ಕೆಜಿಎಫ್ ದಾಖಲೆ ಮುರಿಯಬೇಕು ಅಂತ ರವಿಚಂದ್ರನ್ ಯಾಕೆ ಹೇಳಿದ್ದು ಗೊತ್ತಾ.ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ. ಕರ್ನಾಟಕದಲ್ಲಿ ಇದುವರೆಗೂ ಕೂಡ ಕೆಜಿಎಫ್ ಸಿನಿಮಾ ಮಾಡಿದಂತಹ ಮೋಡಿ ಯಾವ ಸಿನಿಮಾ ಕೂಡ ಮಾಡಿಲ್ಲ ಅಂತ ಹೇಳಬಹುದು. ಅಷ್ಟೇ ಅಲ್ಲದೆ ದಕ್ಷಿಣ ಭಾರತದಲ್ಲಿ ಇದು ಒಂದು ಹಿಟ್ ಸಿನಿಮಾವಾಗಿ ಕಂಗೊಳಿಸಿದೆ ಮೊದಲು ಕನ್ನಡ ಸಿನಿಮಾ ಇಂಡಸ್ಟ್ರಿ ಕನ್ನಡ ನಟರು ಅಂದರೆ ಬಹಳ ಅಸಡ್ಡೆಯಿಂದ ನೋಡುತ್ತಿದ್ದರು ಬೇರೆ ಭಾಷೆಯ ನಟರು ಹಾಗೂ ಬೇರೆ ಭಾಷೆಯ ಇಂಡಸ್ಟ್ರಿಯವರು. ಆದರೆ ಇದೀಗ ಕೆಜಿಎಫ್ ಸಿನಿಮಾ ನೋಡಿದ ನಂತರ ನಮ್ಮ ಸಿನಿಮಾರಂಗಕ್ಕೆ ಗೌರವವನ್ನು ನೀಡುತ್ತಿದ್ದಾರೆ. ನಿಜಕ್ಕೂ ಕೂಡ ಯಶಸ್ಸು ದೊರೆಯುವುದಕ್ಕೆ ಮುಖ್ಯ ಕಾರಣ ಕೆಜಿಎಫ್ ಸಿನಿಮಾವನ್ನು ನಿರ್ಮಾಣ ಮಾಡಿದಂತಹ ಪ್ರಶಾಂತ್ ನೀಲ್ ಹಾಗೂ ಇದರಲ್ಲಿ ಬಹಳ ಅದ್ಭುತವಾಗಿ ಅಭಿನಯಿಸಿದಂತಹ ಯಶ್ ಅವರಿಗೆ ಸಲ್ಲುತ್ತದೆ ಅಂತಾನೇ ಹೇಳಬಹುದು.
ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಸಿನಿಮಾ ಈಗಾಗಲೇ ಸುಮಾರು ಸಾವಿರದ ಇನ್ನೂರು ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದೆ ಇದಕ್ಕಿಂತ ಹೆಚ್ಚಿಗೆ ಲಾಭ ಮಾಡುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಇದನ್ನು ಕೇಳಿದಂತಹ ರವಿಚಂದ್ರನ್ ಅವರು ಇದು ಕೇವಲ ಪ್ರಾರಂಭ ಕೆಜಿಎಫ್ ಸಿನಿಮಾ ದಾಖಲೆಯನ್ನು ಮುರಿಯಬೇಕು ಇದಕಿಂತಲೂ ಹೆಚ್ಚಿನ ಕೌತುಕತೆಯನ್ನು ಒಳಗೊಂಡಿರುವಂತಹ ಸಿನಿಮಾಗಳನ್ನು ನಾವು ನೀಡಬೇಕು ಕೆಜಿಎಫ್ ಸಿನಿಮಾವನ್ನು ನೋಡಿ ಅದನ್ನು ಸಂಭ್ರಮಿಸುವುದು ಮಾತ್ರವಲ್ಲದೆ ಮುಂದೆ ಬರುವಂತಹ ದಿನಗಳಲ್ಲಿ ಇಂತಹದೇ ಸಿನಿಮಾವನ್ನು ಸೃಷ್ಟಿ ಮಾಡಿ ಭಾರತೀಯ ಚಿತ್ರರಂಗಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿ ಅಂದರೆ ಏನು ಎಂಬುದನ್ನು ತೋರಿಸಬೇಕು ಅಂತ ಹೇಳಿದ್ದಾರೆ.
ನಿಜಕ್ಕೂ ಕೂಡ ಕೆಜಿಎಫ್ ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಒಂದು ಮೈಲಿಗಲ್ಲು ಅಂತಲೇ ಹೇಳಬಹುದು ಇದುವರೆಗೂ ಕೂಡ ಕನ್ನಡದ ಯಾವ ಸಿನಿಮಾವು ಕೂಡ ಇಷ್ಟು ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗಿರಲಿಲ್ಲ. ಅಷ್ಟೇ ಅಲ್ಲದೆ ಇಷ್ಟು ದೊಡ್ಡ ಮೊತ್ತದ ಲಾಭವನ್ನು ಕೂಡ ಗಳಿಸಿಕೊಂಡಿರಲಿಲ್ಲ. ಇದನ್ನು ನೋಡಿದಂತಹ ಉತ್ತರ ಭಾರತದ ಬಾಲಿವುಡ್ ಸಿನಿಮಾ ರಂಗವೇ ದಂಗಾಗಿ ಹೋಗಿದ್ದಾರೆ. ಢನೇ ಆದರೂ ಕೂಡ ನಮ್ಮ ಕರ್ನಾಟಕಕ್ಕೆ ಕೆಜಿಎಫ್ ಸಿನಿಮಾ ನಿಜಕ್ಕೂ ಕೂಡ ಒಂದು ಮೈಲುಗಲ್ಲು ಅಂತಾನೆ ಹೇಳಬಹುದು.