ಆಯುರ್ವೇದದ ಪ್ರಕಾರ ನಮ್ಮ ದಿನಚರಿ ಹೇಗಿರಬೇಕು ಗೊತ್ತಾ.ಸಾಮಾನ್ಯವಾಗಿ ನಮ್ಮ ಪುರಾತನ ಕಾಲದಿಂದಲೂ ಕೂಡ ಹಿರಿಯರು ಆಯುರ್ವೇದ ಪದ್ಧತಿಯನ್ನು ರೂಢಿಸಿಕೊಂಡು ಬಂದಿರುವುದನ್ನು ನಾವು ನೋಡಿದ್ದೇವೆ. ಆಯುರ್ವೇದ ಎಂಬ ಪದವು ಯಾವ ಅರ್ಥವನ್ನು ನೀಡುತ್ತದೆ ಎಂಬುದನ್ನು ನೋಡುವುದಾದರೆ ಆಯೂರ್ ಎಂದರೆ ಆರೋಗ್ಯ ವೇದ ಅಂದರೆ ಆರೋಗ್ಯವನ್ನು ಯಾವ ರೀತಿಯಾಗಿ ಮಾಡಿಕೊಳ್ಳಬಹುದು ಎಂಬ ವಿಜ್ಞಾನವಾಗಿದೆ. ಇನ್ನು ಆಯುರ್ವೇದದ ಪ್ರಕಾರ ನಾವು ಬೆಳಿಗ್ಗೆ ಯಾವ ಸಮಯದಲ್ಲಿ ಎದ್ದೇಳಬೇಕು ಎಂಬುದನ್ನು ನಿರ್ಧಾರ ಮಾಡಬೇಕಾಗುತ್ತದೆ. ಅದರಲ್ಲೂ ನೀವು ಬ್ರಾಹ್ಮೀ ಮುಹೂರ್ತವನ್ನು ಆಯ್ಕೆ ಮಾಡಿಕೊಂಡರೆ ತುಂಬಾನೆ ಒಳ್ಳೆಯದು ಹೌದು 3-20 ರಿಂದ 3-40 ರ ವರೆಗೆ ಇರುವಂತಹ ಸಮಯವನ್ನು ನಾವು ಮೊದಲ ಘಟ್ಟದ ಬ್ರಾಹ್ಮಿ ಮುಹೂರ್ತ ಎಂದು ಕರೆಯುತ್ತೇವೆ.3-40 ರಿಂದ 4-40 ರವರೆಗೆ ಇರುವಂತಹ ಸಮಯವನ್ನು ನಾವು ಎರಡನೇ ಹಂತದ ಬ್ರಾಹ್ಮೀ ಮುಹೂರ್ತ ಎಂದು ಕರೆಯುತ್ತೇವೆ 4-40 ರಿಂದ 5-40 ವರೆಗೆ ಇರುವಂತಹ ಸಮಯವನ್ನು ನಾವು ಮೂರನೇ ಹಂತದ ಬ್ರಾಹ್ಮೀ ಮುಹೂರ್ತ ಎಂದು ಕರೆಯುತ್ತೇವೆ. ಈ ಮೂರು ಕಾಲಘಟ್ಟದಲ್ಲಿ ನೀವು ಯಾವುದಾದರೂ ಒಂದು ಕಾಲಘಟ್ಟದಲ್ಲಿ ಎದ್ದು ನಿಮ್ಮ ದಿನನಿತ್ಯ ಕರ್ಮವನ್ನು ಮುಗಿಸಿ ಕೊಳ್ಳಬೇಕಾಗುತ್ತದೆ
ಈ ರೀತಿಯಾಗಿ ಆಯುರ್ವೇದದಲ್ಲಿ ತಿಳಿಸಲಾಗಿದೆ. ನಂತರ ದಂತಕ್ಷಯವನ್ನು ಸಿದ್ದ ಮಾಡಿಕೊಳ್ಳಬೇಕು ಅಂದರೆ ನಾವು ಹಲ್ಲುಜ್ಜಬೇಕು ಸಾಮಾನ್ಯವಾಗಿ ಪೇಸ್ಟನ್ನು ಬಳಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಕೂಡ ಆಯುರ್ವೇದದಲ್ಲಿ ಪೇಸ್ಟನ್ನು ಬಳಕೆ ಮಾಡುವುದಿಲ್ಲ ಬದಲಾಗಿ ಮನೆಯಲ್ಲೇ ತಯಾರಿಸಿದ ಚೂರ್ಣವನ್ನು ಬಳಕೆ ಮಾಡಬೇಕಾಗುತ್ತದೆ.
ಈ ಚೂರ್ಣ ಮಾಡುವ ವಿಧಾನ ಹೇಗೆ ಅಂದರೆ ಜಾಲಿಮರ ಹಾಗೂ ಬೇವಿನ ಮರದ ತೊಗಟೆಯನ್ನು ತೆಗೆದುಕೊಂಡು ಬಂದು ನೆರಳಿನಲ್ಲಿ ಅದನ್ನು ಒಣಗಿಸಿ ಅದನ್ನು ಪೌಡರ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಸ್ವಲ್ಪ ಸೈಂಧವ ಲವಣವನ್ನು ಹಾಕಿ ನಂತರ ಸ್ವಲ್ಪ ಅರಶಿನದ ಪುಡಿಯನ್ನು ಹಾಕಿ ಎಲ್ಲವನ್ನು ಕೂಡಾ ಮಿಕ್ಸ್ ಮಾಡಿಕೊಂಡು ಈ ಒಂದು ಮಿಶ್ರಣದಿಂದ ನೀವು ಹಲ್ಲು ಹುಜ್ಜಿದರೆ ನೂರು ವರ್ಷವಾದರೂ ಕೂಡ ನಿಮಗೆ ಯಾವುದೇ ರೀತಿಯಾದಂತಹ ಹಲ್ಲುಗಳಿಗೆ ಸಂಬಂಧಪಟ್ಟಂತಹ ಕಾಯಿಲೆಗಳು ಬರುವುದಿಲ್ಲ ಇದು ನೂರಕ್ಕೆ ನೂರರಷ್ಟು ಖಚಿತ. ಇದೇ ರೀತಿಯ ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕಾದರೆ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.