ಜೀವನವನ್ನು ಬದಲಾಯಿಸುವ ಪ್ರೆರಣಾತ್ಮಕ ವೀಡಿಯೋ!ಧೈರ್ಯ ಇದು ಒಬ್ಬ ಮನುಷ್ಯನನ್ನು ಮುಂದೆ ನಡೆಸುತ್ತದೆ. ಒಂದು ಕೆಲಸವನ್ನು ಮಾಡಬಹುದಾ ಇಲ್ಲವೇ ಎಂಬ ಆಳೋಚನೆಯಿಂದ ಮಾಡಬಹುದು ಎಂಬ ನಂಬಿಕೆಗೆ ಬದಲಾಯಿಸುತ್ತದೆ. ನಂಬಿಕೆಗಳ ಮಧ್ಯದಲ್ಲಿ ಯಾವುದೇ ಸಂದೇಹ ಬಂದರು ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸವನ್ನು ಬೆಳೆಸಿ ಆ ಸಂದೇಹವನ್ನು ಕೊನೆಗೊಳಿಸುತ್ತದೆ. ಯಶಸ್ಸಿಗೆ ವಯಸ್ಸಿಗೆ ಯಾವುದೇ ಸಂಬಂಧವಿಲ್ಲ ಆದರೆ ನೀವು ಎಷ್ಟು ಪ್ರಯತ್ನ ಮಾಡುತ್ತಿದ್ದೀಯಾ ಅಂತ ನಿಮ್ಮ ಯಶಸ್ಸು ನೋಡುತ್ತದೆ. ನೀವು ಮಾಡುವ ಕೆಲಸದಲ್ಲಿ ನಿಮಗೆ ಹೇಳಿಕೊಳ್ಳುವಷ್ಟು ಪ್ರೋತ್ಸಾಹ ಸಿಗದಿರಬಹುದು ಯಾರು ನಿಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳದಿರಬಹುದು ಆದರೆ ಅವುಗಳ ಬಗ್ಗೆ ಚಿಂತಿಸದೆ ನೀವು ನಿಮ್ಮ ಕೆಲಸವನ್ನು ಎಷ್ಟು ಆಸಕ್ತಿಯಿಂದ ಮಾಡುತ್ತಿದ್ದೀಯ ಎಂಬುದರ ಬಗ್ಗೆ ಹೆಚ್ಚು ಆಲೋಚಿಸಿ ಮುಂದೆ ಸಾಗಬೇಕು. ನಿನ್ನ ಆಲೋಚನೆ ತಪ್ಪಾಗಿಯು ಇರಬಹುದು ಸರಿ ಆಗಿಯೂ ಇರಬಹುದು ಆದರೆ ಆ ಆಲೋಚನೆ ನಿಮ್ಮದಾಗಿ ಇರುವುದರಿಂದ ಹೊಂದಾಣಿಕೆ ಮಾಡಿಕೊಳ್ಳಬೇಕು. ಯಾವ ಕೆಲಸವಾದರೂ ಮಾಡುವುದಕ್ಕು ಮುಂಚೆ ನಿಮ್ಮಲ್ಲಿ ನಿಮ್ಮ ಬಲ ಎಷ್ಟು? ಬಲಹಿನತೆ ಎಷ್ಟು ಎಂಬುದನ್ನು
ತಿಳಿದುಕೊಳ್ಳಬೇಕು. ನಂತರ ನೀವು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ನಿಮ್ಮ ಬಲ ಹೇಗೆ ಪ್ರಯೋಗವಾಗುತ್ತದೆ ಅಂತ ನೋಡಿ ನಿರ್ಧಾರ ತೆಗೆದುಕೊಳ್ಳಬೇಕು. ಪ್ರೇರಣೆ ಎಂಬುದು ಯಾವಾಗಲೂ ಹಾಗೆ ಇರಬೇಕು ಅಂದುಕೊಳ್ಳುತ್ತೇವೆ ಆದರೆ ಪ್ರೇರಣೆ ಎಂಬುದು ನಿಲ್ಲದೆ ಹೋಗುತ್ತಿರುವುದಕ್ಕೆ ಅಲ್ಲ ನಿಂತು ನಮ್ಮನ್ನು ನಾವು ತಳುತ್ತಾ ಮುಂದೆ ಸಾಗುವುದಕ್ಕೆ. ಭಯವನ್ನು ಎದುರಿಸಿ ಮುಂದೆ ಸಾಗಬೇಕು ಎಂದರೆ ನಿಮ್ಮನ್ನು ನೀವು ಬಲವಾಗಿ ನೋಡಬೇಕು. ನಿಮ್ಮ ಮೇಲೆ ನಿಮಗೆ ಅನುಮಾನ ಇರಬಾರದು. ನಾನು ಏನಾದರೂ ಮಾಡಬಲ್ಲೆ ಎಂಬ ಯೋಚನೆ ಯಾವಾಗಲೂ ಇರಬೇಕು. ನಿಮ್ಮ ಕನಸಿನಕಡೆ ನೀವು ಪ್ರಯಾಣ ಮಾಡುವುದಕ್ಕೆ ನಿಮ್ಮ ಸುತ್ತ ಇರುವವರು ನಿಮಗೆ ಸಹಾಯ ಮಾಡದಿರಬಹುದು. ಮೊದಲು ಕಷ್ಟ ಅನಿಸುತ್ತದೆ ಆದರೂ ನಿಮ್ಮ ಕೆಲಸವನ್ನು ನಿಲ್ಲಿಸಬೇಡಿ. ಹಲವಾರು ಜನ ಹಲವು ರೀತಿಯಲ್ಲಿ ಟೀಕೆ ಮಾಡುತ್ತಾರೆ ಆದರೂ ನೀವು ನಿಮ್ಮ ಕೆಲಸವನ್ನು ನಿಲ್ಲಿಸಬೇಡಿ. ಯಾಕೆಂದರೆ ಯಶಸ್ಸಿಗೆ ಕೊನೆಯೇ ಇಲ್ಲ. ನೀವು ನಿಂತರೆ ಅದು ನಿಂತು ಹೋಗುತ್ತದೆ. ಏಕೆಂದರೆ ಈ ಸಮಾಜ ನಿಮ್ಮನ್ನು ಮರೆತು ಬಿಡುತ್ತದೆ. ಯಾರ ಬಗ್ಗೆಯು ಚಿಂತಿಸದೆ ಶ್ರಮ ವಹಿಸಿ ಸರಿಯಾದ ದಾರಿಯಲ್ಲಿ ನಡೆದರೆ ಯಶಸ್ಸು ಖಚಿತ.
ಜೀವನದಲ್ಲಿ ಬರಿ ದುಃಖವೇ ತುಂಬೋಗಿದೆ,ಬದುಕೋದೆ ಬೇಡ ಅನ್ನೋರು ಈ ವಿಡಿಯೋ ಒಂದು ಸಲ ನೋಡಿ ಜೀವನದ ಹಾದಿ ಬದಲಿಸುವ ಸ್ಪೂರ್ತಿದಾಯಕ ಮಾತುಗಳು…

Interesting vishya
[irp]