ನಿದ್ರೆ ಮಾಡುವುದಕ್ಕಿಂತ ಮುಂಚೆ ಈ ಐದು ಸರಳ ವಿಧಾನವನ್ನು ಬಳಸಿ ಸರ್ವ ರೋಗಗಳಿಂದಲೂ ಕೂಡ ಮುಕ್ತವಾಗಬಹುದು.ಸಾಕಷ್ಟು ಜನ ರಾತ್ರಿಯ ಸಮಯ ತುಂಬಾ ತಡವಾಗಿ ಊಟ ಮಾಡುವುದನ್ನು ನಾವು ನೋಡಬಹುದು ಆದರೆ ಈ ರೀತಿ ಮಾಡುವುದರಿಂದ ದೇಹಕ್ಕೆ ನಾನಾ ರೀತಿಯಾದಂತಹ ಕಾಯಿಲೆಗಳು ಬರುವುದನ್ನು ನಾವು ನೋಡಬಹುದಾಗಿದೆ. ಹಾಗಾಗಿ ಸೂರ್ಯಸ್ತದ ಅರ್ಧ ಅಥವಾ ಒಂದು ಗಂಟೆಯ ಒಳಗಾಗಿ ನೀವು ರಾತ್ರಿಯ ಉಪಹಾರವನ್ನು ಸೇವನೆ ಮಾಡಬೇಕಾಗುತ್ತದೆ. ಒಂದು ವೇಳೆ ಬಹಳ ತಡವಾಗಿದೆ ಆಹಾರವನ್ನು ಸೇವನೆ ಮಾಡಿದರೆ ಇದರಿಂದ ನಿಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ ಹಾಳಾಗುತ್ತದೆ. ಅಷ್ಟೇ ಅಲ್ಲದೆ ಬಾಡಿಯಲ್ಲಿ ಇರುವಂತಹ ಮೆಟಬಾಲಿಸಂ ಮಟ್ಟ ಕಡಿಮೆಯಾಗುತ್ತದೆ. ಹಿಂದಿನ ಕಾಲದಲ್ಲಿ ಊಟ ಆದ ತಕ್ಷಣ ತಾಂಬೂಲವನ್ನು ಹಾಕಿಕೊಂಡು ಸ್ವಲ್ಪ ಹೊತ್ತು ಮನೆಯವರ ಮುಂದೆ ಕುಳಿತುಕೊಂಡು ಮಾತನಾಡುತ್ತಿದ್ದರು ತದನಂತರ ವಾಕಿಂಗ್ ಹೋಗುತ್ತಿದ್ದರು.ಆದರೆ ಇದೀಗ ಕಾಲ ಬದಲಾಗಿದೆ ನಮ್ಮ ಜೀವನಶೈಲಿ ಸಂಪೂರ್ಣವಾಗಿ ಬದಲಾಗಿದೆ ಹಾಗಾಗಿ ನೀವು ಊಟ ಆದ ತಕ್ಷಣ ಯಾವುದೇ ಕಾರಣಕ್ಕೂ
ಕೂಡ ಮಲಗಬೇಡಿ ಸ್ವಲ್ಪ ನಡೆದಾಡಿ ಇದರ ಜೊತೆಗೆ ನಿಮ್ಮ ಕೈಯನ್ನು ಅಗ್ನಿ ಚಾಚುವುದು ಉತ್ತಮ. ಏಕೆಂದರೆ ರಾತ್ರಿಯ ಸಮಯ ತಂಪು ವಾತವರಣ ಇರುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ನಿಧಾನವಾಗಿ ಆಗುತ್ತದೆ. ನಾವು ಬೆಂಕಿಯಲ್ಲಿ ಕೈ ಬಿಸಿ ಮಾಡಿಕೊಂಡರೆ ನಮ್ಮ ದೇಹ ಬಿಸಿಯಾಗುತ್ತದೆ ನಮ್ಮ ಹೊಟ್ಟೆಯೊಳಗೆ ಜಠರಾಗ್ನಿ ಸಕ್ರಿಯವಾಗಿ ಕೆಲಸ ಮಾಡುತ್ತದೆ. ಈ ರೀತಿ ನೀವು ಪಾಲನೆ ಮಾಡಿದರೆ ನಿಮಗೆ ಗ್ಯಾಸ್ಟಿಕ್ ಅಸಿಡಿಟಿ ಅಥವಾ ಮಲಬದ್ಧತೆ ಇಂತಹ ಯಾವುದೇ ಸಮಸ್ಯೆಗಳು ಕೂಡ ಕಂಡು ಬರುವುದಿಲ್ಲ. ಮನುಷ್ಯನಿಗೆ ಅರ್ಧ ಕಾಯಿಲೆ ಬರುವುದೇ ಈ ಹೊಟ್ಟೆ ಇಂದಾಗಿ ಹಾಗಾಗಿ ಯಾರು ಹೊಟ್ಟೆಯನ್ನು ಶುದ್ಧೀಕರಣ ಮಾಡಿಕೊಳ್ಳುತ್ತಾರೋ ಅವರು ರೋಗಗಳಿಂದ ದೂರ ಉಳಿಯಬಹುದು.
ಇದರ ಜೊತೆಗೆ ನೀವು ರಾತ್ರಿ ಮಲಗುವಾಗ ಯಾವಾಗಲೂ ಎಡಭಾಗದಲ್ಲಿ ಮಲಗಬೇಕು ಒಂದು ವೇಳೆ ಬಲಭಾಗದಲ್ಲಿ ಮಲಗಿದರೆ ಅದರಿಂದ ನಾನಾ ರೀತಿಯ ಮಂತಪ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎಡಗಡೆ ಮಲಗುವುದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ ಅಷ್ಟೇ ಅಲ್ಲದೆ ನೀವು ತಿಂದ ಆಹಾರ ಜೀರ್ಣವಾಗುತ್ತದೆ. ಕೆಲವೊಂದಷ್ಟು ಜನ ಆಹಾರ ತಿಂದ ತಕ್ಷಣ ಬಲಗಡೆ ಮಲಗಿಕೊಳ್ಳುತ್ತಾರೆ ಈ ರೀತಿ ಮಾಡುವುದರಿಂದ ಅವರಲ್ಲಿ ಬಿ.ಪಿ ಸಮಸ್ಯೆ ಉಂಟಾಗುತ್ತದೆ ಹಾಗಾಗಿ ಆದಷ್ಟು ನೀವು ರಾತ್ರಿಯ ಸಮಯ ಮಲಗುವುದು ಉತ್ತಮ.