ಸಮಯ ಹಣ ಉಳಿತಾಯ ಇಡೀ ಕುಟುಂಬಕ್ಕೆ ಸೀಕ್ರೆಟ್ ಟಿಪ್ಸ್ ಇನ್ನು ಕಷ್ಟದ ಕೆಲಸ ತುಂಬಾ ಸುಲಭ…ಈ ವಿಡಿಯೋ ನೋಡಿ..ಅದ್ಬುತ ಕಿಚನ್ ಟಿಪ್ಸ್…

ಮೊದಲೇ ಈ ಟಿಪ್ಸ್ ಗೊತ್ತಾಗಿದ್ದರೆ ಒಳ್ಳೆದಿತ್ತು ಮನೆ ಕೆಲಸ ಫುಲ್ ಕಡಿಮೆ ಆಗುತಿತ್ತು, ಸಮಯ ಹಣ ಉಳಿತಾಯ, ಕಷ್ಟದ ಕೆಲಸ ಸುಲಭ ಆಗುತ್ತೆ.ನಾವು ಹೇಳುವಂತಹ ಈ ಟಿಪ್ಸ್ ಗಳನ್ನು ನೀವು ಫಾಲೋ ಮಾಡಿದರೆ ಕಂಡಿತವಾಗಿಯೂ ಕೂಡ ಹಣದ ಜೊತೆ ಸಮಯವನ್ನು ಕೂಡ ಉಳಿತಾಯ ಮಾಡಬಹುದಾಗಿದೆ. ಸಾಮಾನ್ಯವಾಗಿ ಮಹಿಳೆಯರ ಬಹುದೊಡ್ಡ ಸವಾಲು ಅಂದರೆ ಅಡುಗೆ ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಹಾಗೂ ಅದರಲ್ಲಿರುವ ಸಾಮಾಗ್ರಿಗಳನ್ನು ಕೆಡದೆ ಇರುವ ರೀತಿಯಲ್ಲಿ ನೋಡಿಕೊಳ್ಳುವುದು ಇದರ ಜೊತೆಗೆ ಮನೆಯನ್ನು ಯಾವಾಗಲೂ ಕೂಡ ಸ್ವಚ್ಛವಾಗಿ ಇಟ್ಟುಕೊಳ್ಳುವುದು. ಹಾಗಾಗಿ ಇಂದು ಅಡುಗೆ ಮನೆಗೆ ಸಂಬಂಧಪಟ್ಟ ಹಾಗೆ ಹಾಗೂ ಮನೆಯಲ್ಲಿ ಬಳಕೆ ಆಗದೇ ಇರುವಂತಹ ಪದಾರ್ಥಗಳಿಂದ ಯಾವ ರೀತಿಯಾದಂತಹ ಪ್ರಯೋಜನಕಾರಿ ಕೆಲಸಗಳಿಗೆ ಉಪಯೋಗ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇನೆ. ಮೊದಲನೇದಾಗಿ ನಿಂಬೆಹಣ್ಣು ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ನಿಂಬೆಹಣ್ಣಿಗೆ ಬೇಡಿಕೆ ಇರುವುದನ್ನು ನಾವು ನೋಡಬಹುದಾಗಿದೆ ಅದರಲ್ಲಿಯೂ ಕೂಡ ಇದರ ಬೆಲೆ ಈ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ ಹೀಗೆ ಒಮ್ಮೆ ಖರೀದಿ ಮಾಡಿದಂತಹ ನಿಂಬೆಹಣ್ಣನ್ನು

ಸಾಕಷ್ಟು ಜನ ಬಹಳ ದಿನಗಳವರೆಗೂ ಕೂಡ ಸಂಗ್ರಹಣೆ ಮಾಡಿ ಇಟ್ಟುಕೊಳ್ಳಬೇಕು ಅಂತ ಬಯಸುತ್ತಾರೆ. ನಿಂಬೆಹಣ್ಣು ಕೇವಲ ನಾಲ್ಕರಿಂದ ಐದು ದಿನಗಳವರೆಗೆ ಶೇಖರಣೆ ಮಾಡಿ ಇಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ ಒಣಗಿ ಹೋಗುತ್ತದೆ. ತಿಂಗಳು ಗಟ್ಟಲೆ ನೀವು ನಿಂಬೆಹಣ್ಣನ್ನು ಶುಚಿಯಾಗಿ ಹಾಗೂ ಫ್ರೆಶ್ ಆಗಿ ಇಟ್ಟುಕೊಳ್ಳಬೇಕು ಅಂತ ಅಂದುಕೊಂಡಿದ್ದರೆ ನಾವು ಹೇಳುವಂತಹ ಈ ಸರಳ ವಿಧಾನವನ್ನು ಅನುಸರಿಸಿ. ಮೊದಲಿಗೆ ನಿಂಬೆಹಣ್ಣು ಶುದ್ಧವಾಗಿ ತೊಳೆದುಕೊಳ್ಳಬೇಕು ತದನಂತರ ಯಾವುದಾದರೂ ಗಾಜಿನ ಅಥವಾ ಪ್ಲಾಸ್ಟಿಕ್ ಬಾಕ್ಸ್ ಗೆ ಹಾಕಿ.

WhatsApp Group Join Now
Telegram Group Join Now

ನಂತರ ಇದನ್ನು ಮುಚ್ಚಳದಿಂದ ಮುಚ್ಚಬೇಕು ಈ ರೀತಿ ಮಾಡಿ ಇದನ್ನು ಫ್ರಿಜ್ ನಲ್ಲಿ ಇಟ್ಟರೆ ಒಂದರಿಂದ 2 ತಿಂಗಳವರೆಗೂ ಕೂಡ ಶೇಖರಣೆ ಮಾಡಿ ಇಟ್ಟುಕೊಳ್ಳಬಹುದು ಯಾವುದೇ ಕಾರಣಕ್ಕೂ ಕೂಡ ಇದು ಕೆಡುವುದಿಲ್ಲ. ಎರಡನೆಯದಾಗಿ ನೀವು ಬಹಳ ದಿನದವರೆಗೂ ಕೂಡ ಶುಂಠಿಯನ್ನು ತಾಜಾವಾಗಿ ಸಂಗ್ರಹಣೆ ಮಾಡಿ ಇಟ್ಟುಕೊಳ್ಳಬೇಕು ಅಂತ ಅಂದುಕೊಂಡಿದ್ದರೆ ಒಂದು ಮಣ್ಣಿನ ಪಾಟ್ ತೆಗೆದುಕೊಂಡು ಅದರ ತುಂಬಾ ಮಣ್ಣನ್ನುತುಂಬಿ ಅದರ ಒಳಗೆ ಶುಂಠಿಯನ್ನು ಹಾಕಿ ಈ ರೀತಿ ಮಾಡುವುದರಿಂದ ವರ್ಷಾನುಗಟ್ಟಲೆ ಶುಂಠಿ ತಾಜಾವಾಗಿ ಇರುತ್ತದೆ.