ಡ್ರೈಫ್ರೂಟ್ಸ್ ಗಳನ್ನು ಫ್ಯಾಕ್ಟರಿಗಳಲ್ಲಿ ಹೇಗೆ ತಯಾರಿ ಮಾಡುತ್ತಾರೆ ಗೊತ್ತಾ.? ಈ ವಿಡಿಯೋ ನೋಡಿದರೆ ನಿಜಕ್ಕೂ ಬೆಚ್ಚಿ ಬೆರಗಾಗಿ ಹೋಗುತ್ತೀರಾ.ಒಣ ಖರ್ಜೂರವನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಏನೆಲ್ಲಾ ಆರೋಗ್ಯಯುತವಾದಂತಹ ಪ್ರಯೋಜನಗಳು ದೊರೆಯುತ್ತದೆ ಎಂಬುದರ ಬಗ್ಗೆ ನಾವು ಹೆಚ್ಚೇನೂ ಹೇಳಬೇಕಾದ ಅಗತ್ಯವಿಲ್ಲ. ನಿಮ್ಮೆಲ್ಲರಿಗೂ ಕೂಡ ತಿಳಿದೇಯಿದೆ ಒಣ ಕರ್ಜುರ ನಮ್ಮ ದೇಹಕ್ಕೆ ಹಲವಾರು ರೀತಿಯಾದಂತಹ ಕ್ಯಾಲ್ಸಿಯಂ, ವಿಟಮಿನ್, ಮಿನರಲ್ಸ್ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ ಅಂತ. ಆದರೆ ಕೆಲವೊಮ್ಮೆ ಈ ಒಣ ಖರ್ಜೂರವನ್ನು ಯಾವ ರೀತಿಯಾಗಿ ನಮಗೆ ಸಿದ್ಧಮಾಡಿ ಕಳುಹಿಸುತ್ತಾರೆ ಎಂಬುದರ ಬಗ್ಗೆ ಅಷ್ಟು ಜನರಿಗೆ ತಿಳಿದಿಲ್ಲ. ಹೌದು ಒಣ ಖರ್ಜೂರವನ್ನು ಗಿಡದಿಂದ ಕಿತ್ತ ಮೇಲೆ ಅದನ್ನು ನೇರವಾಗಿ ನಮಗೆ ಮಾರಾಟ ಮಾಡುವುದಿಲ್ಲ. ಬದಲಾಗಿ ಅದನ್ನು ಕಾರ್ಖಾನೆಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರೋಸೆಸಿಂಗ್ ಮಾಡಿ ಅದನ್ನು ಮಾರಟ ಮಾಡುತ್ತಾರೆ.
ಈ ರೀತಿ ಮಾಡುವುದರಿಂದ ಡ್ರೈ ಫ್ರೂಟ್ಸ್ ನಲ್ಲಿ ಏನು ಬದಲಾವಣೆಯಾಗುತ್ತದೆ ಹೀಗೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಉತ್ತಮ ಅಥವಾ ಇಲ್ಲವಾ ಎಂಬ ವಿಚಾರವನ್ನು ತಿಳಿದುಕೊಳ್ಳುವ ಕುತೂಹಲ ಸಾಕಷ್ಟು ಜನರಿಗೆ ಇರುವುದನ್ನು ನಾವು ನೋಡಬಹುದಾಗಿದೆ. ಹಾಗಾಗಿ ಇಂದು ಡ್ರೈ ಫ್ರೂಟ್ಸ್ ನಲ್ಲಿ ಇರುವಂತಹ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ. ಈ ಮಾಹಿತಿಯನ್ನು ನೋಡಿದರೆ ನಿಜಕ್ಕೂ ನೀವು ಬೆಚ್ಚಿ ಬೆರಗಾಗಿ ಹೋಗುತ್ತಿರುವುದು ಎಂದು ನೀವು ಕೇಳಿರದಂತಹ ಕರ್ಜೂರದ ಮಾಹಿತಿಯನ್ನು ನಾವಿಂದು ತಿಳಿಸಲಿದ್ದೇವೆ. ಮೊದಲಿಗೆ ಗೋಡಂಬಿ ಹೌದು ಸಾಮಾನ್ಯವಾಗಿ ಗೋಡಂಬಿಗಳು ಗಿಡದಲ್ಲಿ ಬೆಳೆಯುತ್ತದೆಯೇ ಈ ಗೋಡಂಬಿಗಳನ್ನು ನಾವು ನೇರವಾಗಿ ಕಿತ್ತು ಅದನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಅದರ ಮೇಲೆ ಇರುವಂತಹ ಕಾಯಿಯನ್ನು ತೆಗೆದಾಗ ಒಳಗೆ ಗೋಡಂಬಿ ಇರುವುದನ್ನು ನಾವು ನೋಡಬಹುದಾಗಿದೆ.
ಅಷ್ಟೇ ಅಲ್ಲದೆ ಈ ಗೋಡಂಬಿಯನ್ನು ನೇರವಾಗಿ ಮಾರಾಟ ಮಾಡುವುದಿಲ್ಲ ಇದನ್ನು ಮಾರಾಟ ಮಾಡುವುದಕ್ಕಿಂತ ಮುಂಚೆ ಅಥವಾ ಪ್ಯಾಕಿಂಗ್ ಮಾಡುವುದಕ್ಕಿಂತ ಮುಂಚೆ ಹಲವಾರು ಪ್ರೊಸೆಸ್ ಇರುವುದನ್ನು ನೋಡಬಹುದಾಗಿದೆ. ಈ ಒಂದು ಗೋಡಂಬಿ ಗಿಡವನ್ನು ಹಸಿಯಾಗಿರುವಾಗ ಯಾರು ಕೂಡ ಸೇವನೆ ಮಾಡುವುದಕ್ಕೆ ಹೋಗಬಾರದು. ಹೌದು ಇದನ್ನು ಸೇವನೆ ಮಾಡಿದರೆ ಆರೋಗ್ಯಕ್ಕೆ ಹಲವಾರು ಗಂಭೀರ ರೀತಿಯಾದಂತಹ ತೊಂದರೆಗಳು ಉಂಟಾಗುತ್ತದೆ ಕೆಲವೊಂದಷ್ಟು ಮಂದಿ ಗೋಡಂಬಿಯನ್ನು ಕಾಯಿ ಇರುವಾಗಲೇ ಸೇವನೆ ಮಾಡಲು ಹೋಗಿ ನಮ್ಮ ದೇಹಕ್ಕೆ ಕುತ್ತು ಕಂಡುಕೊಂಡಿರುವಂತಹ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿದೆ. ಈ ಒಂದು ಕಾರಣಕ್ಕಾಗಿಯೇ ಗೋಡಂಬಿಗಳನ್ನು ಗಿಡದಿಂದ ಕಿತ್ತ ನಂತರ ಅದನ್ನು ನೇರವಾಗಿ ಮಾರಾಟ ಮಾಡುವುದಿಲ್ಲ. ಅದನ್ನು ಫ್ಯಾಕ್ಟರಿಗಳಲ್ಲಿ ಅಥವಾ ನಿಯೋಜಿತವಾದಂತಹ ಸ್ಥಳದಲ್ಲಿ ಪ್ರೊಸೆಸಿಂಗ್ ಮಾಡಿದ ನಂತರ ಮಾರಾಟ ಮಾಡುತ್ತಾರೆ.