ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಸ್ಪರ್ಧಿ ಸುಮಂತ್ ಮಂಗಳಮುಖಿಯಾಗಿ ಬದಲಾವಣೆಯಾಗಿದ್ದು ಹೇಗೆ ಗೊತ್ತಾ.ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ಕಾರ್ಯಕ್ರಮದಲ್ಲಿ ಮಂಗಳಮುಖಿ ಆದಂತಹ ಸಾಕ್ಷ್ಯ ಅವರು ಸ್ಪರ್ಧೆ ಮಾಡುತ್ತಾರೆ ಇವರ ನಿಜವಾದ ಹೆಸರು ಸುಮಂತ್ ಆಚಾರ್ಯ ಅಂತ. ಸುಮಂತ್ ಮಂಗಳಮುಖಿಯಾಗಿ ಹೇಗೆ ಬದಲಾದರು ಅಂತ ಕೇಳಿದರೆ ನಿಜಕ್ಕೂ ಕೂಡ ನಿಮಗೆ ಆಶ್ಚರ್ಯವಾಗುತ್ತದೆ. ಇವರಿಗೆ ಚಿಕ್ಕವಯಸ್ಸಿನಿಂದಲೂ ಕೂಡ ಡಾನ್ಸ್ ಅಂದರೆ ಬಹಳ ಇಷ್ಟ ಇವರು ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವಾಗ ಮಂಗಳಮುಖಿಯರ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ. ಇನ್ನು ಸುಮಂತ್ ಅವರಿಗೆ ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದನ್ನು ಅವರ ತಂಗಿಯ ಬಳಿ ಹೇಳಿಕೊಳ್ಳುತ್ತಾರೆ ಆ ಸಮಯದಲ್ಲಿ ಅವರ ತಂಗಿಯ ಕೂಡ ಬಹಳ ದುಃಖ ಪಡುತ್ತಾರೆ. ಸದ್ಯಕ್ಕೆ ಸಾಕ್ಷ್ಯ ಅವರು ಅವರ ತಂದೆ-ತಾಯಿ ಪ್ರೀತಿಯಿಂದ ದೂರವುಳಿದಿದ್ದಾರೆ ಹೌದು ಇದೀಗ ಸಾಕ್ಷ್ಯ ಅವರು ಬೇರೆಯಾಗಿ ಒಂಟಿ ಜೀವನವನ್ನು ಸಾಗಿಸುತ್ತಿದ್ದಾರೆ.ಇವರ ಕೊನೆ ಆಸೆ ಏನೆಂದರೆ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದರ ಮೂಲಕ ತಮ್ಮ ತಂದೆ ತಾಯಿಗಳನ್ನು ಭೇಟಿ ಮಾಡಬೇಕು ಎಂಬುದು. ನಿಜಕ್ಕೂ ಕೂಡ ಸಾಕ್ಷ್ಯ ಅವರು ತುಂಬಾನೇ ಪ್ರತಿಭೆಯನ್ನು ಉಳ್ಳಂತಹ ವ್ಯಕ್ತಿ ಈ ಕಾರಣದಿಂದಾಗಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಿಂದ ಬರಲಿ ತಮ್ಮ
ತಂದೆ ತಾಯಿ ಪ್ರೀತಿಯನ್ನು ಪಡೆಯುವುದಕ್ಕಾಗಿ ಹಂಬಲಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ನನ್ನ ರೀತಿಯಾಗಿ ಬಹಳಷ್ಟು ಮಂಗಳಮುಖಿಯರು ಇರುವುದನ್ನು ನೀವು ನೋಡಬಹುದು ಆದರೆ ಇವರಿಗೆ ಅವಕಾಶಗಳು ದೊರೆಯದೆ ಇರುವ ಕಾರಣ ಜೀವನ ನಡೆಸುತ್ತಿದ್ದಾರೆ ಎಂದು ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ವೇದಿಕೆಯಲ್ಲಿ ತಮ್ಮ ನೋವನ್ನು ಹೇಳಿಕೊಂಡರು. ಒಂದು ವೇಳೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸಾಕ್ಷ್ಯ ಅವರು ಏನಾದರೂ ವಿಜೇತರಾಗಿದ್ದಾರೆ ನಿಜಕ್ಕೂ ಕೂಡ ಇದು ಒಂದು ಇತಿಹಾಸವಾಗಿ ಮಾರ್ಪಾಡು ಆಗುತ್ತದೆ.
ನಿಮ್ಮೆಲ್ಲರಿಗೂ ತಿಳಿದಿರುವಂತೆ ಸಮಾಜದಲ್ಲಿ ಮಂಗಳಮುಖಿಯರು ಅಂದರೆ ಅವರನ್ನು ಅಸಡ್ಡೆಯಿಂದ ಕಾಣುತ್ತಾರೆ ಇನ್ನೂ ಕೆಲವೊಂದಷ್ಟು ಕಡೆ ಅವರನ್ನು ಅವಮಾನ ಮಾಡುತ್ತಾರೆ. ಆದರೆ ನಿಜಕ್ಕೂ ಕೂಡ ಮಂಗಳಮುಖಿಯರಿಗೆ ಕೂಡ ಒಂದು ಮನಸ್ಸು ಇರುತ್ತದೆ ಅವರಿಗೂ ಕೂಡ ಪ್ರತಿಭೆಯಿರುತ್ತದೆ ಎಂಬ ವಿಚಾರವನ್ನು ಸಾಕಷ್ಟು ಜನ ಮನದಟ್ಟು ಮಾಡಿಕೊಳ್ಳುವುದಿಲ್ಲ. ಮಂಗಳಮುಖಿಯರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತವಾದಂತಹ ದಾರಿಯನ್ನು ಕಲ್ಪಿಸಿಕೊಂಡರೆ ಕೂಡ ಅವರು ಸಮಾಜದಲ್ಲಿ ಜೀವನ ನಡೆಸಿಕೊಳ್ಳುತ್ತಾರೆ.