ಹೆಂಡತಿ ಎಂಬ ದೇವತೆಯನ್ನು ಕಳೆದುಕೊಳ್ಳಬೇಡಿ.ಪತ್ನಿ ತೀರಿಹೋಗಿ ಇಂದಿಗೆ ನಾಲ್ಕು ದಿನ ಕಳೆಯಿತು ಆಕೆಯನ್ನು ನೋಡಲು ಬಂದಿದ್ದ ಸಂಬಂಧಿಕರು ಒಬ್ಬೊಬ್ಬರಾಗಿಯೇ ಮನೆಯಿಂದ ಹೊರಟು ಹೋದರು. ಕೊನೆಗೆ ಸಾವಿನ ಗಂಧ ಎಂಬ ಮನೆಯಲ್ಲಿ ನಾನು ಮತ್ತು ನನ್ನ ಮಕ್ಕಳು ಮಾತ್ರ ಉಳಿದುಕೊಂಡೆವು, ಇಂದು ನಮ್ಮ ಬಳಿ ಆಕೆ ಇಲ್ಲ ಎಂಬುವುದನ್ನು ಊಹೆ ಮಾಡಿಕೊಳ್ಳುವುದಕ್ಕೂ ಕೂಡ ನನ್ನಿಂದ ಸಾಧ್ಯವಾಗುತ್ತಿಲ್ಲ. ಮಾತು ಮಾತಿಗೂ ರೀ ಇಲ್ಲಿ ನೋಡಿ ಅಂತ ಹೇಳಿದ ಮಾತು ಈಗ ಕಾಣೆಯಾಗಿದೆ ನನ್ನನ್ನು ಮತ್ತು ನನ್ನ ಮಕ್ಕಳನ್ನು ಪ್ರಾಣಕ್ಕಿಂತಲೂ ಕೂಡ ಹೆಚ್ಚಾಗಿ ಪ್ರೀತಿಸಿ ಇಂದು ಸತ್ತು ಹೋದಂತಹ ನತದೃಷ್ಟ ಮಹಿಳೆ ಆಕೆ. ನಮ್ಮ ಮೇಲಿನ ಅತಿಯಾದ ಪ್ರೀತಿಯಿಂದಲೇ ಏನೋ ಗೊತ್ತಿಲ್ಲ ಆಕೆ ನಮ್ಮನ್ನು ಬಿಟ್ಟು ಎಂದಿಗೂ ಕೂಡ ದೂರ ಹೋಗಿರಲಿಲ್ಲ ಕೊನೆಪಕ್ಷ ತನ್ನ ತವರು ಮನೆಗೆ ಹೋಗುವುದಕ್ಕೂ ಕೂಡ ಹಿಂಜರಿಯುತ್ತಿದ್ದರು.ಒಂದು ವೇಳೆ ಯಾವುದಾದರೂ ಅನಿವಾರ್ಯ ಕಾರ್ಯದಿಂದಾಗಿ ತವರು ಮನೆಗೆ ಹೋಗಬೇಕಾದ ಅಂತಹ ಸಂದರ್ಭ ಎದುರಾದಾಗ ತವರು ಮನೆಗೆ ಹೋಗಿ ಮತ್ತೆ ಸಾಯಂಕಾಲ ವಾಪಸ್ಸು ಬರುತ್ತಿದ್ದಳು. ತವರು ಮನೆಯವರು ಇನ್ನೂ ಸ್ವಲ್ಪ ದಿನ ಹೋಗು ಅಂತ ಹೇಳಿದರೆ ಮನೆಯಲ್ಲಿ
ಅವರು ಮತ್ತು ಮಕ್ಕಳು ಇದ್ದರೆ ನಾನು ಹೋಗಲೇಬೇಕು ದಯವಿಟ್ಟು ನನ್ನನ್ನು ತಡೆಯಬೇಡಿ ಎಂದು ಹೇಳುವ ಮುಖಾಂತರ ಎಷ್ಟೇ ಸಮಯವಾದರೂ ಕೂಡ ರಾತ್ರಿಯಾಗುವಷ್ಟರಲ್ಲಿ ಮನೆಗೆ ಬಂದು ಸೇರಿಕೊಳ್ಳುತ್ತಿದ್ದಳು. ಆದರೆ ಗಂಡ ಈ ರೀತಿ ಯೋಚನೆ ಮಾಡುತ್ತಿದ್ದ ನನ್ನ ಹೆಂಡತಿ ತವರು ಮನೆಗೆ ಹೋಗುವುದು ನನಗೆ ಸ್ವಲ್ಪ ಕೂಡ ಇಷ್ಟ ಇರಲಿಲ್ಲ. ಹಾಗಂತ ಗಂಡನಿಗೆ ಹೆಂಡತಿಯ ಮೇಲೆ ತುಂಬಾನೇ ಪ್ರೀತಿ ಇದೆ ಅಂತ ನೀವು ಭಾವಿಸಿಕೊಳ್ಳಬೇಕು ಇದರ ಹಿಂದೆ ಮತ್ತೊಂದು ಉದ್ದೇಶವಿತ್ತು ಅದೇನೆಂದರೆ ಹೆಂಡತಿ ತವರು ಮನೆಗೆ ಹೋದರೆ ಅಡುಗೆ ಮಾಡುವವರು ಯಾರು ಮನೆ ಕೆಲಸ ಮಾಡುವವರು ಯಾರು ಮಕ್ಕಳನ್ನು ನೋಡಿಕೊಳ್ಳುವವರು ಯಾರು ಎಂಬ ಸ್ವಾರ್ಥಕ್ಕಾಗಿ.
ಇನ್ನು ಗಂಡ ಈಗ ಈ ರೀತಿ ಯೋಚನೆ ಮಾಡುತ್ತಿದ್ದಾನೆ ನಾನು ಮತ್ತು ಮಕ್ಕಳು ರಜೆ ದಿನಗಳಲ್ಲಿ ಟಿವಿಯ ಮುಂದೆ ಕುಳಿತುಕೊಳ್ಳುತ್ತಿದ್ದೆವು ಆದರೆ ನನ್ನ ಹೆಂಡತಿ ಮಾತ್ರ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಯಾವಾಗಲಾದರೂ ಒಂದು ಬಾರಿ ಟಿವಿ ನೋಡುವುದಕ್ಕೆ ಆಕೆಯು ಕೂಡ ಪಕ್ಕದಲ್ಲಿ ಬಂದು ಕುಳಿತುಕೊಂಡರೆ. ಮಕ್ಕಳು ಅಮ್ಮ ನೀರು ಬೇಕು ಹಾಲು ಬೇಕು ಅಂತ ಕೇಳುತ್ತಿದ್ದರು ಅಥವಾ ನಾನೇ ಕಾಫಿ ಮಾಡು ಅಥವಾ ಏನಾದರೂ ತಿಂಡಿ ಮಾಡು ಅಂತ ಹೇಳುತ್ತಿದ್ದವು ಹೀಗೆ ಒಂದಲ್ಲ ಒಂದು ಕಾರಣವನ್ನು ಹೇಳಿ ಹಾಕಿಯನ್ನು ಆ ಜಾಗದಿಂದ ಕಳುಹಿಸುತ್ತಿದ್ದೆವು ಆದರೆ ಈಗ.