ಪುನೀತ್ ಬದುಕು ನೀವು ಅಂದುಕೊಂಡ ಮಾದರಿಯಲ್ಲಿ ಇರಲಿಲ್ಲ ಹಲವಾರು ಕಷ್ಟನಷ್ಟಗಳನ್ನು ಎದುರಿಸಿದ ವ್ಯಕ್ತಿ.ಆತ ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ದೇವರ ಮಗ ಇತ್ತೀಚಿಗೆ ಸೋಲು ಗಳಿಲ್ಲದೆ ವ್ಯಕ್ತಿಗಳು ಸಿಗುವುದು ತೀರಾ ಅಪರೂಪ ಅಂಥವರಲ್ಲಿ ಈ ಕನ್ನಡದ ಕುಲಪುತ್ರ ಒಬ್ಬ ಅವನಿಗೆ ಯಾವ ಕೆಲಸದ ಅನಿವಾರ್ಯತೆಯೂ ಇರಲಿಲ್ಲ ಯಾರ ಮುಂದೆಯೂ ಕೈಕಟ್ಟಿ ಕೂರುವಂತಹ ಸ್ಥಿತಿಯು ಬಂದಿರಲಿಲ್ಲ. ಕಾಯಕವೇ ಮಾಡದೇ ಕೂತು ತಿನ್ನುವಂತಹ ಶ್ರೀಮಂತಿಕೆ ಆತನ ಮನೆಯಲ್ಲಿ ಇತ್ತು ಆದರೂ ಅಪ್ಪಾ ತೋರಿಸಿದ ದಾರಿಯಲ್ಲಿ ನಡೆದು ತಂದೆಗೆ ತಕ್ಕ ಮಗ ಎಂದು ಕರೆಸಿಕೊಂಡ. ಈತನ ನಟನೆ ಹಾಡು ಡ್ಯಾನ್ಸ್ ನೋಡಿ ಮುದುಕರೆ ಎದ್ದುನಿಂತು ವಿಸಿಲ್ ಹೊಡೆದಿದ್ದು ಇದೆ ತನ್ನ ತಂದೆಯ ಹಾದಿಯಲ್ಲಿ ನಡೆದು ತಂದೆಯನ್ನು ಮೀರಿಸುವಂತೆ ಬೆಳೆದ ಈ ಅಪರೂಪದ ನಕ್ಷತ್ರ ಇಷ್ಟು ಬೇಗ ತನ್ನ ಹೊಳಪು ಕಳುಚಿ ಧರೆಗೆ ಬೀಳುತ್ತೆ ಅಂತ ಯಾರು ಕೂಡ ಅಂದುಕೊಂಡಿರಳು ಸಾಧ್ಯವಿಲ್ಲ.ಅಪ್ಪು ಪವರ್ ಸ್ಟಾರ್ ನಟಸಾರ್ವಭೌಮ ರಾಜರತ್ನ ಹೀಗೆ ಅನೇಕ ಬಿರುದುಗಳಿಂದ ಕನ್ನಡಿಗರ ಪ್ರೀತಿಯ ಮಗನಾಗಿದ್ದ ಪುನೀತ್ ರಾಜಕುಮಾರ್ ಶುಕ್ರವಾರ ಹೃದಯಘಾತದಿಂದ ಎಂದೆಂದೂ ಬಾರದ ಲೋಕಕ್ಕೆ ತೆರಳಿದರು. ಸ್ನೇಹಿತರೆ ಪುನೀತ್ ರಾಜಕುಮಾರ್ ಬಾಲ್ಯದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು.
ಪುನೀತ್ ರಾಜಕುಮಾರ್ ಹುಟ್ಟಿದ್ದು ಹದಿನೇಳು ಮಾರ್ಚ್ 1975ರಲ್ಲಿ ಕಿರಿಯಮಗ ಆಗಿದ್ದರಿಂದ ರಾಜಕುಮಾರ್ ದಂಪತಿ ಅಪ್ಪು ಅವರನ್ನು ಪ್ರೀತಿಯಿಂದ ಬೆಳೆಸುತ್ತಾರೆ. ರಾಜಕುಮಾರ್ ಶೂಟಿಂಗ್ ಗೆ ಹೋಗುವ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರನ್ನು ಕೂಡ ಕರೆದುಕೊಂಡು ಹೋಗುತ್ತಿದ್ದರು ಹೀಗಾಗಿ ಬಾಲ್ಯದಲ್ಲಿ ಪುನೀತ್ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಾರೆ.ಆರನೇ ತಿಂಗಳಿಗೆ ಪ್ರೇಮದ ಕಾಣಿಕೆ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಮಗುವಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಅಪ್ಪು ಅಭಿನಯಿಸುವುದಕ್ಕೆ ಕೂಡ ಕಾರಣ ಇದೆ. ಆ ಸಿನಿಮಾದಲ್ಲಿ ಆರು ತಿಂಗಳ ಹಸುಗೂಸಿನ ಪಾತ್ರ ಬೇಕಿತ್ತು ಚಿತ್ರೀಕರಣ ಮಾಡುವ ವೇಳೆ ಮಗುವಿನ ಪಾತ್ರ ಮಾಡುತ್ತಿದ್ದ ಎಲ್ಲ ಮಕ್ಕಳು ಅಳುತ್ತಾ ಇದ್ದಾರಂತೆ. ಹೀಗಾಗಿ ಶೂಟಿಂಗ್ ಮಾಡುವುದಕ್ಕೆ ಆಗುತ್ತಾ ಇರಲಿಲ್ಲ. ಮಕ್ಕಳು ಅಳುವುದನ್ನು ನಿಲ್ಲಿಸುತ್ತಿರಲಿಲ್ಲ. ಇದನ್ನು ನೋಡಿದ ರಾಜಕುಮಾರ್ ಶೂಟಿಂಗ್ ಗೆ ಬಂದಿದ್ದ ಪಾರ್ವತಮ್ಮ ರಾಜಕುಮಾರ್ ಬಳಿ ಬರುತ್ತಾರೆ. ಯಾರ ಮಕ್ಕಳಿಂದಲೂ ಕೂಡ ಆಕ್ಟಿಂಗ್ ಮಾಡಿಸುವುದಕ್ಕೆ ಆಗುತ್ತಿಲ್ಲ. ನಮ್ಮ ಮಗುವನ್ನು ಆಕ್ಟ್ ಮಾಡಿಸೋಣ ಅಂತಾರೆ. ಅದಕ್ಕೆ ಪಾರ್ವತಮ್ಮ ಕೂಡ ಓಕೆ ಅಂದರು ಈ ಮೂಲಕ ಆರು ತಿಂಗಳ ಮಗುವಾಗಿದ್ದ ಅಪ್ಪು ಪ್ರೇಮದ ಕಾಣಿಕೆ ಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇಲ್ಲಿ ಮತ್ತೊಂದು ವಿಶೇಷವಿದೆ. ಅದೇ ವರ್ಷ ಸೂಪರ್ ಸ್ಟಾರ್ ರಜನಿಕಾಂತ್ ಪೂರ್ವರಂಗ್ ಅನ್ಗಲ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಾರೆ.
ಹುಟ್ಟು ಶ್ರೀಮಂತನಾದರೂ ಪುನೀತ್ ಬದುಕಿದ್ದು ಹೇಗೆ ಗೊತ್ತಾ ನಿಮಗೆ ತಿಳಿಯದ ಪುನೀತ್ ಜೀವನದ ರಹಸ್ಯಗಳು..

Interesting vishya
[irp]