ತಾಜ್ ಮಹಲ್ ನ ಆ 22 ಕೋಣೆಗಳ ಬಾಗಿಲನ್ನು ಯಾಕೆ ಇನ್ನೂ ತೆರೆದಿಲ್ಲ??ನಮಸ್ತೆ ಸ್ನೇಹಿತರೆ ತಾಜ್ ಮಹಲ್ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು ತಾಜ್ ಮಹಲನ್ನು ಪ್ರೀತಿಯ ಸಂಕೇತ ಎಂದು ಕರೆಯುತ್ತಾರೆ ಆದರೆ ಇದೇ ತಾಜ್ ಮಹಲ್ ಬಗ್ಗೆ ವಿವಾದವೊಂದು ಎದ್ದಿದೆ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲಿನಲ್ಲಿ ಬೀಗ ಹಾಕಿ ಮುಚ್ಚಿರುವ 22 ಕೋಣೆಗಳಿದೆ ಅನ್ನುವ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ. ಬಾಗಿಲು ಹಾಕಿ ಮುಚ್ಚಿರುವ ಕೋಣೆಗಳ ಬೀಗ ತೆರೆಯಬೇಕು ಆ ಕೋಣೆಗಳಲ್ಲಿ ಹಿಂದೂ ವಿಗ್ರಹ ಹಾಗೂ ಧರ್ಮಗ್ರಂಥಗಳನ್ನು ಬಚ್ಚಿಡಲಾಗಿದೆ ಎಂಬ ಪರಿಶೀಲನೆ ನಡೆಸಬೇಕು ಎಂದು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠಕ್ಕೆ ಅರ್ಜಿವೊಂದು ಸಲ್ಲಿಕೆಯಾಗಿದೆ. ಬೀಗ ತೆಗೆಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕು ಕೋಣೆಗಳನ್ನು ಪರಿಶೀಲನೆ ನಡೆಸಲು ಹಾಗೂ ಹಿಂದೂ ವಿಗ್ರಹ ಹಾಗೂ ಧರ್ಮಗ್ರಂಥಗಳ ಕುರುಹು ಹುಡುಕಲು ಸಮಿತಿಯೊಂದನ್ನು ರಚನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಅಯೋದ್ಯ ಜಿಲ್ಲಾ ಬಿಜೆಪಿ ಮಾಧ್ಯಮ ಉಸ್ತುವಾರಿ ರಜನೀಶ್ ಅವರು ಅರ್ಜಿ ಸಲ್ಲಿಸಿದ್ದಾರೆ.
ತಾಜ್ ಮಹಲಿನಲ್ಲಿ ಬೀಗ ಹಾಕಿರುವ 22 ಕೋಣೆಗಳಿವೆ ಅಲ್ಲಿಗೆ ಹೋಗಲು ಯಾರನ್ನೂ ಬಿಡುವುದಿಲ್ಲ ಬೀಗ ಹಾಕಿರುವ ಆ ಕೋಣೆಗಳಲ್ಲಿ ಹಿಂದೂ ವಿಗ್ರಹ ಹಾಗೂ ಧರ್ಮ ಗ್ರಂಥಗಳಿವೆ ಈ ಬಗ್ಗೆ ಪರಿಶೀಲನೆ ನಡೆಸಲು ಅರ್ಜಿ ಸಲ್ಲಿಸಿದ್ದೇವೆ. ಬೀಗ ತೆಗೆದು ಪರೀಕ್ಷೆ ಮಾಡಿ ಈ ವಿಚಾರ ನಿಜವೋ ಸುಳ್ಳೋ ಎಂದು ಪರಿಶೀಲನೆ ಮಾಡುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಅಂತ ರಜನೀಶ್ ಹೇಳಿದ್ದಾರೆ. ಅಲಹಾಬಾದ್ ಹೈಕೋರ್ಟ್ ಲಕ್ನೋ ಪೀಠಕ್ಕೆ ಸಲ್ಲಿಕೆ ಆಗಿರುವ ಅರ್ಜಿ ಈಗ ಬಾರಿ ಚರ್ಚೆಗೆ ಕಾರಣವಾಗಿದೆ ತಾಜ್ ಮಹಲ್ ಭಾರತದ ಅತಿ ಸುಂದರ ಕಟ್ಟಡ ಏಳನೇ ಶತಮಾನದಲ್ಲಿ ಮೊಘಲ್ ದೊರೆ ಶಹಜಾನ್ ನಿಂದ ನಿರ್ಮಿತವಾದ.
ಈ ಭವ್ಯ ಸ್ಮಾರಕ ದೇಶ ವಿದೇಶಗಳಿಂದ ಕೋಟ್ಯಾಂತರ ನೋಡುಗರನ್ನು ಸೆಳೆಯುತ್ತಿದೆ ಬೆಳದಿಂಗಳ ರಾತ್ರಿಯಲ್ಲಿ ಧವಳ ಕಾಂತಿಯಂತೆ ಮೆರೆದು ಪ್ರೇಮಿಗಳ ಎದೆಯಲ್ಲಿ ಸುಮುಧುರ ಕಾವ್ಯವಾಗಿ ನೋಡುಗರ ಕಣ್ಣಲ್ಲಿ ಸುಂದರ ದೃಶ್ಯ ಕಾವ್ಯವಾಗಿ ನಿಲ್ಲುವ ಈ ಅಮೃತಶಿಲೆಯ ಕಟ್ಟಡ ಅಂತರಾಷ್ಟ್ರೀಯ ಮಾನ್ಯತೆಯ ಮಟ್ಟದಲ್ಲೂ ಪುಳಕಗೊಂಡಿದೆ ತಾಜ್ ಮಹಲ್ ಹಿಂದಿನ ಕಾಲದಲ್ಲಿ ಶಿವನ ದೇವಾಲಯವಾಗಿತ್ತು ಅದನ್ನು ತೇಜೋಮಹಲ್ ಎಂದು ಸಹ ಕರೆಯುತ್ತಿದ್ದರು. 1989ರಲ್ಲಿ ಪಿ ಎನ್ ಓಕ್ ಅವರು ತಾಜ್ ಮಹಲ್ ಒಂದು ತೇಜೋಮಹಲ್ ಎಂದು ಪುಸ್ತಕವನ್ನು ಬರೆದಿದ್ದಾರೆ ಇದು ತೇಜೋಮಹಲ್ ಎಂಬುದಕ್ಕೆ ಅನೇಕ ಸಾಕ್ಷಿಗಳನ್ನು ಪುಸ್ತಕದಲ್ಲಿ ಬರೆದಿದ್ದಾರೆ.