ಮೇಷ ರಾಶಿ: ಮನೆಯಲ್ಲಿ ನೆಮ್ಮದಿ ವಾತಾವರಣವನ್ನು ಕಾಣಲು ನಿಮ್ಮ ಮನೆ ದೇವರನ್ನು ಪ್ರಾರ್ಥಿಸಿ ದಿನವನ್ನು ಆರಂಭಿಸಿ. ದೇವರ ಆಶೀರ್ವಾದದಿಂದ ನೀವು ಇಂದು ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಕೆಲಸದ ವಿಚಾರವಾಗಿ ಹೇಳುವುದಾದರೆ ಕಚೇರಿಯಲ್ಲಿ ಉತ್ತಮವಾದ ವಾತಾವರಣವಿರುತ್ತದೆ. ನಿಮ್ಮ ಬಾಸ್ ಉತ್ತಮ ಮನಸ್ಥಿತಿಯಲ್ಲಿ ಇರುತ್ತಾರೆ. ಅದೃಷ್ಟದ ಸಂಖ್ಯೆ- ಅದೃಷ್ಟದ ಬಣ್ಣ ಉತ್ತಮ ಸಮಯ
ವೃಷಭ ರಾಶಿ :- ಈ ದಿನ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಇರಲಿ. ಮನೆಯ ವಾತಾವರಣ ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ. ಮಕ್ಕಳಿಗೆ ಉಡುಗೊರೆ ತೆಗೆದುಕೊಳ್ಳುವ ಸಾಧ್ಯತೆಯಿದೆ ಕೆಲಸದ ಸ್ಥಳದಲ್ಲಿ ಹೊಂದಾಣಿಕೆ ಇರುತ್ತದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ.
ಸುಮಶ್ರೀ youtube ವಾಹಿನಿಗೆ ಆತ್ಮೀಯವಾದ ಸ್ವಾಗತ.
ಪ್ರತಿದಿನ ಬೆಳಿಗ್ಗೆ 06:00 ಗೆ ಪಂಚಾಂಗವನ್ನು ವೀಕ್ಷಿಸಲು ನಮ್ಮ Sumashri SMS channel subscribe ಮಾಡಿ
ಈ ದಿನದಂದು ಪುನರ್ವಸು ನಕ್ಷತ್ರವನ್ನು ಮತ್ತು ಅದಿತಿದೇವತೆಯನ್ನು ಸ್ತುತಿಸಿ ಸಕಲದೋಷಗಳನ್ನು ನಿವಾರಿಸಿಕೊಳ್ಳೋಣ.
ಶ್ಲೋಕ
ಪುನರ್ವಸ್ವಾಖ್ಯನಕ್ಷತ್ರಮ್ ಅದಿತಿರ್ಯಸ್ಯ ದೇವತಾ।
ಪುನಃ ಪುನಃ ಶುಭಂ ಕುರ್ಯಾತ್ ಪುನರ್ವಸು ಚ ವರ್ಧಯೇತ್॥
ಅರ್ಥ-
ಪುನರ್ವಸು ನಕ್ಷತ್ರದ ಹಾಗು ಅದರ ಅಧಿದೇವತೆಯಾದ ಅದಿತಿದೇವತೆಯ ಅನುಗ್ರಹದಿಂದ ನಮಗೆ ಪುನಃ ಪುನಃ ಶುಭವುಂಟಾಗಲಿ ಮತ್ತು ನಮ್ಮ ಧನಧಾನ್ಯಾದಿ ಸಂಪತ್ತುಗಳು ವರ್ಧಿಸುವಂತಾಗಲಿ.
ಇಂದಿನ ಪಂಚಾಂಗ
ಶುಭಕೃನ್ನಾಮಸಂವತ್ಸರಃ
ಉತ್ತರಾಯಣಮ್
ವಸಂತ-ಋತುಃ
ವೈಶಾಖಮಾಸಃ
ಶುಕ್ಲಪಕ್ಷಃ
ಷಷ್ಠೀತಿಥಿಃ
ಪುನರ್ವಸುನಕ್ಷತ್ರಮ್
ಶೂಲನಾಮಯೋಗಃ
ತೈತಿಲಕರಣಮ್
ಶನಿವಾಸರಃ
śanivāsaraḥ ಸೂರ್ಯೋದಯ – 05:59 A.M
ಸೂರ್ಯಾಸ್ತ – 6:34 P.M
ಪಂಚಾಂಗ ಶ್ರವಣವನ್ನು ಮಾಡುವವರಿಗಾಗಿ ಮಾಡಿರುವ ವಿಶೇಷ ವೀಡಿಯೋ.
ಪ್ರತಿನಿತ್ಯ ಪಂಚಾಂಗ ಶ್ರವಣದಿಂದ ಏನು ಲಾಭ?
ತಿಥೇಶ್ಚ ಶ್ರಿಯಮಾಪ್ನೋತಿ ವಾರಾದಾಯುಷ್ಯ ವರ್ಧನಂ|
ನಕ್ಷತ್ರಾದ್ಧರತೇ ಪಾಪಂ ಯೋಗಾದ್ರೋಗನಿವಾರಣಮ್||
ಕರಣಾತ್ ಕಾರ್ಯಸಿದ್ಧಿಃ ಸ್ಯಾತ್ ಪಂಚಾಂಗಫಲಮುತ್ತಮಮ್||
ಅರ್ಥ – ತಿಥಿಯಿಂದ ಐಶ್ವರ್ಯವು ಲಭಿಸುವುದು, ವಾರದಿಂದ ಆಯುಷ್ಯದ ಹೆಚ್ಚಳವಾಗುವುದು, ನಕ್ಷತ್ರದಿಂದ ಪಾಪದ ನಿವಾರಣೆಯಾಗುವುದು, ಯೋಗದಿಂದ ರೋಗಗಳ ನಿವಾರಣೆಯಾಗುವುದು, ಕರಣದಿಂದ ಎಲ್ಲ ಕೆಲಸಗಳೂ ಸುಲಭವಾಗುವವು ಆದ್ದರಿಂದ ಈರೀತಿ ಉತ್ತಮ ಫಲಗಳನ್ನೊಳಗೊಂಡ ಪಂಚಾಂಗವನ್ನು ನಾವು ಕೇಳಿ ಧನ್ಯರಾಗೋಣ.
ಈ ರೀತಿಯ ಶ್ಲೋಕಗಳನ್ನು ಪ್ರತಿದಿನ ಆಲಿಸುವುದು ತುಂಬಾ ಉತ್ತಮ. ಹೀಗಾಗಿ ಈ ಪಂಚಾಂಗವನ್ನು ದಿನಕ್ಕೊಂದು ದೇವತಾ ಸ್ತುತಿಯೊಂದಿಗೆ ನಮ್ಮ Sumashri SMS YouTube channel ನಲ್ಲಿ ಪ್ರತಿದಿನ ಎಲ್ಲರ ಉಪಯೋಗಕ್ಕಾಗಿ ತಿಳಿಸಿಕೊಡಲಾಗುತ್ತಿದೆ.
ಮಿಥುನ ರಾಶಿ :- ಈ ದಿನ ನಿಮ್ಮ ಆರೋಗ್ಯದ ಸಮಸ್ಯೆ ಇರಬಹುದು ಹೊರಗೆಟ್ಟಿರುವ ಆಹಾರವನ್ನು ತಿನ್ನಲು ತಪ್ಪಿಸಬೇಕು. ಪ್ರತಿನಿತ್ಯ ಯೋಗ ಮತ್ತು ಜ್ಞಾನ ಮಾಡಿ ಇದರಿಂದ ನಿಮ್ಮ ಮನಸ್ಸು ಮತ್ತು ಆರೋಗ್ಯ ಉತ್ತಮವಾಗಿ ಇರುತ್ತದೆ. ಉದ್ಯಮಿಗಳಿಗೆ ಸಾಮಾನ್ಯ ದಿನವಾಗಿರುತ್ತದೆ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ.
ಕಟಕ ರಾಶಿ :- ಹಣಕಾಸಿನ ವಿಚಾರದಲ್ಲಿ ಲಾಭವಾಗಲಿದೆ ಕೆಲಸದಲ್ಲಿ ಜಾಗೃತರಾಗಿರಬೇಕು. ವ್ಯಾಪಾರಿಗಳು ತುಂಬಾ ಎಚ್ಚರದಿಂದಿರಬೇಕು. ಕೆಲಸ ಮಾಡ ಬೇಕಾದರೆ ತುಂಬಾ ವಿಚಾರಿಸಿ ಕೆಲಸ ಮಾಡಿ. ಕುಟುಂಬ ಜೀವನದ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ನಿಮ್ಮ ಜೀವನದಲ್ಲಿ ವೈವಾಹಿಕ ಜೀವನ ಬಗ್ಗೆ ಹೆಚ್ಚಿನ ಗಮನ ಕೊಡಿ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – 3:00 ಯಿಂದ ಸಂಜೆ 5 ರವರೆಗೆ.
ಸಿಂಹ ರಾಶಿ :- ನಿಮ್ಮ ಮಗುವಿನ ಶಿಕ್ಷಣ ಸಂಬಂಧಿಸಿದಂತೆ ಕೆಲವು ತೊಂದರೆಗಳು ಉಂಟಾಗಬಹುದು. ಇದರಿಂದ ಮನೆಯ ವಾತಾವರಣಕ್ಕೆ ತೊಂದರೆಯಾಗಲಿದೆ. ಪೋಷಕರ ಪ್ರೀತಿ ಮತ್ತು ಬೆಂಬಲವು ದೊಡ್ಡ ತೊಂದರೆಗಳಿಂದ ದೂರ ಸರಿಯಲು ಸಹಾಯ ಮಾಡುತ್ತದೆ. ಆರ್ಥಿಕ ಸಲಹೆಗಳನ್ನು ನಿಮ್ಮ ಸ್ನೇಹಿತರಿಂದ ಪಡೆಯುತ್ತೀರಿ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.
ಕನ್ಯಾ ರಾಶಿ :- ಈ ದಿನ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಇಂದು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತಾರೆ. ಇತ್ತೀಚಿಗೆ ಹೊಸ ವ್ಯಾಪಾರವನ್ನು ಪ್ರಾರಂಭಿಸಿದರೆ ನೀವು ಹೆಚ್ಚಿನ ಗಮನವನ್ನು ನೀಡಬೇಕು. ಇಂದು ಪ್ರಮುಖ ಕಾರ್ಯಗಳನ್ನು ಕೂಡ ಪೂರ್ಣಗೊಳಿಸುವ ಸಾಧ್ಯತೆ ಇದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 9 ರಿಂದ 12.30 ರವರೆಗೆ.
ತುಲಾ ರಾಶಿ :- ಕುಟುಂಬದ ವಿಚಾರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ತುಂಬಾ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ತಪ್ಪು ನಿರ್ಧಾರಗಳು ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು. ಹಣಕಾಸಿನ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಉದ್ಯಮಿಗಳಿಗೆ ಉತ್ತಮವಾದ ದಿನವಾಗಿರುತ್ತದೆ. ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4.30 ರಿಂದ 8:00 ಗಂಟೆಯವರೆಗೆ.
ವೃಶ್ಚಿಕ ರಾಶಿ :- ಈ ದಿನ ನೀವು ಹಾಸನ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ನೀವು ಮಾಡುತ್ತಿರುವ ಪ್ರಮುಖ ಕಾರ್ಯಗಳಲ್ಲಿ ಅಡಚಣೆ ಉಂಟಾಗಬಹುದು. ಸ್ನೇಹಿತರಿಂದ ಸಹಾಯ ಸಿಗುವ ಸಾಧ್ಯತೆ ಇದೆ ಧೈರ್ಯ ಮತ್ತು ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 11.30 ರಿಂದ ಮಧ್ಯಾಹ್ನ 4.00 ಗಂಟೆಯವರೆಗೆ.
ಧನಸು ರಾಶಿ :- ಕೆಲಸ ಮತ್ತು ಕುಟುಂಬ ಜೀವನ ಎರಡು ಕೂಡ ಸಮಾನವಾಗಿ ನೋಡಿಕೊಂಡು ಹೋಗಬೇಕಾಗುತ್ತದೆ. ಇಲ್ಲದಿದ್ದರೆ ಬಿರುಕು ಉಂಟಾಗುವ ಸಾಧ್ಯತೆ ಇರುತ್ತದೆ. ಅನಗತ್ಯ ಚಿಂತೆ ಮಾಡುವುದನ್ನು ತಪ್ಪಿಸಿ ಹಣಕಾಸಿನ ವಿಚಾರದಲ್ಲಿ ವೆಚ್ಚ ಜಾಸ್ತಿ ಆಗಲಿದೆ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ -ಗುಲಾಬಿ ಸಮಯ – ಸಂಜೆ 7.30 ರಾತ್ರಿ 9 ಗಂಟೆಯವರೆಗೆ.
ಮಕರ ರಾಶಿ :- ಇದು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯನ್ನು ವಹಿಸಿ ನೀವು ಯಾರನ್ನಾದರೂ ಇಷ್ಟ ಪಟ್ಟಿದ್ದರೆ ನಿಮ್ಮ ಭಾವನೆಗಳನ್ನು ಅವರಿಗೆ ತಿಳಿಸಿದರೆ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಇಂದು ನಿಮ್ಮ ಮಕ್ಕಳೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತಿದ್ದರು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.
ಕುಂಭ ರಾಶಿ :- ಈ ದಿನ ಪ್ರೀತಿಪಾತ್ರರೊಂದಿಗೆ ಸಂಬಂಧವು ಬಲಗೊಳ್ಳುತ್ತದೆ. ಧಾರ್ಮಿಕ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸುತ್ತೀರಿ ಒಡಹುಟ್ಟಿದವರಿಗೆ ವಿವಾದ ಕೂಡ ದೂರವಾಗಲಿದೆ. ಆರೋಗ್ಯದ ದೃಷ್ಟಿಯಲ್ಲಿ ಉತ್ತಮವಾಗಿರುತ್ತದೆ. ನಿಮ್ಮ ಜೀವನ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಆದರೆ ಆರೋಗ್ಯದ ಶೈಲಿ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7.30 ರಿಂದ ಮಧ್ಯಾಹ್ನ 1.30 ರವರೆಗೆ.
ಮೀನ ರಾಶಿ :- ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮವಾದ ದಿನವಾಗಲಿದೆ. ಶಕ್ತಿಯುತ ಮತ್ತು ಉಲ್ಲಾಸದಿಂದ ಈ ದಿನವನ್ನು ಕಳೆಯುತ್ತೀರಿ. ಹಳೆಯ ವಿಷಯಗಳನ್ನು ಮರೆತು ಮುಂದೆ ಸಾಗುವ ಸಮಯವಿದು. ಭಾವನೆಗಳನ್ನು ನೀವು ಗೊಳಿಸಬೇಕು. ಆರ್ಥಿಕ ರಂಗದಲ್ಲಿ ಇಂದು ಸಾಮಾನ್ಯ ದಿನವಾಗಿರುತ್ತದೆ. ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4 ರಿಂದ ರಾತ್ರಿ 7.30 ರವರೆಗೆ.