ತೆಂಗಿನ ಎಣ್ಣೆಯ ತಯಾರಿಕೆ ಹೇಗಿರುತ್ತದೆ ಗೊತ್ತಾ?

ತೆಂಗಿನ ಎಣ್ಣೆಯನ್ನು ದಿನನಿತ್ಯ ಎಲ್ಲರೂ ಬಳಸುತ್ತಲೇ ಇರುತ್ತಾರೆ. ದಿನುಪಯೋಗಿ ವಸ್ತುವಾಗಿ ಪ್ರತಿದಿನವೂ ಮನೆಯಲ್ಲಿ ಬಳಕೆಗೆ ಬೇಕಾಗಿರುವ ಅವಶ್ಯಕತೆಯ ಒಂದು ವಸ್ತು ಇದು. ಜೀವಮಾನದಲ್ಲಿ ಒಮ್ಮೆ ಕೂಡ ತೆಂಗಿನ ಎಣ್ಣೆ ಬಳಸದೆ ಇರುವವರನ್ನು ನೀವು ನೋಡಲು ಸಾಧ್ಯವೇ ಇಲ್ಲ ಎಂದು ಹೇಳಬಹುದು. ಹೀಗೆ ತೆಂಗಿನ ಎಣ್ಣೆಯು ಕೂದಲಿನ ಆರೈಕೆಗೆ, ತ್ವಛೆಯ ಆರೋಗ್ಯಕ್ಕೆ ಹಾಗೂ ಆಹಾರ ಪದಾರ್ಥಗಳ ತಯಾರಿಕೆಗೆ ಅತಿ ಹೆಚ್ಚು ಬಳಸಲ್ಪಡುತ್ತದೆ. ತೆಂಗಿನ ಎಣ್ಣೆಯಲ್ಲಿರುವ ಮೆಡಿಸಿನ್ ಹಾಗೂ ಹೀಲಿಂಗ್ ಪ್ರಾಪರ್ಟಿ ಬಗ್ಗೆ ಇಡೀ ಪ್ರಪಂಚಕ್ಕೆ ಗೊತ್ತಿದೆ.ಈ ಕಾರಣಕ್ಕಾಗಿಯೇ ಮಾರ್ಕೆಟ್ನಲ್ಲಿ ತೆಂಗಿನಕಾಯಿಗೆ ಅಷ್ಟೊಂದು ಬೇಡಿಕೆ ಹಾಗೂ ಬೆಲೆ ಇದೆ ಎಂದೇ ಹೇಳಬಹುದು. ತೆಂಗಿನ ಮರದ ಪ್ರತಿಯೊಂದು ವಸ್ತು ಕೂಡ ವೇಸ್ಟ್ ಆಗದೆ ಉಪಯುಕ್ತವಾಗಿದೆ. ಹೀಗಾಗಿ ಈ ಕಾರಣಕ್ಕೆ ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಪೂಜಿಸುತ್ತಾರೆ. ಆದರೆ ತೆಂಗಿನಕಾಯಿಯಿಂದ ತಯಾರಿಸಿದ ತೆಂಗಿನ ಎಣ್ಣೆಯ ಬಗ್ಗೆ ಹೇಳುವುದಾದರೆ ಅದನ್ನು ಹೇಗೆ ತಯಾರಿಸುತ್ತಾರೆ ಎಂದು ಬಹು ಜನರಿಗೆ ಗೊತ್ತಿರುವುದಿಲ್ಲ.

ತೆಂಗಿನ ಎಣ್ಣೆಯನ್ನು ತಯಾರಿಸುವುದು ತುಂಬಾ ಸುಲಭ ಆದರೆ ತುಂಬಾ ಚಾಲೆಂಜಿಂಗ್ ವಿಷಯ ಎಂದರೆ ತೆಂಗಿನಕಾಯಿಗಳನ್ನು ಕಟಾವು ಮಾಡುವುದು ಏಕೆಂದರೆ ಈಗಿನ ಮರವು ಬಹಳ ಉದ್ದವಾಗಿರುತ್ತದೆ ಕೆಲಸಗಾರರು ಮಾತ್ರ ಹತ್ತಿ ಕೀಳಲು ಸಾಧ್ಯ. ಮಳೆಗಳಿಗೆ ಮರಗಳು ಬಾಗುವುದರಿಂದ ಇದನ್ನು ಹತ್ತುವುದು ತುಂಬಾ ಕಷ್ಟಕರವಾಗಿರುತ್ತದೆ. ಇಷ್ಟೆಲ್ಲ ಕಷ್ಟಪಟ್ಟು ಮರಗಳಿಂದ ತೆಂಗಿನಕಾಯಿಯನ್ನು ಕಟಾವು ಮಾಡಿದ ನಂತರ ಇದರ ಒಂದು ಕಡೆ ಶೇಖರಣೆ ಮಾಡಲಾಗುತ್ತದೆ. ಭಾರತದಲ್ಲಿ ಅಧಿಕವಾಗಿ ತೆಂಗಿನ ಮರಗಳನ್ನು ಕರ್ನಾಟಕ ಕೇರಳ ಅಸ್ಸಾಂ ಕೇರಳ ರಾಜ್ಯದಲ್ಲಿ ಅಧಿಕವಾಗಿ ಬೆಳೆಯಲಾಗುತ್ತದೆ. ತೆಂಗಿನಕಾಯಿಗಳನ್ನು ಮರದಿಂದ ಕಟಾವು ಮಾಡಿ ಶೇಖರಣೆ ಮಾಡಿದ ಜಾಗದಿಂದ ತೆಂಗಿನ ಎಣ್ಣೆಯ ಫ್ಯಾಕ್ಟರಿಗೆ ಇವುಗಳನ್ನು ಸಾಗಿಸಲಾಗುತ್ತದೆ. ಫ್ಯಾಕ್ಟರಿಯಲ್ಲಿ ಇವುಗಳನ್ನು ಎಂಟರಿಂದ ಒಂಬತ್ತು ದಿನಗಳವರೆಗೆ ಯುವಿ ಸ್ಟೋರ್ ಮಾಡಿ ಇಡಲಾಗುತ್ತದೆ. ಈ ರೀತಿ ಸ್ಟೋರ್ ಮಾಡುವುದರಿಂದ ತೆಂಗಿನಕಾಯಿ ಚೆನ್ನಾಗಿ ಒಣಗುತ್ತದೆ.

ಒಣಗಿದ ನಂತರ ಈ ಕೋಕೋನಟ್ ಬ್ರೌನ್ ಕಲರಿಗೆ ಬರುತ್ತದೆ. ನಂತರ ಕೆಲಸಗಾರರು ಅವರ ಕೈಯಿಂದ ತೆಂಗಿನಕಾಯಿಯ ಮೇಲ್ಲಿದ್ದ ನಾರುಗಳನ್ನು ತೆಗೆಯುತ್ತಾರೆ. ತೆಂಗಿನಕಾಯಿಯ ಎಣ್ಣೆ ಮಾಡುವ ಕಾರ್ಯದಲ್ಲಿ ಬರುವ ಯಾವ ತ್ಯಾಜ್ಯವೂ ಕೂಡ ವೇಸ್ಟಾಗುವುದಿಲ್ಲ. ಅವುಗಳನ್ನು ಮುಂದೆ ಯಾವುದಕ್ಕೆ ಬಳಸಲಾಗುತ್ತದೆ ಮತ್ತು ತೆಂಗಿನ ಎಣ್ಣೆಯ ತಯಾರಿಕೆಯ ಮುಂದಿನ ಕ್ರಮಗಳಿಗೆ ಏನೇನಿರುತ್ತದೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ.

By admin

Leave a Reply

Your email address will not be published. Required fields are marked *