ಕನ್ನಡ ಧಾರಾವಾಹಿ ತಾರೆಯರ ಸಹೋದರರು ಮತ್ತು ಸಹೋದರಿಯರು ಯಾರು ಗೊತ್ತಾ.ಸಾಮಾನ್ಯವಾಗಿ ಸೀರಿಯಲ್ ನಿಂದ ನಟಿಸಿ ಸಿನಿಮಾರಂಗಕ್ಕೆ ಹೋದಂತಹ ಬಹಳಷ್ಟು ನಟ ಮತ್ತು ನಟಿಯರು ಇದ್ದಾರೆ ಆದರೆ ನಟ ಮತ್ತು ನಟರಿಗೆ ಸಹೋದರ ಮತ್ತು ಸಹೋದರಿಯರು ಇರುವ ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ. ಹಾಗಾಗಿ ಇಂದು ನಿಮಗೆ ಸೀರಿಯಲ್ ನಲ್ಲಿ ನಟನೆ ಮಾಡಿದಂತಹ ನಟ ಮತ್ತು ನಟಿಯರ ಸಹೋದರಿ ಮತ್ತು ಸಹೋದರಿಯರ ಬಗ್ಗೆ ತಿಳಿಸುತ್ತೇವೆ ನೋಡಿ. ಮೊದಲನೇದಾಗಿ ರಾಧಿಕಾ ಪಂಡಿತ್ ಅವರು ಈಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವಂತಹ ನಂದಗೋಕುಲ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದರು. ರಾಧಿಕಾ ಪಂಡಿತ್ ಅವರು ಧಾರವಾಹಿಯಲ್ಲಿ ಮಾಡಿದ ನಂತರ ಮೊಗ್ಗಿನ ಮನಸು ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಗುರುತಿಸಿಕೊಳ್ಳುತ್ತಾರೆ. ಈ ಸಿನಿಮಾ ನಂತರ ಕನ್ನಡದ ಹಲವಾರು ದಿಗ್ಗಜ ನಾಯಕ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ ಇವರಿಗೆ ಒಬ್ಬ ತಮ್ಮ ಕೂಡ ಇದ್ದಾರೆ ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದಿರಲಿಲ್ಲ.
ಎರಡನೆಯದಾಗಿ ರಾಘವೇಂದ್ರ ಅಥವಾ ರಘು ಅಂತ ಕರೆಸಿಕೊಳ್ಳುವ ಅಂತಹ ಇವರು ನಮ್ಮನೆ ಯುವರಣಿ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ ಇದಕ್ಕೂ ಮೊದಲು ಮಿಸ್ಟರ್ ಮತ್ತು ಮಿಸಸ್ ರಂಗೇಗೌಡ ಎಂಬ ಧಾರಾವಾಹಿಯಲ್ಲಿ ನಾಯಕನಟರಾಗಿ ಕಾಣಿಸಿ ಕೊಳ್ಳುವುದರ ಮೂಲಕ ಬಹಳನೇ ಪ್ರಸಿದ್ಧಿ ಪಡೆದಿದ್ದರು. ಅವರಿಗೆ ಒಬ್ಬ ಸಹೋದರಿ ಇದ್ದು ನೋಡುವುದಕ್ಕೆ ಥೇಟ್ ರಘು ಅವರ ಮಾದರಿಯಲ್ಲೇ ಇದ್ದಾರೆ. ಮೂರನೆಯದಾಗಿ ರಾಜೇಶ್ ಇವರು ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ಸಿದ್ದಾರ್ಥ್ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಹಳ ಮನಮೋಹಕವಾಗಿ ನಟನೆ ಮಾಡಿದ್ದರು ಇವರಿಗೆ ಒಬ್ಬ ತಮ್ಮ ಇರುವಂತಹ ವಿಚಾರ ಸಾಕಷ್ಟು ಜನರಿಗೆ ತಿಳಿದಿರಲಿಲ್ಲ ಇವರ ತಮ್ಮ ಕೂಡ ಇದೀಗ ಕನ್ಯಾಕುಮಾರಿ ಎಂಬ ಧಾರಾವಾಹಿಯಲ್ಲಿ ನಾಯಕನಟನಾಗಿ ನಟನೆ ಮಾಡುತ್ತಿದ್ದಾರೆ.
ನಾಲ್ಕನೆಯದಾಗಿ ನಟಿ ಅನುಪ್ರಭಾಕರ್ ನಟಿ ಅನುಪ್ರಭಾಕರ್ ಅವರಿಗೆ ಒಬ್ಬ ಅಣ್ಣ ಇದ್ದಾನೆ ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದಿರಲಿಲ್ಲ ಆದರೆ ನಟಿ ಅನುಪ್ರಭಾಕರ್ ಅವರಿಗೆ ಒಬ್ಬ ಅಣ್ಣ ಇದ್ದರೆ ಇವರು ಯಾವುದೇ ಕ್ಷೇತ್ರದಲ್ಲಿ ಗುರುತಿಸಿಕೊಂಡಿಲ್ಲ. ಐದನೆಯದಾಗಿ ಸುಧಾ ಬೆಳವಾಡಿ ಇವರಿಗೂ ಕೂಡ ಒಬ್ಬ ಅಣ್ಣ ಇದ್ದಾರೆ ಹೌದು ಕೆಂಡಸಂಪಿಗೆ ಎಂಬ ಸಿನಿಮಾದಲ್ಲಿ ಇವರು ಪೊಲೀಸ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ರೀತಿಯಾಗಿ ಇನ್ನಷ್ಟು ನಟ-ನಟಿಯರ ಸಹೋದರ ಮತ್ತು ಸಹೋದರಿಯರನ್ನು ತಿಳಿಯಬೇಕಾದರೆ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.