ಡಯೆಟ್ ಇಲ್ಲದೆ ವ್ಯಾಯಾಮ ಇಲ್ಲದೆ ಒಂದೇ ತಿಂಗಳಿನಲ್ಲಿ 5-6 ಕೆಜಿ ತೂಕ ಇಳಿಸುವ ಸುಲಭ ವಿಧಾನ..! » Karnataka's Best News Portal

ಡಯೆಟ್ ಇಲ್ಲದೆ ವ್ಯಾಯಾಮ ಇಲ್ಲದೆ ಒಂದೇ ತಿಂಗಳಿನಲ್ಲಿ 5-6 ಕೆಜಿ ತೂಕ ಇಳಿಸುವ ಸುಲಭ ವಿಧಾನ..!

ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಡಯಟ್ ವರ್ಕೌಟ್ ಇಲ್ಲದೆ ಆರೋಗ್ಯವಾಗಿ ಸುಲಭವಾಗಿ ತೂಕ ಇಳಿಸಿ.ದೇಹದ ತೂಕ ಇಳಿಸಲು ಟಿಪ್ಸ್: ಬೆಳಗ್ಗೆ ಎದ್ದ ಕೂಡಲೆ 3 – 4 ಲೋಟ ಉಗುರು ಬೆಚ್ಚಗಿನ ನೀರು ಕುಡಿಯುವುದು. ಇದನ್ನು ಜಪಾನಿಸ್ ವಾಟರ್ ತೆರಪಿ ಎಂತಲೂ ಕರೆಯುತ್ತಾರೆ. ನೀರಿಗೆ ಸ್ವಲ್ಪ ನಿಂಬೆರಸವನ್ನು ಹಾಕಿಕೊಂಡರೆ ಅಥವಾ ಅಗಸೆ ಬೀಜದ ಪುಡಿ ಹಾಕಿಕೊಳ್ಳುವುದು ತುಂಬಾ ಒಳ್ಳೆಯದು. ಅಗಸೆ ಬೀಜದ ಪುಡಿಯನ್ನು ಮಾಡಿಕೊಳ್ಳುವ ವಿಧಾನ : ಅಗಸೆ ಬೀಜವನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿಮಾಡಿ ಡಬ್ಬಿಯಲ್ಲಿ ತುಂಬಿ ಇಡಬೇಕು. ಬೆಳಿಗ್ಗೆ ಎದ್ದು ನೀರು ಕುಡಿಯುವಾಗ ಮೊದಲನೇ ಒಂದು ಲೋಟ ನೀರಿಗೆ ಒಂದು ಚಮಚ ಅಗಸೆ ಬೀಜದ ಪುಡಿಯನ್ನು ಅಥವಾ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿ ಕುಡಿಯಿರಿ. ಅಗಸೆ ಬೀಜವು ತೂಕ ಬಿಡಿಸುವುದಕ್ಕೆ ಹಾಗೂ ಬೇಡದ ಕೊಬ್ಬನ್ನು ಕರಗಿಸುವುದಕ್ಕೆ ತುಂಬಾ ಪ್ರಯೋಜನಕಾರಿ. ಹೀಗೆ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿದರೆ ನಮ್ಮ ದೇಹದ ಒಳಗಡೆ ಇರುವ ಎಲ್ಲಾ ಕೆಟ್ಟ ಕೊಬ್ಬು ಎಲ್ಲವನ್ನು ಕರಗಿಸಿ ಹೊರಹಾಕುವುದಕ್ಕೆ ತುಂಬಾ ಉಪಯೋಗವಾಗುತ್ತದೆ. ನೀರು ಕುಡಿದ ಮುಕ್ಕಾಲು ಗಂಟೆಯವರೆಗೂ ತಿಂಡಿ ತಿನ್ನಬಾರದು. ನಂತರ ತುಂಬಾ ಕಡಿಮೆ ತಿಂಡಿಯನ್ನು ತಿನ್ನಬೇಕು. ಎಣ್ಣೆಯಲ್ಲಿ ಕರಿದ ತಿಂಡಿಗಳು ಅನ್ನದಿಂದ ಮಾಡಿದ ತಿಂಡಿಗಳು ಇವುಗಳನ್ನು ತಿನ್ನಬಾರದು ಇದರ

ಬದಲಾಗಿ ಜೋಳದ ರೊಟ್ಟಿ ರವೆ ಉಪ್ಪಿಟ್ಟು ದೋಸೆ ಇವುಗಳನ್ನು ತಿಂದರೆ ಒಳ್ಳೆಯದು ಇದರಿಂದ ಕೊಬ್ಬು ಉತ್ಪತ್ತಿಯಾಗುವುದಿಲ್ಲ. ತಿಂಡಿ ತಿಂದ ನಂತರ ಒಂದು ಗಂಟೆಯವರೆಗೂ ನೀರು ಕುಡಿಯಬಾರದು. ಒಂದು ಗಂಟೆ ಆದ ನಂತರ ನೀರು ಕುಡಿಯಬೇಕು ಕುಡಿಯುವಾಗ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಒಂದೇ ಬಾರಿ 4 ಲೋಟ ನೀರನ್ನು ಕುಡಿಯುವುದು ಕಷ್ಟಕರವಾಗಬಹುದು.
ಆದ್ದರಿಂದ ಎರಡು ಮೂರು ದಿನಗಳವರೆಗೆ ಎರಡು ಲೋಟ ನೀರನ್ನು ಕುಡಿದು ನಂತರ ದಿನಗಳಲ್ಲಿ ಲೋಟ ನೀರನ್ನು ಕುಡಿಯುವುದು. ಮಧ್ಯಾಹ್ನ ಸಾಮಾನ್ಯವಾದ ಊಟಮಾಡಿ ಆದರೆ ಅನ್ನದ ಪದಾರ್ಥವನ್ನು ಕಡಿಮೆ ತಿನ್ನಬೇಕು. ಇದರ ಬದಲಾಗಿ ರಾಗಿಮುದ್ದೆ ಚಪಾತಿ ಜೋಳದ ರೊಟ್ಟಿ ಈ ತರದ ತಿಂಡಿಗಳನ್ನು ತಿನ್ನಬಹುದು. ಅನ್ನದ ಪದಾರ್ಥದಲ್ಲಿ ಕಾರ್ಬೋಹೈಡ್ರೇಟ್ ಜಾಸ್ತಿ ಇರುವುದರಿಂದ ಕೊಬ್ಬನ್ನು ಹೆಚ್ಚಿಸುತ್ತದೆ. ಅದಾದನಂತರ ರಾತ್ರಿ ಊಟಕ್ಕೆ ಕಡಿಮೆಯಾಗಿ ಏನಾದರೂ ತಿನ್ನಬಹುದು ಆದರೂ ಆದಷ್ಟು ತರಕಾರಿ ಹಣ್ಣುಗಳನ್ನು ಸೇವಿಸಿದರೆ ಉತ್ತಮ. ರಾತ್ರಿ 8:00 ಗಂಟೆ ಒಳಗಡೆ ತಿಂದರೆ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

WhatsApp Group Join Now
Telegram Group Join Now


crossorigin="anonymous">