ಎಷ್ಟೇ ಕಷ್ಟಪಟ್ಟರೂ ನಿದ್ದೆ ಬರ್ತಾ ಇಲ್ವಾ ಕೇವಲ 10 ನಿಮಿಷ ನಿದ್ದೆಗೆ ಜಾರಿ ಬೇಕಾದರೆ ಈ ಮನೆಮದ್ದನ್ನು ಬಳಸಿ ಹಂಡ್ರೆಡ್ ಪರ್ಸೆಂಟ್ ಎಫೆಕ್ಟಿವ್.ನಿದ್ದೆ ಎಂಬುದು ಮನುಷ್ಯನಿಗೆ ಬಹಳ ಮುಖ್ಯವಾದಂತಹ ಒಂದು ಅಂಶ ನಿದ್ದೆ ಮಾಡಿಲ್ಲ ಅಂದರೆ ಮರುದಿನ ನಾವು ಆಕ್ಟಿವ್ ಆಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಅಷ್ಟೇ ಅಲ್ಲದೆ ನಮ್ಮ ದೇಹಕ್ಕೆ ಕೂಡ ಇದು ಹಲವಾರು ರೀತಿಯಾದಂತಹ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ನಿದ್ದೆ ಎಂಬುದು ಮನುಷ್ಯನ ಜೀವನಕ್ಕೆ ಬಹಳನೇ ಮುಖ್ಯವಾದಂತಹ ಅಂಶ ಆದರೆ ಕೆಲವರಿಗೆ ಮಲಗಿದ ತಕ್ಷಣ ನಿದ್ದೆ ಬರುವುದಿಲ್ಲ ಮಧ್ಯರಾತ್ರಿಯವರೆಗೂ ಕೂಡ ಎಚ್ಚರವಾಗಿ ಇರುತ್ತಾರೆ. ಹಾಗಾಗಿ ಇಂದು ಸುಲಭವಾಗಿ ನಿದ್ರೆಗೆ ಜಾರುವಂತಹ ಕೆಲವೊಂದು ಟಿಪ್ಸ್ ಗಳನ್ನು ನಿಮಗೆ ಹೇಳುತ್ತಿದ್ದೇವೆ. ನಾವು ಹೇಳುವಂತಹ ಸರಳ ಸೂತ್ರಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಖಚಿತವಾಗಿಯೂ ಕೂಡ ಸುಲಭವಾಗಿದೆ ನಿದ್ರೆ ಮಾಡಬಹುದಾಗಿದೆ.ಮೊದಲು ನಿದ್ದೆ ಮಾಡುವುದಕ್ಕಿಂತ ಮುಂಚೆ ನೀವು ನಿಮ್ಮ ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಬೇಕಾಗುತ್ತದೆ ಅಂದರೆ ಯಾವುದೇ ರೀತಿಯಾದಂತಹ ಯೋಚನೆಯನ್ನು ಮಾಡಬಾರದು ಮನುಷ್ಯ ಯಾವಾಗ ಯೋಚನೆ ಮಾಡುವುದಕ್ಕೇ ಪ್ರಾರಂಭ ಮಾಡುತ್ತೇನೆ ಅವಾಗ ಆತನಿಗೆ ನಿದ್ದೆ ಎಂಬುವುದು ಹೊರಟು ಹೋಗುತ್ತದೆ.
ಹಾಗಾಗಿ ಮಲಗುವುದಕ್ಕಿಂತ ಮುಂಚೆ ನಿಮ್ಮ ತಲೆಯೊಳಗೆ ಇರುವಂತಹ ಎಲ್ಲಾ ಚಿಂತೆಗಳನ್ನು ಬಿಟ್ಟುಬಿಡಬೇಕು. ಎರಡನೇದಾಗಿ ನೀವು ಬೆಳಗಿನಿಂದ ಸಂಜೆಯವರೆಗೂ ಕೂಡ ಯಾವುದಾದರೂ ಒಂದು ಹಾರ್ಡ್ ವರ್ಕ್ ಅನ್ನು ಮಾಡಬೇಕಾಗುತ್ತದೆ ಅಂದರೆ ಯಾವುದೇ ಕೆಲಸವನ್ನಾದರೂ ಕೂಡ ಒಂದು ಗಂಟೆಗಳ ಕಾಲ ಕಠಿಣ ಪರಿಶ್ರಮ ವಹಿಸಿ ನಿಮ್ಮ ದೇಹವನ್ನು ದಂಡಿಸಿ ಕೆಲಸ ಮಾಡಿದರೆ ನಿಮಗೆ ಆಯಾಸ ಮತ್ತು ಸುಸ್ತು ಎಂಬುವುದು ಆಗುತ್ತದೆ ಯಾರಿಗೆ ಆಯಾಸ ಮತ್ತು ಸುಸ್ತು ಆಗುತ್ತದೆ ಅವರಿಗೆ ಮಲಗಿದ ತಕ್ಷಣ ನಿದ್ದೆ ಬರುತ್ತದೆ.
ಇವೆರಡು ಕೂಡ ನಿಮಗೆ ಮಾಡಲು ಸಾಧ್ಯವಾಗದಿದ್ದರೆ ಮನೆ ಮದ್ದು ಬಳಕೆ ಮಾಡಿದರೂ ಕೂಡ ನೀವು ನಿದ್ರೆಯನ್ನು ಬೇಗನೆ ಪಡೆಯಬಹುದು ಅದೇನೆಂದರೆ ಒಣದ್ರಾಕ್ಷಿಯನ್ನು ಒಂದು ಹಿಡಿಯಷ್ಟು ನೀರಿನಲ್ಲಿ ನೆನೆಸಿ ರಾತ್ರಿ ಮಲಗುವುದಕ್ಕಿಂತ ಹತ್ತು ನಿಮಿಷ ಮುಂಚೆ ಸೇವನೆ ಮಾಡುವುದರಿಂದ ನಿದ್ರೆಗೆ ಜಾರಬಹುದು ಇದನ್ನು ಮಾಡಲು ಸಾಧ್ಯವಾಗದಿದ್ದರೆ. ಒಂದು ಗ್ಲಾಸ್ ಬಿಸಿ ಆದಂತಹ ಹಾಲನ್ನು ಬಿಸಿ ಬಿಸಿ ಇರುವಾಗಲೇ ಸೇವನೆ ಮಾಡಿ ಈ ರೀತಿ ಮಾಡುವುದರಿಂದಲೂ ಕೂಡ ಬೇಗನೆ ನಿದ್ರೆಗೆ ಜಾರಬಹುದು. ಈ ಎರಡು ಮನೆಮದ್ದುಗಳಲ್ಲಿ ನೀವು ಯಾವುದಾದರೂ ಒಂದನ್ನು ಬಳಕೆ ಮಾಡಬಹುದು ಈ ರೀತಿ ಮಾಡುವುದರಿಂದ ಬೇಗನೆ ನಿದ್ದೆ ಬರುತ್ತದೆ.