2022 ರ ಮೇ ತಿಂಗಳ ಧನಸ್ಸು ರಾಶಿಯ ಗೋಚಾರ ಫಲ ಯಾವ ರೀತಿ ಇದೆ ನೋಡಿ. ಈ ತಿಂಗಳು ಯಾವ ಗ್ರಹ ಯಾವ ಸಂಚಾರ ಆಗುತ್ತದೆ ಎಂಬುದನ್ನು ಮೊದಲು ನಾವು ತಿಳಿದುಕೊಳ್ಳಬೇಕಾಗುತ್ತದೆ 15ನೇ ತಾರೀಕು ರವಿ ಗ್ರಹವು ವೃಷಭ ರಾಶಿಗೆ ಸಂಚಾರ ಆಗುವುದನ್ನು ನಾವು ಇಲ್ಲಿ ನೋಡಬಹುದಾಗಿದೆ. 18 ನೇ ತಾರೀಕು ಕುಜ ಗ್ರಹವು ಮೀನಾ ರಾಶಿಗೆ ಬದಲಾವಣೆಯಾಗಿರುವುದನ್ನು ನೋಡಬಹುದಾಗಿದೆ ಹಾಗೂ 24 ನೇ ತಾರೀಕು ಮೇಷ ರಾಶಿಗೆ ಶುಕ್ರನು ಪ್ರವೇಶವನ್ನು ಪಡೆಯಲಿದ್ದಾರೆ. ಈ ಮೂರು ಪ್ರಮುಖವಾದ ಬದಲಾವಣೆಗಳು ಮೇ ತಿಂಗಳಿನಲ್ಲಿ ತಿರುಗುವುದನ್ನು ನಾವು ನೋಡಬಹುದಾಗಿದೆ. ಇದರ ಆಧಾರದ ಮೇಲೆ ಧನಸ್ಸು ರಾಶಿಯವರು ಮೇ ತಿಂಗಳ ಯಾವ ರೀತಿಯಾದಂತಹ ಫಲಾನುಫಲ ಗಳನ್ನು ಪಡೆಯುತ್ತಾರೆ ಎಂಬುವುದನ್ನು ನೋಡಬಹುದಾಗಿದೆ.ಧನು ರಾಶಿಯ ರಾಶ್ಯಾಧಿಪತಿ ಆದಂತಹ ಗುರುಗ್ರಹವು ಚತುರ್ದಶಿ ಪ್ರವೇಶ ಪಡೆದಿರುವುದನ್ನು ನಾವು ನೋಡಬಹುದಾಗಿದೆ ಈಗ ತನ್ನ ಸ್ವಕ್ಷೇತ್ರ ಆದಂತಹ ಮೀನರಾಶಿಗೆ ಪ್ರವೇಶವನ್ನು ಪಡೆದಿದ್ದಾನೆ. ಇನ್ನು ಧನು ರಾಶಿಗೆ ಅಧಿಪತಿ ಆದಂತಹ ಗುರು ಅಲ್ಲೇ ಇರುವುದರಿಂದ ಈ ಒಂದು ರಾಶಿಯವರು ಈ ತಿಂಗಳು ಸ್ವಲ್ಪ ಮಿಶ್ರಫಲಗಳನ್ನು ಪಡೆಯಲಿದ್ದಾರೆ
ಎಂಬುದು ತಿಳಿದುಬಂದಿದೆ. ಚತುರ್ಥ ಗುರು ಅಷ್ಟೊಂದು ಒಳ್ಳೆಯದಲ್ಲ ಹಾಗಾಗಿ ನೀವು ಮಾಡುವಂತಹ ಕೆಲಸಕಾರ್ಯಗಳಲ್ಲಿ ಸ್ವಲ್ಪ ಅಡೆತಡೆಗಳು ಉಂಟಾಗಬಹುದು ನೀವು ಗುರುರಾಯರ ಪ್ರಾರ್ಥನೆಯನ್ನು ಮಾಡಬೇಕಾಗುತ್ತದೆ. ನಿಮ್ಮ ರಾಶಿಯ ಅಧಿಪತಿ ಗುರು ಆಗಿದ್ದರೂ ಕೂಡ ಅವನು ನಿಮಗೆ ಕೆಲವೊಂದಷ್ಟು ತೊಂದರೆಗಳನ್ನು ಈ ತಿಂಗಳಲ್ಲಿ ನೀಡಬಹುದು. ಹಾಗಾಗಿ ನೀವು ಯಾವುದೇ ಕಾರಣಕ್ಕೂ ಕೂಡ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಯಾವುದೇ ಕೆಲಸ ಕಾರ್ಯ ಮಾಡಬೇಕಾದರೂ ಕೂಡ ಸ್ವಲ್ಪ ನಿಧಾನವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ಈ ತಿಂಗಳು ಧನುರಾಶಿಯವರಿಗೆ ಉದರಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳು ಕಂಡುಬರುತ್ತದೆ ಎಂಬುದು ತಿಳಿದುಬಂದಿದೆ ಅಂದರೆ ಅಜೀರ್ಣ ಸಮಸ್ಯೆ ಅಥವಾ ನೀವು ತಿಂದ ಆಹಾರ ಜೀರ್ಣ ಆಗದೆ ಇರುವುದು ಅಥವಾ ಆಹಾರ ಪದ್ಧತಿಯಲ್ಲಿ ಸ್ವಲ್ಪ ಏರುಪೇರು ಆಗಿರುವುದು ಈ ರೀತಿಯಾದಂತಹ ಗುಣಲಕ್ಷಣಗಳು ಈ ತಿಂಗಳಿನಲ್ಲಿ ಕಂಡುಬರುತ್ತದೆ. ಹಾಗಾಗಿ ನೀವು ಸೇವನೆ ಮಾಡುವಂತಹ ಆಹಾರದ ಬಗ್ಗೆ ನೀವು ವಿಶೇಷವಾಗಿ ಗಮನವನ್ನು ಹರಿಸಬೇಕಾಗುತ್ತದೆ ಇದೇ ರೀತಿಯ ಇನ್ನಷ್ಟು ಮಾಹಿತಿಯನ್ನು ತಿಳಿಯಬೇಕಾದರೆ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. ಮೇ ತಿಂಗಳು ಯಾವ ರೀತಿಯಾದಂತಹ ಫಲಾನುಫಲಗಳು ನಿಮಗೆ ದೊರೆಯುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದರಲ್ಲಿ ತಿಳಿಸಲಾಗಿದೆ.