ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಕೊಟ್ಟ ಸರ್ಪೈಸ್ ಗೆ ಮಗಳ ರಿಯಾಕ್ಷನ್ ಹೇಗಿತ್ತು ನೋಡಿ..ವಿಡಿಯೋ…

ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಕೊಟ್ಟ ಸರ್ಪೈಸ್ ಗೆ ಮಗಳ ರಿಯಾಕ್ಷನ್ ಹೇಗಿತ್ತು ಗೊತ್ತಾ?ಅಪ್ಪ ಮಗಳ ಬಾಂಧವ್ಯ ಎಂದರೆ ಹಾಗೆ ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ವಿಶೇಷ ಪ್ರೀತಿ ಹೆಣ್ಣುಮಕ್ಕಳಿಗೆ ಅಪ್ಪನೇ ಅವರ ಮೊದಲ ಹೀರೋ, ತಮ್ಮ ಸ್ನೇಹಿತ, ಸಲಹೆಗಾರ, ಒಬ್ಬ ಗುರು ಹೀಗೆ ಅಪ್ಪನೇ ಎಲ್ಲವೂ ಕೂಡ. ಅಪ್ಪನು ಅಷ್ಟೇ ಮಗಳ ಕಣ್ಣುಗಳಲ್ಲಿ ಖುಷಿ ನೋಡಲು ಎಂತಹ ಸಾಹಸವನ್ನು ಕೂಡ ಮಾಡಲು ತಯಾರಿರುತ್ತಾರೆ. ತಮ್ಮ ಹೆಣ್ಣುಮಕ್ಕಳನ್ನು ಕೂಡ ಯಾವ ಗಂಡು ಮಗನಿಗಿಂತ ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿಯೇ ಅಪ್ಪಂದಿರು ಭಾವಿಸುತ್ತಾರೆ ಅದೇ ರೀತಿ ಬೆಳಸುತ್ತಾರೆ ಕೂಡ. ಅಪ್ಪ ಎಂದರೆ ಎಂಥದೋ ಒಂದು ಧೈರ್ಯ ಅಪ್ಪ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವ ವಿಶ್ವಾಸ ಅಪ್ಪ ಮಗಳನ್ನು ಹೆಸರಿಡಿದು ಕರೆಯದೆ ಮಗಳೇ ಮಗಳೇ ಎನ್ನುವಾಗ ಎಂಥದ್ದೋ ಒಂದು ಖುಷಿ ಹಾಗೂ ಹೆಮ್ಮೆ. ಈ ರೀತಿ ಅಪ್ಪ ಮಗಳ ಬಾಂಧವ್ಯವನ್ನು ವಿವರಿಸಲು ಪದಗಳಲ್ಲಿ ಖಂಡಿತ ಸಾಧ್ಯವಾಗುವುದಿಲ್ಲ ಎಂದು ಹೇಳಬಹುದು.

ನಮ್ಮ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಅವರು ಕೂಡ ಇದನ್ನೇ ಚೌಕ ಎನ್ನುವ ಸಿನಿಮಾದಲ್ಲಿ ಅಪ್ಪನ ಕುರಿತು ಹಾಡೊಂದನ್ನು ರಚಿಸಿದ್ದಾರೆ. ಹಾಗೆಯೇ ಅನುರಾಧ ಭಟ್ ಕೂಡ ಅದನ್ನು ಅಷ್ಟೇ ಸೊಗಸಾಗಿ ಹಾಡಿದ್ದಾರೆ. ಕನ್ನಡದ ಎಲ್ಲಾ ಹೆಣ್ಣು ಮಕ್ಕಳ ಫೇವರೆಟ್ ಸಾಂಗ್ ಯಾವುದು ಎಂದು ಕೇಳಿದರೆ ಖಂಡಿತವಾಗಿಯೂ ಅವರು ಅಪ್ಪ ಐ ಲವ್ ಯು ಈ ಹಾಡು ಎಂದೇ ಹೇಳುತ್ತಾರೆ. ಅಷ್ಟರಮಟ್ಟಿಗೆ ಮೋಡಿಯನ್ನು ಮಾಡಿದೆ ಈ ಹಾಡು. ಅದರಲ್ಲಿರುವ ನಾನು ನೋಡಿದ ಮೊದಲ ವೀರ ಬಾಳು ಕಲಿಸಿದ ಸಲಹೆಗಾರ ಬೆರಗೂ ಮೂಡಿಸೋ ಜಾದುಗಾರ ಅಪ್ಪ ಸಾಲಿನಿಂದ ಹಿಡಿದು ಪ್ರತಿಯೊಂದು ಅಕ್ಷರದಲ್ಲಿ ಸಹ ಮಗಳಿಗೆ ಅಪ್ಪನ ಮೇಲೆ ಇರುವ ಎಲ್ಲಾ ಭಾವನೆಗಳನ್ನು ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದಾರೆ ವಿ ನಾಗೇಂದ್ರ ಪ್ರಸಾದ್ ರವರು.

WhatsApp Group Join Now
Telegram Group Join Now

ಅರ್ಜುನ್ ಜನ್ಯ ಅವರಿಗೆ ಈ ಹಾಡು ತುಂಬಾ ಸ್ಪೆಷಲ್ ಯಾಕೆಂದರೆ ಅವರಿಗೂ ಸಹ ಒಬ್ಬಳು ಹೆಣ್ಣು ಮಗಳಿದ್ದಾಳೆ. ಆ ಮಗಳು ಸಹ ಅರ್ಜುನ್ ಜನ್ಯ ಅವರನ್ನು ಎಲ್ಲರಿಗಿಂತ ಹೆಚ್ಚಾಗಿ ಇಷ್ಟಪಡುತ್ತಾಳೆ. ಇವರಿಬ್ಬರ ನಡುವೆ ಇರುವ ಬಾಂಧವ್ಯವನ್ನು ನೋಡುವುದೇ ಒಂದು ಚಂದ ಅದು ಅವರು ಶೇರ್ ಮಾಡುವ ಎಲ್ಲಾ ಫೋಟೋಗಳಲ್ಲಿ ಕಾಣುತ್ತಿರುತ್ತದೆ. ಇದೇ ರೀತಿಯಾದ ಇನ್ನೊಂದು ವಿಡಿಯೋ ಈಗ ವೈರಲ್ ಆಗಿದೆ ಅವರು ಅವರ ಮಗಳಿಗೆ ಸರ್ಪ್ರೈಸ್ ಕೊಡುವ ಸಲುವಾಗಿ ಮಗಳು ಶಾಲೆಯಿಂದ ಬರುವ ಮೊದಲು ಮನೆ ಎಲ್ಲವನ್ನು ಮಗಳ ಬರ್ತಡೆಗೆ ಡೆಕೋರೇಟ್ ಮಾಡಿ ಮ್ಯೂಸಿಕ್ ಬಾರಿಸುತ್ತಿದ್ದಾರೆ. ಅದನ್ನು ನೋಡಿದ ಮಗಳ ಮುಖದಲ್ಲಿ ಎಷ್ಟು ಖುಷಿ ಕಾಣುತ್ತಿತ್ತು ಎಂದು ನೀವೇ ನೋಡಿ.

[irp]