ಮೇಷ ರಾಶಿ :- ಮಾನಸಿಕವಾಗಿ ಇಂದು ನೀವು ಸಾಕಷ್ಟು ಗೊಂದಲಕ್ಕೆ ಒಳಗಾಗುತ್ತಿದೆ ನಿಮ್ಮ ತೊಂದರೆಗಳಿಂದ ಹೊರ ಬರುವುದು ಹೇಗೆ ಎಂಬುದು ನಿಮಗೆ ಅರ್ಥವಾಗುವುದಿಲ್ಲ. ನಿಮ್ಮ ಮನಸ್ಸನ್ನು ಶಾಂತ ರೀತಿಯಲ್ಲಿ ಇಟ್ಟುಕೊಳ್ಳಿ ಕಚೇರಿಯ ವಾತಾವರಣ ಸರಿ ಇರುವುದಿಲ್ಲ ಕುಟುಂಬ ಜೀವನದಲ್ಲಿ ಇಂದು ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.
ವೃಷಭ ರಾಶಿ :- ಅನಗತ್ಯ ವಿಚಾರದ ಬಗ್ಗೆ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಬದಲು ನಿಮ್ಮ ಕೆಲಸದ ಬಗ್ಗೆ ಗಮನ ಇಟ್ಟರೆ ಉತ್ತಮ ಕುಟುಂಬ ಜೀವನವು ಸಂತೋಷಕರವಾಗಿರುತ್ತದೆ. ಕೆಲಸದ ದಿನದಲ್ಲಿ ಇಂದು ಸರಿಯಾಗಿರುತ್ತದೆ ವ್ಯಾಪಾರದ ಬಗ್ಗೆ ಯೋಚಿಸಬೇಕಾದ ಎಚ್ಚರದಿಂದಿರಿ ಅನಾರೋಗ್ಯಕ್ಕೆ ಸಂಬಂಧಿಸಿದ ಕೆಲಸ ಮಾಡಲು ಹೋಗಬೇಡಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 7.45ರಿಂದ 11 ರವರೆಗೆ.
ಸುಮಶ್ರೀ youtube ವಾಹಿನಿಗೆ ಆತ್ಮೀಯವಾದ ಸ್ವಾಗತ.
ಪ್ರತಿದಿನ ಬೆಳಿಗ್ಗೆ 06:00 ಗೆ ಪಂಚಾಂಗವನ್ನು ವೀಕ್ಷಿಸಲು ನಮ್ಮ Sumashri SMS channel subscribe ಮಾಡಿ
ಈ ದಿನದಂದು ಕೃತ್ತಿಕಾ ನಕ್ಷತ್ರವನ್ನು ಮತ್ತು ಅಗ್ನಿದೇವನನ್ನು ಸ್ತುತಿಸಿ ಸಕಲದೋಷಗಳನ್ನು ನಿವಾರಿಸಿಕೊಳ್ಳೋಣ.
ಶ್ಲೋಕ
ರೋಹಿಣೀ ಪಾತು ನಕ್ಷತ್ರಂ ಬ್ರಹ್ಮಾ ಯಸ್ಯಾಧಿದೇವತಾ।
ಬೃಹದ್ಜ್ಯೋತಿರ್ಜಗದ್ವೇದ್ಯೋ ವರ್ಧಯೇದಾಯುರುಚ್ಛ್ರಿತಮ್॥
ಅರ್ಥ-
ರೋಹಿಣೀ ನಕ್ಷತ್ರವು ಹಾಗು ರೋಹಿಣೀ ನಕ್ಷತ್ರದ ಅಧಿದೇವತೆಯಾದ ಸಂಪೂರ್ಣ ಜಗತ್ತಿನ ಗಮ್ಯವಾದ ಬ್ರಹ್ಮದೇವನು ನಮ್ಮನ್ನು ರಕ್ಷಿಸುವ ಮೂಲಕ ನಮಗೆ ದೀರ್ಘಾಯುಷ್ಯವನ್ನು ಕರುಣಿಸಲಿ
ಇಂದಿನ ಪಂಚಾಂಗ
ಶುಭಕೃನ್ನಾಮಸಂವತ್ಸರಃ
ಉತ್ತರಾಯಣಮ್
ವಸಂತ-ಋತುಃ
ವೈಶಾಖಮಾಸಃ
ಶುಕ್ಲಪಕ್ಷಃ
ತೃತೀಯಾತಿಥಿಃ
ರೋಹಿಣೀನಕ್ಷತ್ರಮ್
ಶೋಭನನಾಮಯೋಗಃ
ತೈತಿಲಕರಣಮ್
ಮಂಗಲವಾಸರಃ
ಸೂರ್ಯೋದಯ – 05:59 A.M
ಸೂರ್ಯಾಸ್ತ – 6:34 P.M
ಪಂಚಾಂಗ ಶ್ರವಣವನ್ನು ಮಾಡುವವರಿಗಾಗಿ ಮಾಡಿರುವ ವಿಶೇಷ ವೀಡಿಯೋ. ಪ್ರತಿನಿತ್ಯ ಪಂಚಾಂಗ ಶ್ರವಣದಿಂದ ಏನು ಲಾಭ?
ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯ ವರ್ಧನಂ|
ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗನಿವಾರಣಮ್||
ಕರಣಾತ್ ಕಾರ್ಯಸಿದ್ಧಿಃ ಸ್ಯಾತ್ ಪಂಚಾಂಗಫಲಮುತ್ತಮಮ್||
ಅರ್ಥ – ತಿಥಿಯಿಂದ ಐಶ್ವರ್ಯವು ಲಭಿಸುವುದು, ವಾರದಿಂದ ಆಯುಷ್ಯದ ಹೆಚ್ಚಳವಾಗುವುದು, ನಕ್ಷತ್ರದಿಂದ ಪಾಪದ ನಿವಾರಣೆಯಾಗುವುದು, ಯೋಗದಿಂದ ರೋಗಗಳ ನಿವಾರಣೆಯಾಗುವುದು, ಕರಣದಿಂದ ಎಲ್ಲ ಕೆಲಸಗಳೂ ಸುಲಭವಾಗುವವು ಆದ್ದರಿಂದ ಈರೀತಿ ಉತ್ತಮ ಫಲಗಳನ್ನೊಳಗೊಂಡ ಪಂಚಾಂಗವನ್ನು ನಾವು ಕೇಳಿ ಧನ್ಯರಾಗೋಣ.
ಈ ರೀತಿಯ ಶ್ಲೋಕಗಳನ್ನು ಪ್ರತಿದಿನ ಆಲಿಸುವುದು ತುಂಬಾ ಉತ್ತಮ. ಹೀಗಾಗಿ ಈ ಪಂಚಾಂಗವನ್ನು ದಿನಕ್ಕೊಂದು ದೇವತಾ ಸ್ತುತಿಯೊಂದಿಗೆ ನಮ್ಮ Sumashri SMS YouTube channel ನಲ್ಲಿ ಪ್ರತಿದಿನ ಎಲ್ಲರ ಉಪಯೋಗಕ್ಕಾಗಿ ತಿಳಿಸಿಕೊಡಲಾಗುತ್ತಿದೆ.
ಮಿಥುನ ರಾಶಿ :- ಕುಟುಂಬದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಉದ್ಯೋಗಿಗಳು ಕಠಿಣ ಪರಿಶ್ರಮದಿಂದ ಇಂದು ಫಲ ದೊರೆಯುತ್ತದೆ ವ್ಯಾಪಾರಿಗಳು ಹೊಸ ಹೂಡಿಕೆ ಮಾಡಲು ಇಂದು ಅನುಕೂಲಕರ ದಿನವಾಗಲಿದೆ. ಕಠಿಣ ಹೋರಾಟದ ನಂತರ ಇಂದು ಸಾಕಷ್ಟು ಹಣವನ್ನು ಸಂಪಾದಿಸಲು ಸಾಧ್ಯ ವಾಗುತ್ತದೆ ಸಂಗಾತಿಯ ಆರೋಗ್ಯ ಕ್ಷೀಣಿಸಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 11.15ರಿಂದ 2:30 ರವರೆಗೆ.
ಕರ್ಕಾಟಕ ರಾಶಿ :- ಇದು ನಿಮಗೆ ಸಂತೋಷ ತುಂಬಿದ ದಿನವಾಗಲಿದೆ ಮಾಸಿಕವಾಗಿ ಖುಷಿಯಾಗಿರುತ್ತೀರಿ ಸಕಾರಾತ್ಮಕ ವನ್ನು ಅನುಭವಿಸುತ್ತೀರಿ ಇಂದು ಲಾಭದ ದಿನವಾಗಲಿದೆ. ಹಣದ ಪರಿಸ್ಥಿತಿ ತೃಪ್ತಿಕರವಾಗಿ ಇರುತ್ತದೆ ವಯಕ್ತಿಕ ಜೀವನದಲ್ಲಿ ಸಂಗಾತಿಯೊಂದಿಗೆ ಕೆಲವು ಸಮಸ್ಯೆಗಳು ಇರಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 5.30 ರಿಂದ 8:00 ಗಂಟೆಯವರೆಗೆ.
ಸಿಂಹ ರಾಶಿ :- ಇಂದು ನಿಮಗೆ ಕಷ್ಟದ ದಿನವಾಗಲಿದೆ ಕಚೇರಿಯಲ್ಲಿ ಯಾವುದೇ ಕೆಲಸವನ್ನು ಅವಸರದಿಂದ ಮಾಡಬೇಡಿ ಆರ್ಥಿಕವಾಗಿ ಲಾಭವನ್ನು ಪಡೆಯಲಿದ್ದೀರಿ. ಸಂಗಾತಿಯೊಂದಿಗೆ ಭಿನ್ನಭಿಪ್ರಾಯ ಹೆಚ್ಚಾಗುತ್ತದೆ. ಹಣವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ಪ್ರತಿದಿನ ವ್ಯಾಯಾಮ ಮಾಡಿದರೆ ಆರೋಗ್ಯವಾಗಿರುತ್ತೇನೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – 10 ರಿಂದ ಮಧ್ಯಾಹ್ನ 1:15 ರವರೆಗೆ.
ಕನ್ಯಾ ರಾಶಿ :- ಉದ್ಯೋಗಿಗಳು ತಮ್ಮ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಬೇಕಾಗಿದೆ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳಿ. ನಿಮ್ಮ ತಂದೆಯ ವ್ಯಾಪಾರದೊಂದಿಗೆ ಸಂಬಂಧ ಹೊಂದಿದ್ದರೆ ಉತ್ತಮ ಲಾಭ ಪಡೆಯಲಿದ್ದೀರಿ ಹಣಕಾಸಿನ ವಿಚಾರದಲ್ಲಿ ಹಿರಿಯ ಸಹೋದರರೊಂದಿಗೆ ಚರ್ಚೆಯಾಗಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4:00 ರಿಂದ 6:00 ವರೆಗೆ.
ತುಲಾ ರಾಶಿ :- ಕೆಲವು ಸಂದರ್ಭಗಳಲ್ಲಿ ಇಂದು ನಿಮಗೆ ಉತ್ತಮವಾದ ದಿನವಾಗಲಿದೆ ಕಚೇರಿಯಲ್ಲಿ ಬಾಕಿ ಉಳಿದ ಕೆಲಸದ ಇಂದು ಎಲ್ಲಾ ಪೂರ್ಣಗೊಳ್ಳುತ್ತದೆ ತಡೆದಿಟ್ಟ ಸಂಬಳವು ಪಡೆಯುತ್ತೀರಿ. ಮನೆಯ ವಾತಾವರಣ ಶಾಂತವಾಗಿರುತ್ತದೆ ಪ್ರೀತಿ ಮತ್ತು ಐಕ್ಯತೆ ಇಂದು ಮನೆಯಲ್ಲಿ ಉಳಿದುಕೊಳ್ಳುತ್ತದೆ ಸಂಗಾತಿಯನ್ನು ನಿರ್ಲಕ್ಷ್ಯಮಾಡಬೇಡಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ.
ವೃಶ್ಚಿಕ ರಾಶಿ :- ಉದ್ಯೋಗಿಗಳಿಗೆ ಇಂದು ಉತ್ತಮ ದಿನವಾಗಲಿದೆ ನಿಮ್ಮ ಕಠಿಣ ಪರಿಶ್ರಮವನ್ನು ಉನ್ನತ ಅಧಿಕಾರಿಗಳು ಗಮನಿಸುತ್ತಾರೆ ವ್ಯಾಪಾರಸ್ಥರು ಬಿಡುವಿಲ್ಲದ ದಿನವನ್ನು ಹೊಂದಿರುತ್ತಾರೆ. ನಿಮ್ಮ ವ್ಯವಹಾರಗಳನ್ನು ಅಭಿವೃದ್ಧಿಗೊಳಿಸಲು ಹೊಸ ಯೋಜನೆಗಳು ಮಾಡಬೇಕು ಕುಕುಟುಂಬ ಜೀವನದಲ್ಲಿ ತುಂಬಾ ಪ್ರೀತಿಯಿಂದ ದಿನ ಕಲಿಯುತ್ತೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 5.15 ರಿಂದ 8.30 ರವರೆಗೆ.
ಧನಸ್ಸು ರಾಶಿ :- ಇಂದು ನಿಮ್ಮ ಮಾತನ್ನು ನಿಯಂತ್ರಿಸಲು ಸೂಚಿಸಲಾಗಿದೆ ನಿಮ್ಮ ಅತಿಯಾದ ಸಂತೋಷಕ್ಕೆ ತೊಂದರೆಯಾಗುವ ಯಾವುದೇ ವಿಚಾರವನ್ನು ಹೇಳಬೇಡಿ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ವೇಗ ನಿಧಾನವಾಗಿರುತ್ತದೆ ವ್ಯಾಪಾರಿಗಳು ಇಂದು ದೊಡ್ಡ ಅವಕಾಶವನ್ನು ಪಡೆಯಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ಪಾದಗಳಿಗೆ ಸಂಬಂಧಿಸಿದಂತೆ ತೊಂದರೆ ಉಂಟಾಗಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 10.15 ರಿಂದ 1.35 ರವರೆಗೆ.
ಮಕರ ರಾಶಿ :- ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ ನಿಮ್ಮಜೀವನ ಸಂಗಾತಿ ಮತ್ತು ನೀವು ಪರಸ್ಪರ ಅರ್ಥಮಾಡಿಕೊಳ್ಳುತ್ತೀರಿ. ನಿಮ್ಮ ಕಚೇರಿಯಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸಲು ಸರಿಯಾದ ದಿನವಾಗಿದೆ. ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೆ ಶೀಘ್ರದಲ್ಲೇ ನೀವು ಫಲಿತಾಂಶವನ್ನು ಪಡೆಯಲಿದ್ದೀರಿ ಆರೋಗ್ಯದಲ್ಲಿ ಮಿಶ್ರ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 6.30 ರಿಂದ 9.30 ರವರೆಗೆ.
ಕುಂಭ ರಾಶಿ :- ಹಣಕ್ಕೆ ಸಂಬಂಧಿಸಿದ ಆತಂಕವೂ ನಿಮ್ಮನ್ನು ಕಾಡಬಹುದು ಅನಗತ್ಯ ವಿಚಾರಗಳಿಗೆ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ ಧಾನ್ಯದ ವ್ಯಾಪಾರಿಗಳು ಆರ್ಥಿಕವಾಗಿ ಲಾಭ ಪಡೆಯಲಿದ್ದೀರಿ. ಇಂದು ನಿಮ್ಮ ಕೋಪವನ್ನು ಹೆಚ್ಚಾಗಿ ನಿಯಂತ್ರಿಸಿಕೊಳ್ಳಬೇಕು ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – 112.30 ರಿಂದ 3 30 ರವರೆಗೆ.
ಮೀನ ರಾಶಿ :- ಅನಗತ್ಯವಾಗಿ ನೀವು ಕೋಪ ಗೊಳ್ಳುವುದನ್ನು ತಪ್ಪಿಸಿಕೊಳ್ಳಿ ಆರೋಗ್ಯ ಸಂಬಂಧಿಸಿದಂತೆ ನಿಮಗೆ ದಣಿವು ಉಂಟಾಗಬಹುದು ಈ ಪರಿಸ್ಥಿತಿಯಲ್ಲಿ ವಿಶ್ರಾಂತಿ ಕಡೆಗೂ ಗಮನಹರಿಸಬೇಕು. ನಿಮ್ಮ ಆಯಾಸವು ದೈಹಿಕವಾಗಿ ದುರ್ಬಲಗೊಳಿಸುತ್ತದೆ ನೀವು ವ್ಯಾಪಾರಿಗಳ ಆಗಿದ್ದರೆ ಸಣ್ಣ ಪ್ರಯಾಣವನ್ನು ತೆಗೆದುಕೊಳ್ಳಬಹುದು ಉದ್ಯೋಗಸ್ಥರಿಗೆ ಇಂದು ಮುಖ್ಯ ದಿನವಾಗಲಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 3.30 ರಿಂದ ಸಂಜೆ 6:15 ರವರೆಗೆ.