ಇಂದುಮತಿ ಸಾಲಿಮಠ ನಗುವ ಹಿಂದಿರುವ ಕರಾಳ ಬದುಕು,ಇವರು ಜೀವನದಲ್ಲಿ ಪಟ್ಟ ಕಷ್ಟ ಅವಮಾನ ಅಷ್ಟಿಷ್ಟಲ್ಲ…

ಇಂದುಮತಿ ಸಾಲಿಮಠ ಅವರ ಜೀವನಕಥೆಯನ್ನು ನೋಡಿದರೆ ಎಂಥವರಾದರೂ ಕಣ್ಣೀರು ಹಾಕುತ್ತಾರೆಇಂದುಮತಿ ಸಾಲಿಮಠ ಇವರ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೂಡ ಕೇಳಿರುತ್ತಾರೆ ಅದರಲ್ಲಿಯೂ ಕೂಡ ಉದಯ ಟಿವಿಯಲ್ಲಿ ಬರುತ್ತಿದ್ದ ಹರಟೆ ಎಂಬ ಕಾರ್ಯಕ್ರಮದಲ್ಲಿ ಅವರು ಬಹಳ ಚೆನ್ನಾಗಿ ಭಾಷಣ ಮಾಡುತ್ತಿದ್ದರು ಈ ಒಂದು ಕಾರ್ಯಕ್ರಮದ ಮುಖಾಂತರ ಕರ್ನಾಟಕದ ಜನತೆಗೆ ಇವರು ಚಿರಪರಿಚಿತರಾಗಿದ್ದರು. ಇವರು ಅರಟೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಿಂತ ಮುಂಚೆ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಚಿಕ್ಕವಯಸ್ಸಿನಿಂದಲೂ ಕೂಡ ಕನ್ನಡದ ಭಾಷಾಭಿಮಾನಿ ಅಷ್ಟೇ ಅಲ್ಲದೆ ತಾವು ಪಿಯುಸಿಯಲ್ಲಿ ಇರುವಾಗಲೆ ಲೆಚರರ್ ಆಗಬೇಕು ಎಂಬ ಆಸೆಯನ್ನು ಹೊಂದಿದ್ದರು. ಈ ಒಂದು ಕಾರಣದಿಂದಾಗಿ ಅವರು ಓದಿನ ಕಡೆ ಹೆಚ್ಚಾಗಿ ಆಸಕ್ತಿಯನ್ನು ವಹಿಸಿಕೊಂಡಿದ್ದರು ಇನ್ನೂ ಇಂದುಮತಿ ಅವರ ತಂದೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು.

ಇವರಿಗೆ ಅಕ್ಕತಂಗಿಯರು ಬಹಳಷ್ಟು ಜನ ಇದ್ದರು ಹಾಗಾಗಿ ಒಬ್ಬರ ಹಿಂದೆ ಒಬ್ಬರನ್ನು ಮದುವೆ ಮಾಡಿಕೊಡಬೇಕಾದಂತಹ ಜವಾಬ್ದಾರಿ ಇವರ ತಂದೆಗೆ ಇತ್ತು. ಈ ಒಂದು ಕಾರಣಕ್ಕಾಗಿ ಇಂದುಮತಿ ಅವರ ದೊಡ್ಡ ಅಕ್ಕನಿಗೆ ಮದುವೆ ಫಿಕ್ಸ್ ಆಗುತ್ತದೆ ಈ ಸಮಯದಲ್ಲಿ ಇಂದುಮತಿ ಅವರಿಗೂ ಕೂಡ ಮದುವೆ ಮಾಡಬೇಕು ಅಂತ ನಿರ್ಧಾರ ಮಾಡುತ್ತಾರೆ. ಹಾಗಾಗಿ ಇವರ ಕುಟುಂಬಸ್ಥರಲ್ಲಿ ಇರುವಂತಹ ಯುವಕರನ್ನು ನೋಡಿ ಅವರಿಗೆ ಮದುವೆ ಮಾಡಿಕೊಳ್ಳುವಂತೆ ಬೇಡಿಕೆ ಇಡುತ್ತಾರೆ. ಆದರೆ ಅವರು ನೋಡುವುದಕ್ಕೆ ಕುಳ್ಳಗಿದ್ದರೂ ಜೊತೆಗೆ ಇವರ ಬಣ್ಣವು ಕೂಡ ಕಪ್ಪು ಬಣ್ಣದಿಂದ ಕೂಡಿರುತ್ತದೆ ಹಾಗೆಯೇ ನೋಡುವುದಕ್ಕೂ ಕೂಡ ಅಷ್ಟೊಂದು ರೂಪವಂತೆ ಇರಲಿಲ್ಲ ಈ ಒಂದು ಕಾರಣಕ್ಕಾಗಿಯೇ ಹುಡುಗ ಮದುವೆಯಾಗಲು ಇಷ್ಟ ಇಲ್ಲ ಅಂತ ಹೇಳುತ್ತಾರೆ. ಇಂದುಮತಿ ಅವರಿಗೂ ಕೂಡ ಓದಿನಲ್ಲಿ ಹೆಚ್ಚಾಗಿ ಆಸಕ್ತಿ ಇದ್ದ ಕಾರಣ ನನಗೂ ಕೂಡ ಮದುವೆಯಾಗಲು ಇಷ್ಟ ಇಲ್ಲ ಅಂತ ಹೇಳುತ್ತಾರೆ.

WhatsApp Group Join Now
Telegram Group Join Now

ಆದರೆ ಮನೆಯವರ ಒತ್ತಡದ ಆಧಾರದ ಮೇಲೆ ಹುಡುಗ ಮತ್ತು ಹುಡುಗಿ ಇಬ್ಬರೂ ಕೂಡ ಇಷ್ಟ ಇರುವುದಿಲ್ಲ ಈ ಸಮಯದಲ್ಲಿ ಇಂದುಮತಿ ಅವರು ದ್ವಿತೀಯ ಪಿಯುಸಿ ಓದುತ್ತಿರುತ್ತಾರೆ. ಹಾಗೆಯೇ ಇಂದು ಅವರನ್ನು ಮದುವೆಯಾದ ಯುವಕ ಫೈನಲ್ ಇಯರ್ ಬಿಎ ಓದುತ್ತಿರುತ್ತಾರೆ ಇವರಿಬ್ಬರು ವಿದ್ಯಾಭ್ಯಾಸ ಮಾಡುವಂತಹ ಸಮಯದಲ್ಲಿ ಮದುವೆಯಾಗುತ್ತಾರೆ. ಪ್ರಾರಂಭದಲ್ಲಿ ಹೇಗೋ ಸಂಸಾರ ನಡೆಸುತ್ತಾರೆ ಆದರೆ ಇಂದು ಅವರಿಗೆ ಎರಡು ಮಕ್ಕಳಾದ ನಂತರ ಇವರ ಪತಿ ಇವರನ್ನು ಬಿಟ್ಟು ಬೇರೊಬ್ಬರನ್ನು ಮದುವೆಯಾಗುತ್ತಾರೆ.

[irp]