ಲಕ್ಷಾಂತರ ಜನರ ಬದುಕನ್ನು ಬದಲಿಸಿದ ಧ್ವನಿ ಇದು.ಈ ವಿಡಿಯೊ ನೋಡಿ ಸಾಧಿಸುವ ಕಿಚ್ಚು ಹುಟ್ಟಿಕೊಳ್ಳುತ್ತೆ..

ಲಕ್ಷಾಂತರ ಜನರ ಬದುಕನ್ನು ಬದಲಿಸಿದ ಈ ಧ್ವನಿಯನ್ನು ಒಮ್ಮೆ ನೀವು ಕೇಳಲೇಬೇಕು ಈ ಮಾತುಗಳನ್ನು ಕೇಳಿದ ಬಳಿಕ ನಿಮ್ಮಲ್ಲಿ ಸಾಧಿಸುವ ಕಿಚ್ಚು ಹುಟ್ಟಿಕೊಳ್ಳುತ್ತೆ.ಅಂದನೊಬ್ಬನು ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ಬಂದಾಗ ಅಲ್ಲಿದ್ದಂತಹ ಜನರು ಕೂಡ ನಗುತ್ತಾರೆ ನೀನೇನು ದೇವರ ದರ್ಶನವನ್ನು ಮಾಡಲು ಸಾಧ್ಯವಾಗುತ್ತದೆಯೇ ಅಂತ ಆತನನ್ನು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರ ನೀಡಿದಂತಹ ಕುರುಡ ನಾನು ದೇವರನ್ನು ನೋಡುತ್ತೇನೋ ಇಲ್ಲವೋ ಗೊತ್ತಿಲ್ಲ ಆದರೆ ದೇವರು ಮಾತ್ರ ನನ್ನನ್ನು ನೋಡುತ್ತಾನೆ ಅದೇ ನನಗೆ ಸಾಕು ಅಂತ ಹೇಳುತ್ತಾನೆ. ಮಾತನಾಡಿದಂತೆ ಜೀವನ ಮಾಡಲು ಸಾಧ್ಯವಿಲ್ಲ ಹಾಗೆ ಬರೆದಿಟ್ಟ ಮಾದರಿಯಲ್ಲಿ ಬದುಕನ್ನು ಸಾಗಿಸಲು ಸಾಧ್ಯವಾಗುವುದಿಲ್ಲ. ನಮ್ಮಿಂದ ಬೇರೆಯವರಿಗೆ ತೊಂದರೆ ಆಗದಂತೆ ಬದುಕಿದರೆ ಸಾಕು ಅದೇ ಸಂತ್ರಪ್ತ ಬದುಕು ಕತ್ತಲೆಯನ್ನು ಮೀರಿ ದೀಪಕ್ಕೆ ಬೆಳಕು ನೀಡುವುದೇ ನಿಜವಾದ ಮಹತ್ತರವಾದಂತಹ ಬದುಕು. ಜೀವನದ ಕಷ್ಟಗಳನ್ನು ಮೀರಿ ಮುಂದೆ ನಡೆಯುವುದೇ ಜೀವನ. ಜೀವನದಲ್ಲಿ ಎಂದಿಗೂ ಕೂಡ ಈ ಎರಡು ವ್ಯಕ್ತಿಗಳನ್ನು ಮರೆಯಬಾರದು ಒಂದು ನಮಗೆ ಅಗತ್ಯವಿದ್ದಾಗ ನಮಗೆ ಸಹಾಯ ಮಾಡದೆ ಹೋದವರು, ಎರಡನೆಯದಾಗಿ ನಾವು ಕೇಳದೇ ಇದ್ದರೂ ಕೂಡ ನಮಗೆ ಸಹಾಯ ಮಾಡಲು ಮುಂದೆ ಬರುವವರು. ನಮಗೆ ಯಾರಾದರೂ ಕೆಟ್ಟದ್ದನ್ನು ಬಯಸುತ್ತಿದ್ದಾರೆ

ಅಂದರೆ ಅದು ಅವರ ಕರ್ಮ ನಾವು ಯಾರಿಗೂ ಕೂಡ ಕೆಟ್ಟದ್ದನ್ನು ಬಯಸಿದೆ ಇದ್ದರೆ ಅದೇ ನಮ್ಮ ಧರ್ಮ. ಅಜ್ಞಾನದಿಂದ ಅಹಂಕಾರ ಬಂದರೆ ಅದೇ ವ್ಯಕ್ತಿಯ ಸರ್ವನಾಶಕ್ಕೆ ಕಾರಣ ಇದನ್ನು ವಿಷ ಎಂದು ಕೂಡಾ ಕರೆಯುತ್ತಾರೆ ಜ್ಞಾನದಿಂದ ವಿನಯ ಬಂದರೆ ಅದು ಅಮೃತಕ್ಕೆ ಸಮಾನ ಒಬ್ಬರನ್ನು ಇನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬುದರ ಮೇಲೆ ಸಂಬಂಧ ಗಟ್ಟಿಯಾಗಿ ಇರುತ್ತದೆ. ಒಟ್ಟಿಗೆ ಇದ್ದಾಗ ಸಂಬಂಧಗಳು ಗಟ್ಟಿಯಾಗುತ್ತದೆ ದೂರ ಹೋದಾಗ ಸಂಬಂಧಗಳು ಹಳಸುತ್ತವೆ ಎಂಬುದು ನಿಜಕ್ಕೂ ಕೂಡ ತಪ್ಪು ಒಬ್ಬರ ಮನಸಿನಲ್ಲಿ ಇನ್ನೊಬ್ಬರ ಬಗ್ಗೆ ಪ್ರೀತಿ ಕಾಳಜಿ ವಿಶ್ವಾಸ ಇದ್ದರೆ ಖಂಡಿತವಾಗಿಯೂ ಕೂಡ ಇಂತಹ ಯೋಚನೆಗಳು ಮನಸ್ಸಿನಲ್ಲಿ ಬರುವುದಿಲ್ಲ. ನಿಮ್ಮ ಜೀವನದಲ್ಲಿ ನಿಮ್ಮನ್ನು ಯಾರು ನಂಬಿರುತ್ತಾರೆ ಅಂತವರಿಗೆ ಯಾವುದೇ ಕಾರಣಕ್ಕೂ ಕೂಡ ಸುಳ್ಳು ಹೇಳುವುದಕ್ಕೆ ಹೋಗಬೇಡಿ. ಅದೇ ರೀತಿ ನಿಮ್ಮ ಬಳಿ ಯಾರು ಸುಳ್ಳು ಹೇಳಿರುತ್ತಾರೆ ಅಂತವರನ್ನು ಯಾವುದೇ ಕಾರಣಕ್ಕೂ ಕೂಡ ಮುಂದೊಂದು ದಿನ ನಂಬುವುದಕ್ಕೆ ಹೋಗಬೇಡಿ. ಹಣ ಇದ್ದರೆ ಶತ್ರು ಕೂಡ ಸ್ನೇಹಿತನಾಗುತ್ತಾನೆ ಕೊಟ್ಟ ಸಾಲವನ್ನು ಹಿಂಪಡೆದರೆ ಸ್ನೇಹಿತರು ಕೂಡ ವೈರಿ ಆಗುತ್ತಾನೆ.

WhatsApp Group Join Now
Telegram Group Join Now