ಕಾರ್ಮಿಕರ ಕಾರ್ಡ್ / ಲೇಬರ್ ಕಾರ್ಡ್ ಇದ್ದವರಿಗೆ rs.100000. ಅರ್ಜಿ ಸಲ್ಲಿಸುವ ವಿಧಾನ…ನಮಸ್ತೆ ಸ್ನೇಹಿತರೆ, ಇವತ್ತಿನ ಈ ಲೇಖನದ ಮುಖಾಂತರ ನಾವು ನಿಮಗೆ ತಿಳಿಸ ಹೊರಟಿರುವುದು ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್ ಹೊಂದಿದವರಿಗೆ ಮದುವೆ ಸಹಾಯಧನವನ್ನು, ಸರ್ಕಾರ ಕಾರ್ಮಿಕ ಇಲಾಖೆ ನೀಡುತ್ತಿದೆ. ಈ ಒಂದು ಮದುವೆ ಸಹಾಯಧನವನ್ನು ಯಾರು ಯಾರು ಪಡೆಯಬಹುದು? ಇದಕ್ಕೆ ಇರುವ ಶರತ್ತುಗಳೇನು? ಯಾವ ರೀತಿಯಾಗಿ ನಾವು ಈ ಸಹಾಯಧನವನ್ನು ಪಡೆಯಬಹುದು? ಹೇಗೆ ನಾವು ಅರ್ಜಿಯನ್ನು ಸಲ್ಲಿಸಬೇಕು? ಎಷ್ಟು ಮದುವೆ ಸಹಾಯಧನವನ್ನು ನಾವು ಪಡೆಯಬಹುದು? ಈ ವಿಷಯದ ಬಗ್ಗೆ ನಾವಿಂದು ತಿಳಿದುಕೊಳ್ಳೋಣ ಬನ್ನಿ. ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ. ಈ ಒಂದು ಇಲಾಖೆಯ ಮುಖಾಂತರ ಯಾವ ಯಾವ ಕಾರ್ಮಿಕರು ನೋಂದಣಿ ಮಾಡಿಸಿಕೊಂಡು ಕಾರ್ಮಿಕರ ಕಾರ್ಡನ್ನು ಪಡೆದಿರುತ್ತಾರೆ.ಅಂತಹವರು ಸರ್ಕಾರದಿಂದ ಹಲವು ಪ್ರಯೋಜನಕಾರಿ ಯೋಜನೆಗಳಿಂದ ಸಹಾಯ ಸೌಲಭ್ಯವನ್ನು ಪಡೆಯುತ್ತಾರೆ. ಅವುಗಳಲ್ಲಿ ಮದುವೆ ಸಹಾಯಧನ ಯೋಜನೆ ಕೂಡ ಒಂದಾಗಿದೆ.
ಈ ಒಂದು ಯೋಜನೆಯ ಮುಖಾಂತರ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ rs.50000 ರೂ ವರೆಗೆ ಸಹಾಯಧನವನ್ನು ನೀಡುತ್ತಾರೆ. ಕಾರ್ಮಿಕರ ಕಾರ್ಡನ್ನು ಹೊಂದಿರುವ ವ್ಯಕ್ತಿ ಇನ್ನೂ ಮದುವೆಯಾಗಿಲ್ಲದಿದ್ದರೆ, ಅಂತಹವರು ಈ ಯೋಜನೆಯಿಂದ ಸೌಲಭ್ಯವನ್ನು ಪಡೆಯಬಹುದು. ಏನಾದರೂ ಕಾರ್ಮಿಕ ಕಾರ್ಡ್ ಹೊಂದಿರುವ ವ್ಯಕ್ತಿ ಮದುವೆಯಾಗಿದ್ದು ಮಕ್ಕಳಿಗೆ ಮದುವೆ ಆಗಿಲ್ಲದಿದ್ದರೆ, ಅವರ ಮಕ್ಕಳು ಹೆಣ್ಣು ಆಗಿರಲಿ ಗಂಡಾಗಿರಲಿ ಅವರ ಮಕ್ಕಳಿಗೆ ಮದುವೆ ಸಹಾಯಧನ ಯೋಜನೆಯಿಂದ ಸಹಾಯ ಪಡೆಯಬಹುದಾಗಿದೆ. ಕಾರ್ಮಿಕನ ಕಾರ್ಡು ಹೊಂದಿರುವ ಕಾರ್ಮಿಕರ ಇಬ್ಬರು ಮಕ್ಕಳಿಗೆ ಸಹಾಯದಿಂದ ತಲಾ 50 ಸಾವಿರ ರೂಪಾಯಿಯಂತೆ ಮದುವೆ ಸಹಾಯಧನದ ಪ್ರಯೋಜನ ಪಡೆಯಬಹುದಾಗಿದೆ. ಈ ಒಂದು ಮದುವೆ ಸಹಾಯಧನದ ಯೋಜನೆಗೆ ಹೇಗೆ ಅರ್ಜಿಯನ್ನು ಸಲ್ಲಿಸಬಹುದು ಎಂದರೆ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಸೇವಾಸಿಂದು ಹ್ಯಾಪ್ ಮುಖಾಂತರ ಲಾಗಿನ್ ಆಗಿ ಈ ಒಂದು ಮದುವೆ ಸಹಾಯಧನದ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದು ಹೇಗೆ ಎಂದು ತಿಳಿಯಬೇಕಾದರೆ, ಈ ಕೆಳಗೆ ನೀಡಿರುವ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಿ. ಈ ಯೋಜನೆಯಿಂದ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಕೇಳಿಕೊಳ್ಳುತ್ತೇವೆ. ಧನ್ಯವಾದಗಳು.
ಕಾರ್ಮಿಕ ಕಾರ್ಡ್/ಲೇಬರ್ ಕಾರ್ಡ್ ಇದ್ದವರಿಗೆ ಒಂದು ಲಕ್ಷ ರೂಪಾಯಿ ಉಚಿತ ಅರ್ಜಿ ಸಲ್ಲಿಸುವ ವಿಧಾನ.ಸಂಪೂರ್ಣ ಮಾಹಿತಿ..

Fimy news
[irp]