ಮೋಹನ್ ಜುನೇಜಾ ಅವರ ಹೆಂಡತಿ,ಮಕ್ಕಳು ಕಷ್ಟಪಟ್ಟು ದುಡಿದ ಮನೆ ಹೇಗಿದೆ ನೋಡಿ..ಕುಟುಂಬ ಹೇಗಿದೆ ನೋಡಿ..

ಮೋಹನ್ ಜುನೇಜ ಅವರ ಹೆಂಡತಿ ಮಕ್ಕಳು ಮತ್ತು ಇವರ ಸುಂದರ ಮನೆ ಹೇಗಿದೆ ನೋಡಿ.ಮೋಹನ್ ಜುನೇಜ ಇವರು ಕನ್ನಡದ ಹೆಸರಾಂತ ಹಾಸ್ಯ ನಟರು ಅಷ್ಟೇ ಅಲ್ಲದೆ ಕಿರುತೆರೆಯಲ್ಲೂ ಕೂಡ ಬಹಳಷ್ಟು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ. ರಂಗಭೂಮಿಯಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಇತ್ತೀಚಿಗಷ್ಟೇ ಕೆಜಿಎಫ್ ಚಾಪ್ಟರ್ ಟು ಸಿನಿಮಾದಲ್ಲೂ ಕೂಡ ನಟನೆ ಮಾಡಿದ್ದರು. ನಿಮಗೆ ಮೋಹನ್ ಜುನೇಜ ಅವರ ಕುಟುಂಬಸ್ಥರ ಬಗ್ಗೆ ಒಂದು ಕಿರು ಪರಿಚಯವನ್ನು ಮಾಡಿಕೊಡಲಿದ್ದೇನೆ. ಮೋಹನ್ ಜುನೇಜಾ ಅವರನ್ನು ಎಲ್ಲರೂ ಕೂಡ ಪ್ರೀತಿಯಿಂದ ಮೋಜು ಎಂದು ಕರೆಯುತ್ತಿದ್ದರು ಇವರು ಮೂಲತಃ ಬೆಂಗಳೂರಿನವರೇ ಅಂದರೆ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರೂ ಆದರೆ ಇವರ ತಂದೆಯ ಮೂಲವನ್ನು ನೋಡಿದರೆ ತುಮಕೂರಿನ ತುರುವೇಕೆರೆಯವರು. ಮೋಹನ್ ಜುನೇಜ ಅವರ ತಂದೆ ವಾಟರ್ ಸಪ್ಲೈ ಯಲ್ಲಿ ಕೆಲಸ ಮಾಡುತ್ತಿರುತ್ತಾರೆ ಇವರ ತಾಯಿ ಈಗಲೂ ಕೂಡ ಬದುಕಿರುವುದನ್ನು ನಾವು ನೋಡಬಹುದಾಗಿದೆ. ಮೋಹನ್ ಜುನೇಜ ಅವರು 9ನೇ ತರಗತಿಯ ವರೆಗೂ ಕೂಡ ವಿದ್ಯಾಭ್ಯಾಸವನ್ನು ಮಾಡುತ್ತಾರೆ ತದನಂತರ ಇವರಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರುವುದಿಲ್ಲ. ಕಲಾಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ.

ಹತ್ತನೇ ತರಗತಿಗೆ ಕಷ್ಟ ಹೇಗೋ ಕಷ್ಟಪಟ್ಟು ಮನೆಯವರು ಹಿಂಸೆ ಮಾಡಿ ಸೇರಿಸುತ್ತಾರೆ ಆದರೂ ಕೂಡ 10ನೇ ತರಗತಿಯಲ್ಲಿ ಇವರು ಅನುತ್ತೀರ್ಣರಾಗುತ್ತಾರೆ. ತದನಂತರ ಇವರು ಸಂಪೂರ್ಣವಾಗಿ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವುದಕ್ಕೆ ನಿರ್ಧಾರ ಮಾಡುತ್ತಾರೆ‌. ಮೊದಲು ಟೆಕ್ನಿಷಿಯನ್ ಆಗಿ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ ಅಷ್ಟೇ ಅಲ್ಲದೆ ಇವರು ಅದ್ಭುತ ಬರಹಗಾರರು ಹಲವಾರು ಡೈಲಾಗ್ ಗಳನ್ನು ಮತ್ತು ಸಂಭಾಷಣೆಯನ್ನು ಧಾರವಾಹಿಗಳಿಗೆ ಕಥೆಗಳನ್ನು ಬರೆದು ಕೊಡುತ್ತಾರೆ. ತದನಂತರ ಚೆಲ್ಲಾಟ ಎಂಬ ಸಿನಿಮಾದ ಮೂಲಕ ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭ ಮಾಡುತ್ತಾರೆ. ಇಲ್ಲಿಯವರೆಗೂ ಕೂಡ ಮೋಹನ್ ಜುನೇಜ ಅವರು ಸುಮಾರು 150ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಅಷ್ಟೇ ಅಲ್ಲದೆ ಕೆಲವೊಂದಷ್ಟು ಧಾರಾವಾಹಿಗಳಲ್ಲೂ ಕೂಡ ನಟಿಸಿದ್ದಾರೆ.

WhatsApp Group Join Now
Telegram Group Join Now

ಒಂದು ಸಮಯದಲ್ಲಿ ಮೋಹನ್ ಜುನೇಜ ಅವರ ಕುಟುಂಬ ಪರಿಸ್ಥಿತಿ ತುಂಬಾನೇ ಹದಗೆಟ್ಟಿತು ಆ ಸಮಯದಲ್ಲಿ ಇವರು ಗೋವಾದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದರು. ತದನಂತರ ಫೋಟೋಗ್ರಾಫರ್ ಆಗಿ ಹೀಗೆ ಚಿಕ್ಕ ಪುಟ್ಟ ಕೆಲಸಗಳನ್ನು ಸಿಕ್ಕಸಿಕ್ಕದ್ದನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ರಂಗಭೂಮಿಗೆ ಬಂದನಂತರ ಇವರಿಗೆ ಒಂದು ನೆಲೆ ಎಂಬುದು ದೊರೆಯುತ್ತದೆ ಸದಾಕಾಲ ಯಾವಾಗಲೂ ಚಿತ್ರರಂಗ ಸಿನಿಮಾ ಧಾರವಾಹಿ ಅಂತಾನೇ ತುಂಬಾನೇ ಬಿಸಿಯಾಗಿ ಇದ್ದಂತಹ ಮೋಹನ್ ಜುನೇಜ ಅವರಿಗೆ ಕುಟುಂಬ ಸದಸ್ಯರು 1994ರಲ್ಲಿ ಮದುವೆಯನ್ನು ನಿಶ್ಚಯ ಮಾಡುತ್ತಾರೆ.

[irp]