ನಿಮ್ಮ ಕಣ್ಣಿನ ದೃಷ್ಟಿ ಎಷ್ಟು ಬೆಳೆಯುತ್ತೆ ಎಂದರೆ ಇನ್ನು ಮುಂದೆ ಕನ್ನಡಕವೇ ಬೇಡ ಅಂತೀರಾ!ಪ್ರತಿ ಮೂವರಲ್ಲಿ ಒಬ್ಬರು ಕನ್ನಡಕವನ್ನು ಹಾಕುವವರನ್ನು‌ನೋಡುತ್ತ ಇದ್ದೇವೆ. ಮುಖ್ಯವಾಗಿ ಕನ್ನಡಕ ಹಾಕುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಸರಿಯಾದ ಪೋಷಕ ಆಹಾರವನ್ನು ಪಡೆದು ಕೊಂಡಿಲ್ಲದಿದ್ದರೆ ಈ ಕಣ್ಣಿನ ದೃಷ್ಟಿ ಲೋಪ ಬರುತ್ತದೆ. ನಮ್ಮ ಹಿಂದಿನ ಕಾಲದ ಹಿರಿಯರು ಕನ್ನಡಕವನ್ನೆ ಉಪಯೋಗಿಸುತ್ತಿರಲಿಲ್ಲ. ಏಕೆಂದರೆ ಅವರು ಸರಿಯಾದ ಆಹಾರವನ್ನು ತೆಗೆದು ಕೊಳ್ಳುತ್ತಿದ್ದರು. ಆದ್ದರಿಂದ ಅವರು ಯಾವಾಗಲೂ ಆರೋಗ್ಯವಾಗಿ ಇರುತ್ತಿದ್ದರು. ಆದರೆ ಇತ್ತೀಚೆಗೆ ನಾವು ವಿಟಮಿನ್ ಗಳೇ ಇಲ್ಲದಂತಹ ಆಹಾರವನ್ನು ಸೇವಿಸುತ್ತಿದ್ದು ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಮುಖ್ಯವಾಗಿ ಕಣ್ಣಿನ ದೃಷ್ಟಿ ಲೋಪವು ವಿಟಮಿನ್ ಕೊರತೆಯಿಂದ ಬರುತ್ತದೆ. ಇದರಿಂದ ಬಹಳಷ್ಟು ಜನರು ಲೇಝರ್ ಆಪರೇಷನ್ ಮಾಡಿಸಿಕೊಂಡು ಕಣ್ಣಿನ ದೃಷ್ಟಿಯನ್ನು ಸರಿ ಮಾಡಿಕೊಳ್ಳುತ್ತಾರೆ. ಆದರೆ ಈ ಆಪರೇಷನ್ ಗಳಿಂದ ತುಂಬಾ ಸೈಡ್ ಎಫೆಕ್ಟ್ಸ್ ಆಗುತ್ತದೆ. ಆದ್ದರಿಂದ ಮನೆಮದ್ದು ಬಳಸಿ ಹೆಗೆ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಇಲ್ಲಿ ತಿಳಿಯೋಣ.

ಈ ಮನೆಮದ್ದಿಗೆ ಮುಖ್ಯವಾಗಿ ಬೇಕಾಗಿರುವುದು ಬಾದಾಮಿ. ಬಾದಾಮಿಯಲ್ಲಿ ಮುಖ್ಯವಾಗಿ ಒಮೆಗಾ ಫ್ಯಾಟಿಆ್ಯಸಿಡ್ , ವಿಟಮಿನ್ ಇ ಜೊತೆಗೆ ಆ್ಯಂಟಿ ಆ್ಯಕ್ಸಿಡೆಂಟ್ಸ್ ಗಳು ತುಂಬಾ ಹೆಚ್ಚಾಗಿ ಇರುತ್ತವೆ. ಆದ್ದರಿಂದ ಇವು ನಮ್ಮ ಕಣ್ಣಿನ ದೃಷ್ಟಿ ದೋಷವನ್ನು ಹೋಗಲಾಡಿಸುವುದಕ್ಕೆ ಅದ್ಬುತವಾದ ಒಂದ ಪರಿಷ್ಕರ. 3-4 ಬಾದಾಮಿಗಳನ್ನು ಮೂರು ಗಂಟೆಗಳ ಕಾಲ ಅಥವಾ ಇಡೀ ರಾತ್ರಿ ನೀರಿನಲ್ಲಿ ನೆನೆಸಿಡಿ. ನಂತರ ಬಾದಾಮಿ ಮೇಲಿರುವ ಸಿಪ್ಪೆಯನ್ನು ತೆಗೆಯಬೇಕು. ಇದರ ಜೊತೆಗೆ 3-4 ಕಾಳು ಮೆಣಸು, ಸ್ವಲ್ಪ ಕಲ್ಲುಸಕ್ಕರೆಯನ್ನು ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಕಾಳು ಮೆಣಸಿನಲ್ಲಿ ಆ್ಯಂಟಿ ಆ್ಯಕ್ಸಿಡೆಂಟ್ ಗುಣಗಳು ತುಂಬಾ ಹೆಚ್ಚಾಗಿ ಇರುತ್ತವೆ. ಆದ್ದರಿಂದ ಇದು ದೇಹಕ್ಕೂ ಕಣ್ಣಿಗೂ ತುಂಬಾ ಒಳ್ಳೆಯದು.

ಕಲ್ಲು ಸಕ್ಕರೆಯು ನಮ್ಮ ಕಣ್ಣುಗಳಿಗೆ ತುಂಬಾ ತಂಪು ಹಾಗೆಯೆ ಕಣ್ಣಿನ ದೃಷ್ಟಿ ಸಮಸ್ಯೆಯನ್ನು ಬಗೆಹರಿಸಲು ಬಹಳ ಉಪಯುಕ್ತ. ಒಂದು ಲೋಟ ಹಾಲನ್ನು ಕುದಿಸಿ ಅದಕ್ಕೆ ಈ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಆ ಹಾಲನ್ನು ಸೋಸದೆ ಹುಗುರು ಬೆಚ್ಚಗೆ ಮಾಡಿಕೊಂಡು ಪ್ರತಿ ರಾತ್ರಿ ಕುಡಿಯಬೇಕು. ಈ ರೀತಿ ಹಾಲನ್ನು ಕುಡಿಯುವುದರಿಂದ ಕಣ್ಣಿನ ದೃಷ್ಟಿ ಸಮಸ್ಯೆಯಿಂದ ದೂರವಿರಬಹುದು. ಅಲ್ಲದೆ ಹೆಚ್ಚು ತರಕಾರಿ ಸೊಪ್ಪುಗಳನ್ನು, ವಿಟಮಿನ್ ಸಿ ಇರುವ ಪದಾರ್ಥಗಳನ್ನು ಹಾಗೂ ನುಗ್ಗೆಸೊಪ್ಪನ್ನು ದಿನನಿತ್ಯದ ಆಹಾರದಲ್ಲಿ ಸೇವಿಸಿದರೆ ಕಣ್ಣಿನ ಸಮಸ್ಯೆಯಿಂದ ದೂರವಿರಬಹುದು.

By admin

Leave a Reply

Your email address will not be published. Required fields are marked *