು ಕಡೆ ಇರುತ್ತದೆ ಇವೆರಡರ ನಡುವೆ ಚಂದ್ರ ಬಂದಾಗ ಅದನ್ನು ಸೂರ್ಯಗ್ರಹಣ ಎಂದು ನಾವು ಕರೆಯುತ್ತೇವೆ. ಸೂರ್ಯಗ್ರಹಣ ಎಂಬುದು ಮುಖ್ಯವಾಗಿ ಏಪ್ರಿಲ್ ತಿಂಗಳು 30ನೇ ತಾರೀಕು 2022 ನೇ ಇಸ್ವಿ ಅಂದು ಗೋಚರಿಸುತ್ತದೆ. ಈ ಒಂದು ಸೂರ್ಯಗ್ರಹಣವನ್ನು ಪಂಚಾಂಗದ ಪ್ರಕಾರ ನೋಡುವುದಾದರೆ ಮೂವತ್ತನೇ ತಾರೀಖು ಏಪ್ರಿಲ್ ತಿಂಗಳ ಶನಿವಾರ ರಾತ್ರಿ 12 ಗಂಟೆ 12 ನಿಮಿಷಕ್ಕೆ ಪ್ರಾರಂಭವಾದರೆ, ಅದೇ ದಿನ ಮುಂಜಾನೆ ಅಂದರೆ 4:05 ನಿಮಿಷಕ್ಕೆ ಮುಕ್ತಾಯವಾಗುವುದು ನಾವು ನೋಡಬಹುದಾಗಿದೆ.

WhatsApp Group Join Now
Telegram Group Join Now

ಇದನ್ನು ಇಂಗ್ಲಿಷ್ ಕ್ಯಾಲೆಂಡರಿನಲ್ಲಿ ನಾವು ನೋಡುವುದಾದರೆ ಒಂದನೇ ತಾರೀಕು ಗೋಚರಿಸುವುದು ಕಂಡುಬರುತ್ತದೆ ಆದರೆ ಇಂಗ್ಲಿಷ್ ಕ್ಯಾಲೆಂಡರ್ ಮತ್ತು ನಮ್ಮ ಭಾರತೀಯ ಪಂಚಾಂಗಕ್ಕೆ ಬಹಳಷ್ಟು ವ್ಯತ್ಯಾಸ ಇರುವುದನ್ನು ನಾವು ಕಾಣಬಹುದಾಗಿದೆ. ಇದು ರಾತ್ರಿಯ ಸಮಯ ಗೋಚರಿಸುತ್ತಿರುವ ಕಾರಣ ಬಹುತೇಕ ಭಾರತೀಯರು ನಿದ್ರೆಗೆ ಜಾರುತ್ತಾರೆ. ಹಾಗಾಗಿ ಇವರಿಗೆ ಗ್ರಹಣದ ಗೋಚಾರ ಫಲಗಳು ಕಾಣಿಸುವುದಿಲ್ಲ ಆದರೆ ಯಾರು ರಾತ್ರಿಯ ಸಮಯ ಕೆಲಸ ಮಾಡುತ್ತಾರೆ ಅಂದರೆ ನೈಟ್ ಶಿಫ್ಟ್ ಯಾರಿಗೆ ಇರುತ್ತಾರೆ ಅಂಥವರಿಗೆ ಮಾತ್ರ ಸ್ವಲ್ಪ ಗ್ರಹಣದ ಗೋಚಾರ ಫಲಗಳು ಕಂಡುಬರುವುದನ್ನು ನಾವು ಕಾಣಬಹುದಾಗಿದೆ.

[irp]