ಶಕ್ತಿಶಾಲಿ ಸುಬ್ರಮಣ್ಯನ ಅಖಂಡ ಅನುಗ್ರಹದಿಂದ ಇಂದಿನ ರಾಶಿಫಲ,ನಿಮ್ಮ ಅದೃಷ್ಟದ ಬಣ್ಣ,ಸಮಯ ಹಾಗೂ ದಿನದ ಲಾಭ ನಷ್ಟ ತಿಳಿಯಿರಿ..

4 ಮೇ 2022 ಬುಧವಾರದ ರಾಶಿ ಭವಿಷ್ಯ.

WhatsApp Group Join Now
Telegram Group Join Now

ಮೇಷ ರಾಶಿ: ಮನೆಯ ವಾತಾವರಣ ಇಂದು ಉತ್ತಮವಾಗಿರುವುದಿಲ್ಲ. ಕುಟುಂಬದ ಸದಸ್ಯರ ಜೊತೆಗಿನ ನಿಮ್ಮ ಸಂಬಂಧವು ಹದಗೆಡುವ ಸಾಧ್ಯತೆಗಳಿರುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮ ನಡವಳಿಕೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ಇಲ್ಲವಾದರೆ ಇದರಿಂದ ನೀವು ಭವಿಷ್ಯದಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ. ಅದೃಷ್ಟದ ಸಂಖ್ಯೆ- 9, ಅದೃಷ್ಟದ ಬಣ್ಣ- ಗುಲಾಬಿ ಉತ್ತಮ ಸಮಯ- ಬೆಳಗ್ಗೆ 10:15 ಇಂದು ಮಧ್ಯಾಹ್ನ 1:30 ರವರೆಗೆ.

ವೃಷಭ ರಾಶಿ: ಇಂದು ನಿಮಗೆ ಉತ್ತಮ ಬೆಳವಣಿಗೆಯ ದಿನವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯುವ ಸಾಧ್ಯತೆಗಳಿವೆ. ಉದ್ಯೋಗಸ್ಥರು ಕಚೇರಿಯಲ್ಲಿ ಎಲ್ಲರ ಹೊಗಳಿಕೆಗೆ ಪಾತ್ರರಾಗುತ್ತಾರೆ. ಅಲ್ಲದೆ ಇಂದು ನಿಮ್ಮ ಎಲ್ಲಾ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೆ ಸುಲಭವಾಗಿ ಸಾಗುತ್ತದೆ.
ಅದೃಷ್ಟದ ಸಂಖ್ಯೆ-8 ಅದೃಷ್ಟದ ಬಣ್ಣ-ಬಿಳಿ ಉತ್ತಮ ಸಮಯ- 05:15 ರಿಂದ 8:30 ರವರೆಗೆ.

ಸುಮಶ್ರೀ youtube ವಾಹಿನಿಗೆ ಆತ್ಮೀಯವಾದ ಸ್ವಾಗತ.

ಪ್ರತಿದಿನ ಬೆಳಿಗ್ಗೆ 06:00 ಗೆ ಪಂಚಾಂಗವನ್ನು ವೀಕ್ಷಿಸಲು ನಮ್ಮ Sumashri SMS channel subscribe ಮಾಡಿ

ಈ ದಿನದಂದು ಮೃಗಶಿರಾ ನಕ್ಷತ್ರವನ್ನು ಮತ್ತು ಸೋಮದೇವನನ್ನು ಸ್ತುತಿಸಿ ಸಕಲದೋಷಗಳನ್ನು ನಿವಾರಿಸಿಕೊಳ್ಳೋಣ.

ಶ್ಲೋಕ
ಮೃಗಶೀರ್ಷಂ ತು ನಕ್ಷತ್ರಂ ಸೋಮೋ ಯಸ್ಯಾಧಿದೇವತಾ।
ಯಸ್ಯ ಧಾಮ ಪ್ರಿಯಂ ಲೋಕಃ ವರ್ಧತೇಽನೇಕಧಾಽವ್ರಣಮ್॥

ಅರ್ಥ-
ಮೃಗಶಿರಾ ನಕ್ಷತ್ರವು ಹಾಗು ಮೃಗಶಿರಾ ನಕ್ಷತ್ರದ ಅಧಿದೇವತೆಯಾದ ನಮ್ಮ ಭೂಲೋಕವನ್ನೇ ತನ್ನ ಪ್ರೀತಿಯ ಸ್ವರ್ಗವನ್ನಾಗಿಸಿಕೊಂಡ ಸೋಮದೇವನು ಈ ಲೋಕದಲ್ಲಿ ನಮ್ಮೆಲ್ಲರ ಸ್ವಾಸ್ಥ್ಯವನ್ನು ವರ್ಧಿಸುವ ಮೂಲಕ ನಮ್ಮನ್ನು ರಕ್ಷಿಸಲಿ

ಇಂದಿನ ಪಂಚಾಂಗ

ಶುಭಕೃನ್ನಾಮಸಂವತ್ಸರಃ
ಉತ್ತರಾಯಣಮ್
ವಸಂತ-ಋತುಃ
ವೈಶಾಖಮಾಸಃ
ಶುಕ್ಲಪಕ್ಷಃ
ಚತುರ್ಥೀತಿಥಿಃ
ಮೃಗಶಿರಾನಕ್ಷತ್ರಮ್
ಅತಿಗಂಡನಾಮಯೋಗಃ
ವಣಿಕ್ಕರಣಮ್
ಬುಧವಾಸರಃ
ಸೂರ್ಯೋದಯ – 05:59 A.M
ಸೂರ್ಯಾಸ್ತ – 6:34 P.M
ರಾಹುಕಾಲದ ಸಮಯ – 12:00 – 1.00 P.M

ಪಂಚಾಂಗ ಶ್ರವಣವನ್ನು ಮಾಡುವವರಿಗಾಗಿ ಮಾಡಿರುವ ವಿಶೇಷ ವೀಡಿಯೋ.

ಪ್ರತಿನಿತ್ಯ ಪಂಚಾಂಗ ಶ್ರವಣದಿಂದ ಏನು ಲಾಭ?

ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯ ವರ್ಧನಂ|
ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗನಿವಾರಣಮ್||
ಕರಣಾತ್ ಕಾರ್ಯಸಿದ್ಧಿಃ ಸ್ಯಾತ್ ಪಂಚಾಂಗಫಲಮುತ್ತಮಮ್||

ಅರ್ಥ – ತಿಥಿಯಿಂದ ಐಶ್ವರ್ಯವು ಲಭಿಸುವುದು, ವಾರದಿಂದ ಆಯುಷ್ಯದ ಹೆಚ್ಚಳವಾಗುವುದು, ನಕ್ಷತ್ರದಿಂದ ಪಾಪದ ನಿವಾರಣೆಯಾಗುವುದು, ಯೋಗದಿಂದ ರೋಗಗಳ ನಿವಾರಣೆಯಾಗುವುದು, ಕರಣದಿಂದ ಎಲ್ಲ ಕೆಲಸಗಳೂ ಸುಲಭವಾಗುವವು ಆದ್ದರಿಂದ ಈರೀತಿ ಉತ್ತಮ ಫಲಗಳನ್ನೊಳಗೊಂಡ ಪಂಚಾಂಗವನ್ನು ನಾವು ಕೇಳಿ ಧನ್ಯರಾಗೋಣ.

ಈ ರೀತಿಯ ಶ್ಲೋಕಗಳನ್ನು ಪ್ರತಿದಿನ ಆಲಿಸುವುದು ತುಂಬಾ ಉತ್ತಮ. ಹೀಗಾಗಿ ಈ ಪಂಚಾಂಗವನ್ನು ದಿನಕ್ಕೊಂದು ದೇವತಾ ಸ್ತುತಿಯೊಂದಿಗೆ ನಮ್ಮ Sumashri SMS YouTube channel ನಲ್ಲಿ ಪ್ರತಿದಿನ ಎಲ್ಲರ ಉಪಯೋಗಕ್ಕಾಗಿ ತಿಳಿಸಿಕೊಡಲಾಗುತ್ತಿದೆ.

ಮಿಥುನ ರಾಶಿ: ಇಂದು ಕೆಲಸದಲ್ಲಿ ತುಂಬಾ ದಣಿವನ್ನು ಅನುಭವಿಸುತ್ತೀರಿ. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ಒಂದು ಪ್ರಮುಖವಾದ ಕೆಲಸವನ್ನು ಪೂರ್ಣಗೊಳಿಸುವಲ್ಲಿ ವಿಳಂಬ ಗೊಳ್ಳುವ ಸಾಧ್ಯತೆಗಳಿವೆ. ಹಾಗೂ ಇಂದು ನಿಮ್ಮ ಬಾಸ್ ನಿಮ್ಮ ಮೇಲೆ ಕೋಪಗೊಳ್ಳಬಹುದು.
ಅದೃಷ್ಟದ ಸಂಖ್ಯೆ- 6 ಅದೃಷ್ಟದ ಬಣ್ಣ- ನೇರಳೆ ಉತ್ತಮ ಸಮಯ- ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30 ರವರೆಗೆ.

ಕರ್ಕಾಟಕ ರಾಶಿ: ಗ್ರಹಗಳ ಋಣಾತ್ಮಕ ಬದಲಾವಣೆ ಕಾರಣದಿಂದ ಇಂದು ನಿಮ್ಮ ಯಾವುದಾದರೂ ಪ್ರಮುಖ ಕೆಲಸಗಳಲ್ಲಿ ಅಡಚಣೆಗಳು ಉಂಟಾಗುವ ಸಾಧ್ಯತೆಗಳಿವೆ. ಅಂತಹ ಪರಿಸ್ಥಿತಿಯಲ್ಲಿ ನೀವು ತುಂಬಾ ನಿರಾಶೆಗೊಳ್ಳುವಿರಿ. ಕೆಲಸದ ವಿಚಾರವಾಗಿ ಹೇಳುವುದಾದರೆ ಉದ್ಯೋಗಗಳಿಗೆ ತುಂಬಾ ಒಳ್ಳೆಯ ದಿನವಾಗಿರುತ್ತದೆ. ಅದೃಷ್ಟದ ಸಂಖ್ಯೆ-1 ಅದೃಷ್ಟದ ಬಣ್ಣ- ಕೆಂಪು ಉತ್ತಮ ಸಮಯ- ಬೆಳಿಗ್ಗೆ 06:30ರಿಂದ 9:45 ರವರೆಗೆ.

ಸಿಂಹ ರಾಶಿ: ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ ಮತ್ತು ನಿಮ್ಮ ಉತ್ತಮ ಗುಣಗಳನ್ನು ಪ್ರಶಂಸಿಸಲಾಗುತ್ತದೆ. ಇಂದು ನೀವು ಕುಟುಂಬಸ್ಥರ ಜೊತೆ ಸೇರಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶಗಳನ್ನು ಪಡೆಯಬಹುದು. ಕುಟುಂಬದ ಸದಸ್ಯರ ಜೊತೆಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ.
ಅದೃಷ್ಟದ ಸಂಖ್ಯೆ- 8, ಅದೃಷ್ಟದ ಬಣ್ಣ- ಹಸಿರು ಉತ್ತಮ ಸಮಯ- 12:30 ರಿಂದ 3 :45ರವರೆಗೆ.

ಕನ್ಯಾ ರಾಶಿ: ನೀವು ಮನೆಯಿಂದ ಕೆಲಸ ಮಾಡುತ್ತಿದ್ದರೆ ನಿಮ್ಮ ಉನ್ನತ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರಬೇಕು. ಇಂದು ಅಂತರ್ಜಾಲದ ಸಹಾಯದಿಂದ ಕೆಲಸ ಮಾಡುವವರು ಉತ್ತಮ ಲಾಭಗಳನ್ನು ಪಡೆಯಬಹುದು. ತಮ್ಮ ಜೀವನದ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ. ಮನೆಯ ವಾತಾವರಣವು ಕೂಡ ಸಂತೋಷದಿಂದ ಕೂಡಿರುತ್ತದೆ.
ಅದೃಷ್ಟದ ಸಂಖ್ಯೆ- 7 ಅದೃಷ್ಟದ ಬಣ್ಣ-ಗುಲಾಬಿ ಉತ್ತಮ ಸಮಯ- ಬೆಳಿಗ್ಗೆ 6:15 ರಿಂದ 9:30 ರವರೆಗೆ.

ತುಲಾ ರಾಶಿ: ಹೋಟೆಲ್ ಅಥವಾ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುವಂತಹ ಜನರು ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಉದ್ಯೋಗಿಗಳು ಹಿರಿಯ ಅಧಿಕಾರಿಗಳೊಂದಿಗೆ ತಮ್ಮ ಸಂಬಂಧವನ್ನು ಸರಿ ದೂಗಿಸಿಕೊಳ್ಳಬೇಕು. ಸಣ್ಣಪುಟ್ಟ ಕೆಲಸಗಳನ್ನು ಸಹ ನಿರ್ಲಕ್ಷ ಮಾಡದೆ ಪ್ರೀತಿಸಿ. ಹಣದ ಪರಿಸ್ಥಿತಿ ಉತ್ತಮವಾಗಿರಲಿದೆ.
ಅದೃಷ್ಟ ಸಂಖ್ಯೆ-9 ಅದೃಷ್ಟ ಬಣ್ಣ-ಕಂದು ಉತ್ತಮ ಸಮಯ- 3:15 ರಿಂದ ಸಂಜೆ 6:00ರವರೆಗೆ.

ವೃಶ್ಚಿಕ ರಾಶಿ: ಇಂದು ನಿಮಗೆ ಬಹಳ ಕಾರ್ಯನಿರತವಾದ ದಿನ ಆಗಿರುತ್ತದೆ. ಇದಕ್ಕಾಗಿ ನೀವು ಹೆಚ್ಚು ಪ್ರಯಾಣಿಸುವ ಸಂದರ್ಭಗಳು ಬರಬಹುದು. ಇಂದು ನೀವು ಯಾರನ್ನು ಭೇಟಿ ಮಾಡಿದರು ಅದು ಕೆಲಸದ ವಿಚಾರವಾಗಿ ಆಗಿರುತ್ತದೆ. ನಿಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆ ಹೆಚ್ಚು ಗಮನ ಹರಿಸಿ ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆಗಳು ಬರುತ್ತದೆ.
ಅದೃಷ್ಟದ ಸಂಖ್ಯೆ-2 ಅದೃಷ್ಟದ ಬಣ್ಣ-ಬಿಳಿ ಉತ್ತಮ ಸಮಯ 6:45 ರಿಂದ ರಾತ್ರಿ 10 ರವರೆಗೆ.

ಧನಸ್ಸು ರಾಶಿ: ಮನೆಯ ವಾತಾವರಣ ಶಾಂತಿಯಿಂದ ಇರಬೇಕು ಎನ್ನುವುದಾದರೆ ನಿಮ್ಮ ಕುಟುಂಬಸ್ಥರ ಜೊತೆ ಅನವಶ್ಯಕವಾದ ವಾದವನ್ನು ತಪ್ಪಿಸಿ. ಎಲ್ಲರ ಜೊತೆ ಉತ್ತಮವಾದ ಸಂಬಂಧವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ. ಹಣದ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಗಳಿವೆ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ
ಅದೃಷ್ಟದ ಸಂಖ್ಯೆ 8, ಅದೃಷ್ಟದ ಬಣ್ಣ- ನೇರಳೆ ಉತ್ತಮ ಸಮಯ- ಬೆಳಿಗ್ಗೆ 8:45ರಿಂದ ಮಧ್ಯಾಹ್ನ 12ರವರೆಗೆ

ಮಕರ ರಾಶಿ: ಕಚೇರಿಯಲ್ಲಿ ಬಾಕಿ ಇರುವ ಕೆಲಸಗಳ ಪಟ್ಟಿ ಹೆಚ್ಚಾಗಬಹುದು. ನಿಮ್ಮ ಎಲ್ಲ ಕೆಲಸಗಳನ್ನ ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಿ. ಇಲ್ಲವಾದರೆ ನೀವೇ ತೊಂದರೆಗೆ ಸಿಲುಕಿಕೊಳ್ಳಬಹುದು. ಮರದ ವ್ಯಾಪಾರ ಮಾಡುವವರು ಆರ್ಥಿಕ ಲಾಭವನ್ನು ಗಳಿಸುವ ಸಾಧ್ಯತೆಗಳಿವೆ.
ಅದೃಷ್ಟದ ಸಂಖ್ಯೆ- 8 ಅದೃಷ್ಟದ ಬಣ್ಣ-ಹಳದಿ ಉತ್ತಮ ಸಮಯ- ಬೆಳಿಗ್ಗೆ 7:30 ರಿಂದ 10:45 ರವರೆಗೆ.

ಕುಂಭ ರಾಶಿ: ನಿಮಗೆ ಮಧುಮೇಹ ಇದ್ದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಿಶೇಷವಾಗಿ ನಿಮ್ಮ ಆಹಾರದಲ್ಲಿ ನಿರ್ಲಕ್ಷ ವಹಿಸಬೇಡಿ. ಇಂದು ನೀವು ನಿಮ್ಮ ಸಂಗಾತಿಯ ಜೊತೆ ವಾದವನ್ನು ಕೂಡ ಮಾಡಬಹುದು. ಇಂದು ನೀವು ಯಾವುದೇ ವಿಷಯದಲ್ಲಿ ಸುಳ್ಳನ್ನು ಹೇಳದೆ ಸ್ಪಷ್ಟತೆಯಿಂದ ಇರುವುದು ಉತ್ತಮ. ಅದೃಷ್ಟದ ಸಂಖ್ಯೆ- 6 ಅದೃಷ್ಟದ ಬಣ್ಣ- ನೀಲಿ ಉತ್ತಮ ಸಮಯ- ಸಂಜೆ 4:15 ರಿಂದ 7:30 ರವರೆಗೆ

ಮೀನಾ ರಾಶಿ: ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಉತ್ತೇಜನಗಳು ಸಿಗುತ್ತದೆ. ಹಣಕಾಸು ವ್ಯವಹಾರ ಮಾಡುವವರು ಹೆಚ್ಚು ಜಾಗರೂಕರಾಗಿರಬೇಕು. ಇಲ್ಲವಾದರೆ ಭಾರಿ ನಷ್ಟ ಸಂಭವಿಸುವುದು. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ ಇಂದು ಕುಟುಂಬದ ಜೊತೆ ಸಂತಸದ ಕ್ಷಣಗಳನ್ನು ಕಳೆಯುತ್ತೀರಿ. ಅದೃಷ್ಟದ ಸಂಖ್ಯೆ- 3 ಅದೃಷ್ಟದ ಬಣ್ಣ-ಕಿತ್ತಳೆ ಉತ್ತಮ ಸಮಯ- ಬೆಳಗ್ಗೆ 9ರಿಂದ 12:15ರವರೆಗೆ.

[irp]