ವಿಮಲ್ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿದ ಯಶ್.ಕನ್ನಡ ಸಿನಿಮಾ ರಂಗದ ಟಾಪ್ ಸ್ಟಾರ್ ನಟರಲ್ಲಿ ಇದೀಗ ಯಶ್ ಅವರು ಕೂಡ ಅಗ್ರಸ್ಥಾನದಲ್ಲಿ ನಿಂತಿದ್ದಾರೆ ಅಂತಾನೇ ಹೇಳಬಹುದು ಹೌದು ಕೆಜಿಎಫ್ ಸಿನಿಮಾ ತೆಗೆದ ಮೇಲೆ ಅವರ ಜೀವನವೇ ಸಂಪೂರ್ಣವಾಗಿ ಬದಲಾಗಿದೆ ಅಂತನೇ ಹೇಳಬಹುದು. ಯಶ್ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ಸಮಾಜದ ಬಗ್ಗೆ ಹಿತದೃಷ್ಟಿಯನ್ನು ಹೊಂದಿದ್ದರು ಯಶ್ ಅವರು ಇಂದು ಈ ಹಂತವನ್ನು ತಲುಪಿದ್ದರೂ ಕೂಡ ಸಾಮಾಜಿಕ ಕಳಕಳಿಯ ಬಗ್ಗೆ ಅವರು ಎಲ್ಲಿಯೂ ಕೂಡ ಮೈಮರೆತಿಲ್ಲ ಎಂಬುದಕ್ಕೆ ಇದೀಗ ಒಂದು ಘಟನೆ ಸಾಕ್ಷಿಯಾಗಿದೆ. ಹೌದು ಅವರ ಕೆಜಿಎಫ್ ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆಯಾಗಿದ್ದು ಇದೀಗ 1200 ಕೋಟಿಗೂ ಅಧಿಕ ಕಲೆಕ್ಷನ್ ಪಡೆದಿದೆ ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಭಾರತದಲ್ಲಿಯೇ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ.ಈ ಸಿನಿಮಾ ಹಿಟ್ ಆದ ನಂತರ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಒಂದು ಗೌರವ ಕಳೆ ಎಂಬುದು ದೊರೆತಿದೆ ಇದರ ಜೊತೆಗೆ ಇವರ ಬೇಡಿಕೆ ಕೂಡ ಹೆಚ್ಚಾಗಿದೆ ಅಂತಾನೇ ಹೇಳಬಹುದು.
ಈಗಾಗಲೇ ಹಲವಾರು ಜಾಹೀರಾತುಗಳಲ್ಲಿ ನಟನೆ ಮಾಡಿರುವುದನ್ನು ನೀವು ನೋಡಬಹುದಾಗಿದೆ ಅದೇ ರೀತಿಯಾಗಿ ಇದೀಗ ಪಾನ್ ಮಸಾಲೆ ಜಾಹೀರಾತು ಒಂದರಲ್ಲಿ ಯಶ್ ಅವರನ್ನು ಆಕ್ಟಿಂಗ್ ಮಾಡುವಂತೆ ಹೇಳುತ್ತಾರೆ. ಆದರೆ ಇದಕ್ಕೆ ಯಶ್ ಅವರು ಸುತಾರಾಂ ಇಲ್ಲ ಅಂತ ಹೇಳಿದ್ದಾರೆ ಈ ಒಂದು ಜಾಹಿರಾತುಗಾಗಿ ಅವರಿಗೆ ಬರೋಬ್ಬರಿ 50 ಕೋಟಿ ರೂಪಾಯಿಗಳ ಸಂಭಾವನೆಯನ್ನು ನೀಡುವುದಾಗಿ ಹೇಳಿದ್ದರೂ ಆದರೂ ಕೂಡ ರಾಕಿಂಗ್ ಸ್ಟಾರ್ ಯಶ್ ಅವರು ಈ ಒಂದು ಆಫರ್ ಅನ್ನು ತಿರಸ್ಕಾರ ಮಾಡಿದ್ದಾರೆ. ನಿಜಕ್ಕೂ ಕೂಡ ಈ ಮಾತನ್ನು ಕೇಳುತ್ತಿದ್ದರೆ ಸಂತೋಷವಾಗುತ್ತದೆ ಏಕೆಂದರೆ ಹಣ ಸಂಪಾದನೆ ಮಾಡಬೇಕು ಅಂತ ಯಶ್ ಅವರ ಮನಸ್ಸಿನಲ್ಲಿ ಇದ್ದರೆ ಖಂಡಿತವಾಗಿಯೂ ಕೂಡ ಈ ಜಾಹೀರಾತಿನಲ್ಲಿ ಅವರು ಆಕ್ಟಿಂಗ್ ಮಾಡುತ್ತಿದ್ದರು.
ಆದರೆ ಅದಕ್ಕಿಂತಲೂ ಮುಖ್ಯವಾಗಿ ಜನರ ಹಿತಾಸಕ್ತಿಯೇ ಮುಖ್ಯ ಎಂಬುವುದು ಯಶ್ ಅವರ ಅಭಿಪ್ರಾಯವಾಗಿದೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಒಬ್ಬ ನಾಯಕ ನಟ ಅಂದರೆ ಅವರನ್ನು ಹಿಂಬಾಲಿಸುವವರು ಅಂದರೆ ಫಾಲೋವರ್ಸ್ ಗಳು ಬಹಳಷ್ಟು ಜನ ಇರುತ್ತಾರೆ. ಒಬ್ಬ ನಟ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರೆ ಅದನ್ನು ನೋಡಿ ಇನ್ನಷ್ಟು ಜನ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ ಇದು ಸಾಮಾನ್ಯ ಜನರಿಗೆ ಸ್ಪೂರ್ತಿಯಾಗುತ್ತದೆ. ಅದೇ ನಟ ಗುಟ್ಕಾ ಅಥವಾ ಇನ್ನಿತರ ಸಾಮಾಜಿಕ ಆಸಕ್ತಿಯನ್ನು ಹಾಳು ಮಾಡುವಂತಹ ಕೆಲಸಕ್ಕೆ ಕೈ ಹಾಕಿದರೆ ಅದನ್ನು ನೋಡಿದಂತಹ ಯುವಜನತೆಯು ಕೂಡ ಕೆಟ್ಟ ದಾರಿಯನ್ನು ಹಿಡಿಯುತ್ತಾರೆ ಈ ಒಂದು ಕಾರಣಕ್ಕಾಗಿಯೇ ಯಶ್ ಅವರು ಈ ಜಾಹೀರಾತನ್ನು ನಿರಾಕರಿಸಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.