ಮೇಷ ರಾಶಿ:- ಇಂದು ನಿಮ್ಮ ವರ್ತನೆ ಸಮತೋಲನವಾಗಿ ಇರಬೇಕು ಏಕೆಂದರೆ ನಕಾರಾತ್ಮಕ ಭಾವನೆಗಳಿಂದ ನಿಮ್ಮ ನಡವಳಿಕೆಯಲ್ಲಿ ಸ್ವಲ್ಪ ಏರುಪೇರುಗಳು ಆಗುವಂತಹ ಸಂಭವ ಇರುತ್ತದೆ. ಕೆಲಸದ ವಿಚಾರದಲ್ಲಿ ಈ ದಿನ ನೀವು ಮಿಶ್ರ ಫಲವನ್ನು ಅನುಭವಿಸಬೇಕಾಗುತ್ತದೆ ಅಷ್ಟೇ ಅಲ್ಲದೆ ಕಚೇರಿಯಲ್ಲಿ ನಿಮ್ಮ ಹಿರಿಯ ಅಧಿಕಾರಿಗಳಿಂದ ಸ್ವಲ್ಪ ಒತ್ತಡವುಂಟಾಗಬಹುದು ಹಾಗಾಗಿ ಆದಷ್ಟು ಇಂದು ಸಮಾಧಾನಕರವಾಗಿ ನಡೆದುಕೊಳ್ಳುವುದು ಒಳ್ಳೆಯದು. ಅದೃಷ್ಟ ಸಂಖ್ಯೆ 4 ಅದೃಷ್ಟ ಬಣ್ಣ ಕಿತ್ತಲೆ ಹಾಗೂ ಉತ್ತಮ ಸಮಯ 8:45 ರಿಂದ 12.30 ರವರೆಗೆ.
ವೃಷಭ ರಾಶಿ:- ಮನೆಯ ಸಂತೋಷದ ವಾತಾವರಣವನ್ನು ಕಾಪಾಡಿಕೊಳ್ಳಲು ನಿಮ್ಮ ಪ್ರೀತಿಪಾತ್ರರಿಗೆ ನೀವು ಸಮಯವನ್ನು ನೀಡಬೇಕಾಗುತ್ತದೆ ವಿಶೇಷವಾಗಿ ಈ ಸಮಯದಲ್ಲಿ ನಿಮ್ಮ ಸಂಗಾತಿಗೆ ನಿಮ್ಮ ಭಾವನಾತ್ಮಕ ಬೆಂಬಲ ಬೇಕಾಗುತ್ತದೆ. ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಬಿಜಿ ಜೀವನದಲ್ಲೂ ಕೂಡ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಅವರಿಗೆ ಸಮಯ ಕೊಡುವುದು ಸೂಕ್ತ ಇದರಿಂದ ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ. ಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೆಂಪು ನಿಮ್ಮ ಅದೃಷ್ಟದ ಸಮಯ ಬೆಳಗ್ಗೆ 10.30 ರಿಂದ 1:15 ರವರೆಗೆ.
ಸುಮಶ್ರೀ youtube ವಾಹಿನಿಗೆ ಆತ್ಮೀಯವಾದ ಸ್ವಾಗತ.
ಪ್ರತಿದಿನ ಬೆಳಿಗ್ಗೆ 06:00 ಗೆ ಪಂಚಾಂಗವನ್ನು ವೀಕ್ಷಿಸಲು ನಮ್ಮ Sumashri SMS channel subscribe ಮಾಡಿ
ಈ ದಿನದಂದು ಆರ್ದ್ರಾ ನಕ್ಷತ್ರವನ್ನು ಮತ್ತು ರುದ್ರದೇವನನ್ನು ಸ್ತುತಿಸಿ ಸಕಲದೋಷಗಳನ್ನು ನಿವಾರಿಸಿಕೊಳ್ಳೋಣ.
ಶ್ಲೋಕ
ಆರ್ದ್ರಾ ಪಾತು ನಕ್ಷತ್ರಂ ರುದ್ರೋ ಯಸ್ಯಾಧಿದೇವತಾ
ಮೃತ್ಯುಂಜಯಂ ಮಹಾದೇವಂ ಸೋಮಶೇಖರಮಾಶ್ರಯೇ॥
ಅರ್ಥ-
ಆರ್ದ್ರಾ ನಕ್ಷತ್ರವು ಹಾಗು ಆರ್ದ್ರಾ ನಕ್ಷತ್ರದ ಅಧಿದೇವತೆಯಾದ ಮೃತ್ಯುವನ್ನೇ ಜಯಿಸಿ ಮೃತ್ಯುಂಜಯನೆಂದು ಪ್ರಸಿದ್ಧನಾದ, ದೇವರಲ್ಲಿ ಮಹಾದೇವನಾದ, ಹಾಗು ಚಂದ್ರನನ್ನು ತನ್ನ ಶಿರಸ್ಸಿನಲ್ಲಿ ಧರಿಸಿ ಸೋಮಶೇಖರನೆಂದು ಪ್ರಸಿದ್ಧನಾದ ರುದ್ರದೇವನು ನಮ್ಮನ್ನು ರಕ್ಷಿಸಲಿ.
ಇಂದಿನ ಪಂಚಾಂಗ
ಶುಭಕೃನ್ನಾಮಸಂವತ್ಸರಃ
ಉತ್ತರಾಯಣಮ್
ವಸಂತ-ಋತುಃ
ವೈಶಾಖಮಾಸಃ
ಶುಕ್ಲಪಕ್ಷಃ
ಪಂಚಮೀತಿಥಿಃ
ಆರ್ದ್ರಾನಕ್ಷತ್ರಮ್
ಧೃತಿನಾಮಯೋಗಃ
ಬಾಲವಕರಣಮ್
ಶುಕ್ರವಾಸರಃ
ಸೂರ್ಯೋದಯ – 05:59 A.M
ಸೂರ್ಯಾಸ್ತ – 6:34 P.M
ರಾಹುಕಾಲದ ಸಮಯ – 10:30 – 12:00 P.M
ಪಂಚಾಂಗ ಶ್ರವಣವನ್ನು ಮಾಡುವವರಿಗಾಗಿ ಮಾಡಿರುವ ವಿಶೇಷ ವೀಡಿಯೋ.
ಪ್ರತಿನಿತ್ಯ ಪಂಚಾಂಗ ಶ್ರವಣದಿಂದ ಏನು ಲಾಭ?
ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯ ವರ್ಧನಂ|
ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗನಿವಾರಣಮ್||
ಕರಣಾತ್ ಕಾರ್ಯಸಿದ್ಧಿಃ ಸ್ಯಾತ್ ಪಂಚಾಂಗಫಲಮುತ್ತಮಮ್||
ಅರ್ಥ – ತಿಥಿಯಿಂದ ಐಶ್ವರ್ಯವು ಲಭಿಸುವುದು, ವಾರದಿಂದ ಆಯುಷ್ಯದ ಹೆಚ್ಚಳವಾಗುವುದು, ನಕ್ಷತ್ರದಿಂದ ಪಾಪದ ನಿವಾರಣೆಯಾಗುವುದು, ಯೋಗದಿಂದ ರೋಗಗಳ ನಿವಾರಣೆಯಾಗುವುದು, ಕರಣದಿಂದ ಎಲ್ಲ ಕೆಲಸಗಳೂ ಸುಲಭವಾಗುವವು ಆದ್ದರಿಂದ ಈರೀತಿ ಉತ್ತಮ ಫಲಗಳನ್ನೊಳಗೊಂಡ ಪಂಚಾಂಗವನ್ನು ನಾವು ಕೇಳಿ ಧನ್ಯರಾಗೋಣ.
ಈ ರೀತಿಯ ಶ್ಲೋಕಗಳನ್ನು ಪ್ರತಿದಿನ ಆಲಿಸುವುದು ತುಂಬಾ ಉತ್ತಮ. ಹೀಗಾಗಿ ಈ ಪಂಚಾಂಗವನ್ನು ದಿನಕ್ಕೊಂದು ದೇವತಾ ಸ್ತುತಿಯೊಂದಿಗೆ ನಮ್ಮ Sumashri SMS YouTube channel ನಲ್ಲಿ ಪ್ರತಿದಿನ ಎಲ್ಲರ ಉಪಯೋಗಕ್ಕಾಗಿ ತಿಳಿಸಿಕೊಡಲಾಗುತ್ತಿದೆ.
ಮಿಥುನ ರಾಶಿ:- ಈ ದಿನ ನಿಮ್ಮ ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳುವುದು ದೃಷ್ಟಿಯಿಂದಾಗಿ ನಿಮ್ಮ ನಕಾರತ್ಮಕ ಯೋಚನೆಗಳಿಂದ ಆದಷ್ಟು ದೂರವಿರುವುದು ಉತ್ತಮ. ಪುಟ್ಟ ವಿಷಯದಲ್ಲಿಯೂ ಕೂಡ ಸಂತೋಷವನ್ನು ಕಂಡುಕೊಳ್ಳುವುದು ರೂಢಿಸಿಕೊಳ್ಳುವುದು ಉತ್ತಮ. ಕೆಲಸದ ವಿಚಾರ ಬಗ್ಗೆ ಹೇಳುವುದಾದರೆ ನಿಮ್ಮ ಕಚೇರಿಯಲ್ಲಿ ಬಾಕಿ ಉಳಿದಿರುವ ಅಂತಹ ಎಲ್ಲ ಕೆಲಸಗಳನ್ನು ಇಂದು ಮಾಡಿ ಮುಗಿಸುವುದು ಉತ್ತಮ. ಅದೃಷ್ಟದ ಸಂಖ್ಯೆ ಏಳು ಅದೃಷ್ಟದ ಬಣ್ಣ ಕಂದು ನಿಮ್ಮ ಉತ್ತಮ ಸಮಯ 3:00 ಯಿಂದ 6:00 ವರೆಗೆ.
ಕಟಕ ರಾಶಿ:- ನೀವೇನಾದರೂ ವಿದ್ಯಾರ್ಥಿಗಳು ಆಗಿದ್ದರೆ ನಿಮ್ಮ ಓದಿನ ಬಗ್ಗೆ ಹೆಚ್ಚು ಗಮನ ವಹಿಸುವುದು ಉತ್ತಮ ಕೇವಲ ಓದಿನ ಬಗ್ಗೆ ಮಾತ್ರವಲ್ಲದೆ ನೀವು ನಿಮ್ಮ ಆರೋಗ್ಯದ ಬಗ್ಗೆಯೂ ಕೂಡ ಗಮನವನ್ನು ನೀಡಬೇಕಾಗುತ್ತದೆ. ನಿಮ್ಮ ಜೀವನದಲ್ಲಿ ಈ ದಿನ ನಿಮಗೆ ಹೆಚ್ಚು ಖರ್ಚು ಆಗುವಂತಹ ಲಕ್ಷಣಗಳು ಕಂಡುಬರುತ್ತದೆ ಅಷ್ಟೇ ಅಲ್ಲದೆ ಕೆಲವೊಂದು ಕೌಟುಂಬಿಕ ಸಮಸ್ಯೆಗಳು ಕೂಡ ಎದುರಾಗಬಹುದು ಆದರೆ ಯಾವುದಕ್ಕೂ ಕೂಡ ನೀವು ಭಯಪಡುವಂತಹ ಅಗತ್ಯವಿಲ್ಲ. ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಹಳದಿ ಉತ್ತಮ ಸಮಯ ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ.
ಸಿಂಹ ರಾಶಿ:- ಈಗಿನ ನೀವು ಹಣದ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಅಷ್ಟೇ ಅಲ್ಲದೆ ನೀವು ಯಾರಾದರೂ ಬಳಿ ಹಣವನ್ನು ತೆಗೆದುಕೊಂಡಿದ್ದರೆ ಅದನ್ನು ಆದಷ್ಟು ಬೇಗ ಮರುಪಾವತಿ ಮಾಡಲು ಯೋಚಿಸಬೇಕಾಗುತ್ತದೆ. ಕಚೇರಿಯಲ್ಲಿ ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ಸಮನ್ವಯವನ್ನು ಮಾಡಿಕೊಳ್ಳಲು ಆದಷ್ಟು ಪ್ರಯತ್ನಿಸಿ ಅವರ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯುವುದು ಉತ್ತಮ. ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಹಳದಿ ಹಾಗೂ ನಿಮ್ಮ ಉತ್ತಮ ಸಮಯ 6:15 ನಿಮಿಷ ದಿಂದ 8 ಗಂಟೆಯವರೆಗೆ
ಕನ್ಯ ರಾಶಿ:- ಮನೆಯ ವಾತಾವರಣವು ಹರ್ಷಚಿತ್ತದಿಂದ ಕೂಡಿರುತ್ತದೆ ಅಷ್ಟೇ ಅಲ್ಲದೆ ಮನೆಯವರೊಂದಿಗೆ ನಿಮ್ಮ ಸಂಬಂಧ ಬಹಳ ಗಟ್ಟಿಯಾಗಿ ಇರುತ್ತದೆ. ನೀವೆನಾದರೂ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸವನ್ನು ಮಾಡಬೇಕು ಅಂತ ಅಂದುಕೊಂಡಿದ್ದರೆ ಆ ವಿಚಾರವಾಗಿ ಇಂದು ಕೆಲವೊಂದಷ್ಟು ಶುಭ ಸುದ್ದಿಗಳನ್ನು ನೀವು ಕೇಳಬಹುದಾಗಿದೆ. ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಅದೃಷ್ಟ ಬಣ್ಣ ಗುಲಾಬಿ ಉತ್ತಮ ಸಮಯ 12:30 ರಿಂದ 3.40 ರವರೆಗೆ
ತುಲಾ ರಾಶಿ:- ನೀವೇನಾದರೂ ಮಧುಮೇಹ ಕಾಯಿಲೆಯನ್ನು ಅನುಭವಿಸುತ್ತಿದ್ದರೆ ಈಗಿನ ನೀವು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹಣದ ಪರಿಸ್ಥಿತಿ ಈ ದಿನ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಉತ್ತಮವಾಗಿರುತ್ತದೆ ಒಂದು ವೇಳೆ ನೀವು ಬೇರೆಯವರ ಹುಟ್ಟಿಗೆ ಹಣವನ್ನು ಸಾಲವನ್ನು ಪಡೆಯಬೇಕು ಅಂತ ಅಂದುಕೊಂಡಿದ್ದರೆ ಯೋಚನೆಯನ್ನು ಬಿಟ್ಟು ಬಿಡುವುದು ಉತ್ತಮ. ಅದೃಷ್ಟ ಸಂಖ್ಯೆ 4 ಅದೃಷ್ಟದ ಬಣ್ಣ ಕೇಸರಿ ನಿಮ್ಮ ಉತ್ತಮ ಸಮಯ 11.15 ರಿಂದ 12.30 ರವರೆಗೆ.
ವೃಶ್ಚಿಕ ರಾಶಿ:- ಹಣದ ವಿಚಾರವಾಗಿ ಈ ದಿನ ನಿಮಗೆ ಮಿಶ್ರ ಫಲವಾಗಿದೆ ಇದ್ದಕಿದ್ದ ಹಾಗೆ ದಿನದ ಆರಂಭದಲ್ಲಿಯೇ ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾದಂತಹ ಸಂದರ್ಭದಲ್ಲಿ ಒದಗಿ ಬರುತ್ತದೆ. ಅದೇ ಸಮಯದಲ್ಲಿ ದಿನದ ಅರ್ಧಭಾಗದ ನಂತರ ಹಣದ ಪರಿಸ್ಥಿತಿಯು ಸುಧಾರಿಸುತ್ತದೆ ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ಈದಿನ ಉತ್ತಮ ದಿನ ಅಂತಾನೆ ಹೇಳಬಹುದು. ಅದೃಷ್ಟ ಸಂಖ್ಯೆ 5 ಅದೃಷ್ಟವಂತ ನಿಮ್ಮ ಉತ್ತಮ ಸಮಯ ಮಧ್ಯಾಹ್ನ 1 ಗಂಟೆಯಿಂದ ಸಾಯಂಕಾಲ 4 ಗಂಟೆಗೆ.
ಧನಸು ರಾಶಿ:- ಈ ದಿನ ನೀವು ಆಹಾರ ಮತ್ತು ಪಾನೀಯಗಳಿಗೆ ಸಂಬಂಧಪಟ್ಟಂತಹ ವ್ಯಾಪಾರ ಮತ್ತು ವ್ಯವಹಾರವನ್ನು ಮಾಡುತ್ತಿದ್ದರೆ ಈ ದಿನ ನೀವು ಶುದ್ಧತೆಗೆ ಮೊದಲ ಆದ್ಯತೆಯನ್ನು ನೀಡುವುದು ಉತ್ತಮ ಇಲ್ಲವಾದರೆ ಈ ವಿಚಾರವಾಗಿ ನೀವು ಬಹಳಷ್ಟು ಹಣವನ್ನು ವ್ಯಯ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೆ ನೀವು ಪ್ರತಿನಿತ್ಯ ಕಚೇರಿಗೆ ತಡವಾಗಿ ಹೋಗುತ್ತಿದ್ದರೆ ಈ ದಿನ ಸ್ವಲ್ಪ ಮುಂಚಿತವಾಗಿ ಹೋಗುವುದು ಒಳ್ಳೆಯದು. ಉತ್ತಮ ಸಮಯ ಸಂಜೆ 4-15 ರಿಂದ 7-00 ರವರೆಗೆ ನಿಮ್ಮ ಅದೃಷ್ಟ ಸಂಖ್ಯೆ ಮೂರು ಅದೃಷ್ಟ ಬಣ್ಣ ನೇರಳೆ.
ಮಕರ ರಾಶಿ:- ಇಂದು ಐಟಿ ಕ್ಷೇತ್ರದಲ್ಲಿ ದುಡಿಯುವಂತಹ ಜನರಿಗೆ ಬಹಳ ಶುಭದಿನವಾಗಲಿದೆ ಇದರಿಂದಾಗಿ ನೀವು ಉತ್ತಮ ಲಾಭವನ್ನು ಪಡೆಯಬಹುದು ಅಷ್ಟೇ ಅಲ್ಲದೆ ನೀವೇನಾದರೂ ಶೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅದರಿಂದ ಗರಿಷ್ಠ ಮೊತ್ತದ ಲಾಭವನ್ನು ಪಡೆಯುವ ಅದೃಷ್ಟ ಇದೆ. ನಿಮ್ಮ ಜೀವನವೂ ಸಂತೋಷವಾಗಿರುತ್ತದೆ ಇದ್ದಕ್ಕಿದ್ದ ಹಾಗೆ ಸಂಬಂಧಿಕರು ನಿಮ್ಮ ಮನೆಗೆ ಬರಬಹುದು. ಅದೃಷ್ಟ ಸಂಖ್ಯೆ ಮೂರು ಅದೃಷ್ಟ ಬಣ್ಣ ಕೆಂಪು ಉತ್ತಮ ಸಮಯ 6:15 ರಿಂದ ರಾತ್ರಿ 10 ಗಂಟೆಯವರೆಗೆ.
ಕುಂಭ ರಾಶಿ:- ಮನೆಯ ಸದಸ್ಯರೊಂದಿಗೆ ಇಂದು ವಿವಾದವನ್ನು ತಪ್ಪಿಸಿ ಇಲ್ಲವಾದರೆ ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ಎಂಬುವುದು ದೂರವಾಗುತ್ತದೆ. ನಿಮ್ಮ ವರ್ತನೆಯನ್ನು ಇಂದು ಸಭ್ಯಸ್ತ ವಾಗಿ ಇಟ್ಟುಕೊಳ್ಳುವುದು ಒಳ್ಳೆಯದು ಅಷ್ಟೇ ಅಲ್ಲದೆ ನಿಮ್ಮ ಮನೆಯಲ್ಲಿ ಇರುವಂತಹ ಕಿರಿಯ ಸದಸ್ಯರೊಂದಿಗೆ ಸ್ವಲ್ಪ ಕಟ್ಟುನಿಟ್ಟಾಗಿ ನೀವು ನಡೆದುಕೊಳ್ಳುವುದು ಉತ್ತಮ. ನಿಮ್ಮ ಅದೃಷ್ಟ ಸಮಯ ಬೆಳಗ್ಗೆ 7.30 ರಿಂದ 10 ಗಂಟೆಯವರೆಗೆ ನಿಮ್ಮ ಅದೃಷ್ಟ ಸಂಖ್ಯೆ 1 ಅದೃಷ್ಟ ಬಣ್ಣ ನೀಲಿ.
ಮೀನಾ ರಾಶಿ:- ಯಾರು ವ್ಯಾಪಾರ ಮಾಡುತ್ತಿದ್ದರೆ ಈಗಿನ ಹೂಡಿಕೆ ಮಾಡಲು ನಿಮಗೆ ಉತ್ತಮವಾದಂತಹ ಅವಕಾಶ ದೊರೆಯುತ್ತದೆ ಅಲ್ಲದೆ ಹೇಳದೆ ಯಾರಾದರೂ ಚಿಲ್ಲರೆ ವ್ಯಾಪಾರ ಮಾಡುತ್ತಿದ್ದರೆ ಅಂತವರಿಗೆ ಇಂದು ಉತ್ತಮವಾದಂತಹ ಲಾಭ ಗಳಿಸುವಂತಹ ದಿನವಾಗಿರುತ್ತದೆ. ಈ ದಿನ ಹಣದ ಕೊರತೆಯಿಂದಾಗಿ ಕೆಲವೊಂದಷ್ಟು ಕೆಲಸಗಳು ಅರ್ಧಕ್ಕೆ ನಿಂತು ಹೋಗ ಬಹುದು. ಅದೃಷ್ಟ ಸಂಖ್ಯೆ 7 ಇಷ್ಟದ ಬಣ್ಣ ಕಂದು ಹಾಗೂ ಉತ್ತಮ ಸಮಯ