5 ಮೇ 2022 ಗುರುವಾರದ ರಾಶಿ ಭವಿಷ್ಯ
ಮೇಷ ರಾಶಿ: ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಾ ಇರುವ ಜನರಿಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ. ಹಲವು ದಿನಗಳಿಂದ ನೀವು ಕೆಲಸದ ವಿಷಯದಲ್ಲಿ ಪಡುತ್ತಿರುವ ಶ್ರಮವನ್ನು ನಿಮ್ಮ ಬಾಸ್ ಗುರುತಿಸುತ್ತಾರೆ. ವಿದೇಶದಲ್ಲಿ ಹೋಗಿ ಕೆಲಸ ಮಾಡುವ ಇಚ್ಛೆ ಉಳ್ಳವರಿಗೆ ಆಸೆ ನೆರವೇರುವ ಸೂಚನೆಗಳು ಸಿಗುತ್ತವೆ.
ಅದೃಷ್ಟದ ಸಂಖ್ಯೆ -2, ಅದೃಷ್ಟದ ಬಣ್ಣ- ಹಳದಿ ಉತ್ತಮ ಸಮಯ – ಸಂಜೆ 5:00ರಿಂದ ರಾತ್ರಿ 7:00ರವರೆಗೆ.
ವೃಷಭ ರಾಶಿ: ನಿಮಗೆ ಈ ದಿನ ಬೇಸರದ ದಿನವಾಗಬಹುದು. ಹಾಗಾಗಿ ನೀವು ನಿಮ್ಮ ಕೆಲಸಗಳ ಕಡೆ ಹೆಚ್ಚು ಗಮನ ಕೊಡುವುದು ಒಳ್ಳೆಯದು. ದೊಡ್ಡ ವ್ಯವಹಾರ ಏನಾದರೂ ಶುರು ಮಾಡುವ ಯೋಚನೆಯಲ್ಲಿದ್ದರೆ ಮತ್ತೊಂದು ಬಾರಿ ಎಲ್ಲವನ್ನು ಪರಿಶೀಲಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು. ನೌಕರಸ್ಥ ರಿಗೂ ಕೂಡ ಸಾಮಾನ್ಯವಾದ ದಿನವಾಗಿರುತ್ತದೆ.
ಅದೃಷ್ಟದ ಸಂಖ್ಯೆ-1, ಅದೃಷ್ಟದ ಬಣ್ಣ-ಹಸಿರು ಉತ್ತಮ ಸಮಯ- ಬೆಳಗ್ಗೆ 6:00ರಿಂದ 11:00ರವರೆಗೆ
ಸುಮಶ್ರೀ youtube ವಾಹಿನಿಗೆ ಆತ್ಮೀಯವಾದ ಸ್ವಾಗತ.
ಪ್ರತಿದಿನ ಬೆಳಿಗ್ಗೆ 06:00 ಗೆ ಪಂಚಾಂಗವನ್ನು ವೀಕ್ಷಿಸಲು ನಮ್ಮ Sumashri SMS channel subscribe ಮಾಡಿ
ಈ ದಿನದಂದು ಆರ್ದ್ರಾ ನಕ್ಷತ್ರವನ್ನು ಮತ್ತು ರುದ್ರದೇವನನ್ನು ಸ್ತುತಿಸಿ ಸಕಲದೋಷಗಳನ್ನು ನಿವಾರಿಸಿಕೊಳ್ಳೋಣ.
ಶ್ಲೋಕ
ಆರ್ದ್ರಾನಕ್ಷತ್ರಮವ್ಯಾನ್ನಃ ರುದ್ರೋ ಯಸ್ಯಾಧಿದೇವತಾ।
ಪೂಜ್ಯೋಽಮರಾಣಾಂ ಸರ್ವೇಷಾಂ ಸ ವೈ ಶಂ ಸಂತನೋತು ನಃ॥
ಅರ್ಥ-
ಆರ್ದ್ರಾ ನಕ್ಷತ್ರವು ಹಾಗು ಆರ್ದ್ರಾ ನಕ್ಷತ್ರದ ಅಧಿದೇವತೆಯಾದ ಎಲ್ಲ ಅಮರಲ್ಲಿಯೂ ಅತ್ಯಂತ ಪೂಜ್ಯನಾದ ರುದ್ರ ದೇವನು ನಮ್ಮನ್ನು ರಕ್ಷಿಸುವ ಮೂಲಕ ನಮಗೆಲ್ಲ ಶುಭವನ್ನುಂಟುಮಾಡಲಿ
ಇಂದಿನ ಪಂಚಾಂಗ
ಶುಭಕೃನ್ನಾಮಸಂವತ್ಸರಃ
ಉತ್ತರಾಯಣಮ್
ವಸಂತ-ಋತುಃ
ವೈಶಾಖಮಾಸಃ
ಶುಕ್ಲಪಕ್ಷಃ
ಚತುರ್ಥೀತಿಥಿಃ
ಆರ್ದ್ರಾನಕ್ಷತ್ರಮ್
ಸುಕರ್ಮನಾಮಯೋಗಃ
ಭದ್ರಾಕರಣಮ್
ಗುರುವಾಸರಃ
ಸೂರ್ಯೋದಯ – 05:59 A.M
ಸೂರ್ಯಾಸ್ತ – 6:34 P.M
ರಾಹುಕಾಲದ ಸಮಯ – 1:30 – 3.30 P.M
ಪಂಚಾಂಗ ಶ್ರವಣವನ್ನು ಮಾಡುವವರಿಗಾಗಿ ಮಾಡಿರುವ ವಿಶೇಷ ವೀಡಿಯೋ.
ಪ್ರತಿನಿತ್ಯ ಪಂಚಾಂಗ ಶ್ರವಣದಿಂದ ಏನು ಲಾಭ?
ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯ ವರ್ಧನಂ|
ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗನಿವಾರಣಮ್||
ಕರಣಾತ್ ಕಾರ್ಯಸಿದ್ಧಿಃ ಸ್ಯಾತ್ ಪಂಚಾಂಗಫಲಮುತ್ತಮಮ್||
ಅರ್ಥ – ತಿಥಿಯಿಂದ ಐಶ್ವರ್ಯವು ಲಭಿಸುವುದು, ವಾರದಿಂದ ಆಯುಷ್ಯದ ಹೆಚ್ಚಳವಾಗುವುದು, ನಕ್ಷತ್ರದಿಂದ ಪಾಪದ ನಿವಾರಣೆಯಾಗುವುದು, ಯೋಗದಿಂದ ರೋಗಗಳ ನಿವಾರಣೆಯಾಗುವುದು, ಕರಣದಿಂದ ಎಲ್ಲ ಕೆಲಸಗಳೂ ಸುಲಭವಾಗುವವು ಆದ್ದರಿಂದ ಈರೀತಿ ಉತ್ತಮ ಫಲಗಳನ್ನೊಳಗೊಂಡ ಪಂಚಾಂಗವನ್ನು ನಾವು ಕೇಳಿ ಧನ್ಯರಾಗೋಣ.
ಈ ರೀತಿಯ ಶ್ಲೋಕಗಳನ್ನು ಪ್ರತಿದಿನ ಆಲಿಸುವುದು ತುಂಬಾ ಉತ್ತಮ. ಹೀಗಾಗಿ ಈ ಪಂಚಾಂಗವನ್ನು ದಿನಕ್ಕೊಂದು ದೇವತಾ ಸ್ತುತಿಯೊಂದಿಗೆ ನಮ್ಮ Sumashri SMS YouTube channel ನಲ್ಲಿ ಪ್ರತಿದಿನ ಎಲ್ಲರ ಉಪಯೋಗಕ್ಕಾಗಿ ತಿಳಿಸಿಕೊಡಲಾಗುತ್ತಿದೆ.
ಮಿಥುನ ರಾಶಿ: ಈ ದಿನ ಕೆಲಸದ ವಿಚಾರವಾಗಿ ತುಂಬಾ ಒತ್ತಡಗಳಿರುತ್ತದೆ. ಇಂದು ದಿನಪೂರ್ತಿ ಕೆಲಸ ನಿರತವಾದ ದಿನವಾಗಿರುತ್ತದೆ. ನಿಮ್ಮ ಬಾಸ್ ನಿಮಗೆ ಹೊಸ ಜವಾಬ್ದಾರಿಗಳನ್ನು ಕೂಡ ಕೊಡಬಹುದು. ವ್ಯಾಪಾರಸ್ಥರು ಕುಟುಂಬದ ಜೊತೆ ಪ್ರಯಾಣ ಹೋಗುವ ಸಾಧ್ಯತೆಗಳಿವೆ.
ಅದೃಷ್ಟದ ಸಂಖ್ಯೆ-1 ಅದೃಷ್ಟದ ಬಣ್ಣ- ಹಳದಿ ಉತ್ತಮ ಸಮಯ- ಬೆಳಗ್ಗೆ 8.30 ರಿಂದ ಮಧ್ಯಾಹ್ನ 12:00ರವರೆಗೆ.
ಕಟಕ ರಾಶಿ: ಆರ್ಥಿಕ ದೃಷ್ಟಿಯಿಂದ ಈ ದಿನ ಕಷ್ಟಕರವಾದ ದಿನವಾಗಿರುತ್ತದೆ. ಹಣಕಾಸಿನ ಕುರಿತಾದ ಎಲ್ಲ ಪ್ರಯತ್ನಗಳು ವಿಫಲ ಆಗಬಹುದು. ಇತರರನ್ನು ಖುಷಿಪಡಿಸಲು ನೀವು ಖರ್ಚು ಮಾಡದೇ ಇದ್ದರೆ ಉತ್ತಮ. ಇದೆಲ್ಲದರ ನಡುವೆ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಕುಟುಂಬದವರ ಜೊತೆ ಹೆಚ್ಚಿನ ಸಮಯವನ್ನು ಕಳೆಯಿರಿ.
ಅದೃಷ್ಟದ ಸಂಖ್ಯೆ-8 ಅದೃಷ್ಟದ ಬಣ್ಣ-ಬಿಳಿ
ಉತ್ತಮ ಸಮಯ – ಬೆಳಿಗ್ಗೆ 7:00 ರಿಂದ 12.30 ರವರೆಗೆ.
ಸಿಂಹ ರಾಶಿ: ಕೆಲಸದ ವಿಚಾರದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತೀರಿ, ಕೆಲಸದ ವಿಚಾರವಾಗಿ ನೀವು ಇಂದು ಅತ್ಯುತ್ತಮವಾದದ್ದನ್ನು ನೀಡಲು ಸಾಧ್ಯವಾಗದೆ ಇರಬಹುದು. ಆದರೆ ನೀವು ನಿರಾಶಿ ಕೊಳ್ಳುವ ಅಗತ್ಯವಿಲ್ಲ ಪ್ರಾಮಾಣಿಕತೆಯಿಂದ ನಿಮ್ಮ ಕೆಲಸ ಮಾಡುತ್ತಲೇ ಇರಿ. ಸಂಜೆ ವೇಳೆ ಸ್ನೇಹಿತರ ಜೊತೆ ಉತ್ತಮವಾದ ಸಮಯವನ್ನು ಕಳೆಯುತ್ತೀರಿ.
ಅದೃಷ್ಟದ ಸಂಖ್ಯೆ-5 ಅದೃಷ್ಟದ ಬಣ್ಣ- ಕೇಸರಿ ಉತ್ತಮ ಸಮಯ- 7:00 ರಿಂದ 12:30 ರವರೆಗೆ.
ಕನ್ಯಾ ರಾಶಿ: ಈ ದಿನ ನಿಮಗೆ ತುಂಬಾ ಒಳ್ಳೆಯ ದಿನವಾಗಿರುತ್ತದೆ. ಉದ್ಯೋಗ ಅಥವಾ ವ್ಯವಹಾರ ಯಾವುದಾದರೂ ಮಹತ್ವದ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ. ಹಾಗೂ ಈ ರೀತಿಯ ಅವಕಾಶಗಳು ಸಿಗಲಿವೆ. ಬಹಳ ದಿನಗಳಿಂದ ತಲೆಯಲ್ಲಿ ಕೊರೆಯುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು. ನೀವು ಚಿಂತೆಯಿಂದ ಮುಕ್ತರಾಗುತ್ತೀರಿ.
ಅದೃಷ್ಟದ ಸಂಖ್ಯೆ- 4 ಅದೃಷ್ಟದ ಬಣ್ಣ- ಕೇಸರಿ
ಉತ್ತಮ ಸಮಯ- ಬೆಳಗ್ಗೆ 6:00ರಿಂದ ಮಧ್ಯಾಹ್ನ 1:00ರವರೆಗೆ.
ತುಲಾ ರಾಶಿ: ಆರ್ಥಿಕ ದೃಷ್ಟಿಯಿಂದ ಎಲ್ಲವನ್ನು ನೋಡಿದರೆ, ಇಂದು ಹಣಕಾಸಿನ ಬಗ್ಗೆ ಹೆಚ್ಚು ಚಿಂತೆ ಮಾಡುವ ಅಗತ್ಯವಿರುವುದಿಲ್ಲ. ನೀವು ಈ ಹಿಂದೆ ಏನಾದರೂ ಸಲಹೆ ಸಾಲವನ್ನು ತೆಗೆದುಕೊಂಡಿದ್ದರೆ ಅದನ್ನು ಹಿಂದಿರುಗಿಸಲು ಎಂದು ಉತ್ತಮವಾದ ಸಮಯವಾಗಿರುತ್ತದೆ. ಮಾನಸಿಕವಾಗಿ ಈ ದಿನ ಬಹಳ ಸಿದ್ಧರಾಗಿರುತ್ತಾರೆ.
ಅದೃಷ್ಟದ ಸಂಖ್ಯೆ- 4 ಅದೃಷ್ಟದ ಬಣ್ಣ-ನೀಲಿ
ಉತ್ತಮ ಸಮಯ: ಬೆಳಗ್ಗೆ 11:00 ರಿಂದ 12.30 ರವರೆಗೆ.
ವೃಶ್ಚಿಕ ರಾಶಿ: ಅವಿವಾಹಿತರಿಗೆ ಬಹಳ ವಿಶೇಷವಾದ ದಿನವಾಗಿರುತ್ತದೆ. ಇದ್ದಕ್ಕಿದ್ದಂತೆ ಇಂದು ವಿವಾಹ ಪ್ರಸ್ತಾಪ ಏರ್ಪಡುವ ಸಾಧ್ಯತೆಗಳಿವೆ. ಈಗಿನ ಹಣಕಾಸಿನ ಪರಿಸ್ಥಿತಿ ಸಮವಾಗಿರುತ್ತದೆ. ವ್ಯಾಪಾರಸ್ಥರಿಗೆ ಉತ್ತಮವಾದ ದಿನವಾಗಿರುತ್ತದೆ. ನಿಮ್ಮ ವ್ಯವಹಾರಗಳು ಯಾವುದಾದರೂ ಬಹಳ ದಿನಗಳಿಂದ ಹಾಗೆ ಉಳಿದಿದ್ದರೆ ಇಂದು ಅದನ್ನು ಹೊಸ ರೂಪದಲ್ಲಿ ಮತ್ತೆ ಪ್ರಯತ್ನಿಸುವ ಅವಕಾಶಗಳು ಸಿಗಬಹುದು.
ಅದೃಷ್ಟದ ಸಂಖ್ಯೆ-1 ಅದೃಷ್ಟದ ಬಣ್ಣ- ಕೇಸರಿ ಉತ್ತಮ ಸಮಯ- ಮಧ್ಯಾಹ್ನ 1:00ರಿಂದ 3:00ರವರೆಗೆ
ಧನಸ್ಸು ರಾಶಿ: ಕೆಲಸದ ವ್ಯವಹಾರದ ವಿಷಯದಲ್ಲಿ ಸಾಮಾನ್ಯವಾದ ದಿನವಾಗಿರುತ್ತದೆ. ಉದ್ಯಮಿಗಳಿಗೂ ಯಾವುದೇ ವಿಶೇಷ ಲಾಭ ದೊರೆಯುವುದಿಲ್ಲ. ಆದರೆ ನೀವು ಎಂದು ಕೆಲವು ಹೊಸ ಯೋಜನೆಗಳನ್ನು ಮಾಡಬಹುದು. ದುಡಿಯುವ ಜನರು ಮೇಲಧಿಕಾರಿಗಳ ಜೊತೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕು.
ಅದೃಷ್ಟದ ಸಂಖ್ಯೆ- 8 ಅದೃಷ್ಟದ ಬಣ್ಣ-ಗುಲಾಬಿ ಉತ್ತಮ ಸಮಯ- 7:30 ರಿಂದ ಮಧ್ಯಾಹ್ನ 3:00ರವರೆಗೆ
ಮಕರ ರಾಶಿ: ನಿಮ್ಮ ನಿರೀಕ್ಷೆಗೆ ತಕ್ಕ ಪ್ರತಿಫಲ ಗಳು ಸಿಗುತ್ತಿಲ್ಲ ಎಂದರೆ ನಿಮ್ಮ ಯೋಜನೆಗಳಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಯೋಜನೆಗಳನ್ನು ಮತ್ತೆ ಪರಿಗಣಿಸಬೇಕಾಗುತ್ತದೆ. ವ್ಯಾಪಾರಿಗಳಿಗೆ ಸಾಮಾನ್ಯವಾದ ದಿನವಾಗಿರುತ್ತದೆ. ನೀವು ಇಂದು ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಅದೃಷ್ಟದ ಸಂಖ್ಯೆ- 4 ಅದೃಷ್ಟದ ಬಣ್ಣ- ಕೆಂಪು ಉತ್ತಮ ಸಮಯ- ಸಂಜೆ 7:30 ರಿಂದ ರಾತ್ರಿ 9:00ರವರೆಗೆ
ಕುಂಭ ರಾಶಿ: ಕಚೇರಿಯಲ್ಲಿ ಸಹದ್ಯೋಗಿಗಳೊಂದಿಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಿ. ಈ ಸಮಯದಲ್ಲಿ ಅವರನ್ನು ಟೀಕಿಸುವುದು ನಿಮಗೆ ಒಳ್ಳೆಯದಲ್ಲ. ನೀವೇನಾದರೂ ವ್ಯಾಪಾರಸ್ಥರ ಆಗಿದ್ದರೆ ನಿಮ್ಮ ವಿರೋಧಿಗಳು ನಿಮ್ಮನ್ನು ಕಾಡಬಹುದು. ಅವರು ನಿಮ್ಮ ಕಾರ್ಯಗಳನ್ನು ಪಡೆಯಲು ಪ್ರಯತ್ನಿಸುವ ಸಂದರ್ಭಗಳು ಬರಬಹುದು.
ಅದೃಷ್ಟ ಸಂಖ್ಯೆ-1 ಅದೃಷ್ಟದ ಬಣ್ಣ- ಹಸಿರು
ಉತ್ತಮ ಸಮಯ- 7:30 ರಿಂದ 12:30 ರವರೆಗೆ.
ಮೀನ ರಾಶಿ: ಡಿಜೆ ನಿಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಿಸಿ. ಸಾಧ್ಯವಾದರೆ ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗಿ ಬನ್ನಿ. ಇದರಿಂದ ಅವರು ತುಂಬಾ ಸಂತೋಷ ಪಡುತ್ತಾರೆ. ನಿಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಸಂಗಾತಿಯಿಂದ ಸಂಪೂರ್ಣವಾದ ಬೆಂಬಲ ಸಿಗುತ್ತದೆ. ನೀವಿಬ್ಬರೂ ನಿಮ್ಮ ಭಾವನೆಗಳನ್ನು ಪರಸ್ಪರ ವ್ಯಕ್ತಪಡಿಸುತ್ತೀರಿ.
ಅದೃಷ್ಟದ ಸಂಖ್ಯೆ- 9 ಅದೃಷ್ಟದ ಬಣ್ಣ – ಬಿಳಿ
ಉತ್ತಮ ಸಮಯ- 7:00 ರಿಂದ 10:00ವರೆಗೆ