ಮಾತೃಭಾಷೆ ಬೇರೆಯಾದರು ಅಪ್ಪಟ ಕನ್ನಡಿಗರಾಗಿ ಫೇಮಸ್ ಆಗಿರುವ ಕಲಾವಿದರು !ನಟನೆಗೆ ಭಾಷೆಯ ಬ್ಯಾರಿಯರ್ ಇರುವುದಿಲ್ಲ. ಒಬ್ಬ ಕಲಾವಿದ ಚೆನ್ನಾಗಿ ನಟನೆ ಮಾಡುತ್ತಾನೆ ಅಂದರೆ ಅವನು ಯಾವ ಭಾಷೆಯಲ್ಲಾದರೂ ನಟಿಸಿ ಫೇಮಸ್ ಆಗಬಹುದು. ಆದರೆ ಬೇರೆ ಭಾಷೆಯಿಂದ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದು ಅಪ್ಪಟ ಕನ್ನಡಿಗರ ಹಾಗೆ ಇಲ್ಲೆ ನೆಲೆಯೂರಿ ಮಾತೃಭಾಷೆ ಬೇರೆ ಆದರೂ ಕನ್ನಡ ಸಿನಿಮಾ ರಂಗದಲ್ಲಿ ಫೇಮಸ್ ಆದ ಸ್ಯಾಂಡಲ್ವುಡ್ ಕಲಾವಿದರು ಇದ್ದಾರೆ. ಅವರುಗಳ ಬಗ್ಗೆ ಇಲ್ಲಿ ತಿಳಿಯೋಣ. ರಮೆಶ್ ಅರವಿಂದ: ವರ್ಸಿಟೈಲ್ ಆ್ಯಕ್ಟರ್ ರಮೇಶ್ ಅರವಿಂದ್ವ ಅವರು ತಮಿಳುನಾಡಿನ ಕುಂಭಕೋಣಂನಲ್ಲಿ ತಮಿಳು ಮಾತನಾಡುವ ಐಯ್ಯಂಗಾರ್ ಕುಟುಂಬದಲ್ಲಿ ಜನಿಸಿದ್ದು, ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮಗಳಿಗೆ,‌ ಸಿನಿಮಾಗಳ ಯಶಸ್ಸಿನ ಕಾರ್ಯಕ್ರಮಗಳಿಗೆ ಆ್ಯಂಕರಿಂಗ್ ಆಗಿ ಕೆಲಸ ಮಾಡುತ್ತಿದ್ದರು. ಇವರನ್ನು ಕೆ. ಬಾಲಚಂದರ್ ಅವರು ಅವರ ನಿರ್ದೇಶನದ ಸುಮದರ ಸ್ವಪ್ನಗಳು ಎಂಬ ಸಿನಿಮಾದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಿದ್ದು, ಅಲ್ಲಿಂದ ಇಲ್ಲಿಯವರೆಗೆ ರಮೇಶ್ ಅವರು 140 ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಈಗಲೂ ಕನ್ನಡದಲ್ಲಿ ಆ್ಯಂಕರಿಂಗ್ ಮಾಡುತ್ತಿರುವ ರಮೇಶ್ ಅವರು ಅವರ ಮಾತೃಭಾಷೆ ತಮಿಳು ಆಗಿದ್ದರು ಕನ್ನಡಿಗರಲ್ಲಿ ಒಬ್ಬರಾಗಿದ್ದಾರೆ.

ಪಿ. ರವಿ ಶಂಕರ್: ಚೆನ್ನೈ ನಲ್ಲಿ ಹುಟ್ಟಿ ಬೆಳೆದ ತೆಲುಗು ಕುಟುಂಬಕ್ಕೆ ಸೇರಿದ ಇವರು ಡಬ್ಬಿಂಗ್ ಆರ್ಟಿಸ್ಟ್ ಆಗಿ 4000 ಕ್ಕು ಹೆಚ್ಚು ಸಿನಿಮಾಗಳಿಗೆ ಡಬ್ಬಿಂಗ್ ಮಾಡಿದ್ದು ಆ್ಯಕ್ಟರ್ ಆಗಬೇಕೆಂಬ ಕನಸ್ಸನ್ನು ಹೊತ್ತಿದ್ದ ರವಿಶಂಕರ್ ಅವರಿಗೆ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಮಾತ್ರ ಅವಕಾಶ ಸಿಗುತ್ತಿದ್ದು ಇವರ ಕನಸ್ಸನ್ನು ನೆನೆಸು ಮಾಡಿದ್ದು ಕೆಂಪೇಗೌಡ ಸಿನಿಮಾದ ಆರ್ಮುಗಂ ಪಾತ್ರ. ಅಂದು ಕೆಂಪೇಗೌಡ ಅಇನಿಮಾದ ಮೂಲಕ ಆ್ಯಕ್ಟಿಂಗ್ ಕೆರಿಯರ್ ಪ್ರಾರಂಭಿಸಿದ ರವಿಶಂಕರ್ ಅವರು ಇಂದು ಕನ್ನಡದ ಫೇಮಸ್ ಆ್ಯಕ್ಟರ್ ಆಗಿದ್ದು, ಅವರ ಮಾತೃಭಾಷೆ ತೆಲುಗು ಆಗಿದ್ದರು ಅವರಿಗೆ ಜೀವನ ಕೊಟ್ಟ ಭಾಷೆ ಕನ್ನಡ ಎಂಬಂತೆ ಕನ್ನಡಿಗರಾಗಿ ಕನ್ನಡಿಗರ ಪ್ರೀತಿ ಗಳಿಸಿದ್ದಾರೆ.

ವಿ. ರವಿಚಂದ್ರನ್: ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರು ತಮಿಳು ‌ಮಾತನಾಡುವ ಕುಟುಂಬಕ್ಕೆ ಸೇರಿದವರಾಗಿದ್ದು, ಇವರು ಫೇಮಸ್ ನಿರ್ಮಾಪಕರಾಗಿದ್ದ ಮೂಲತಃ ತಮಿಳುನಾಡಿನ ವೀರಸ್ವಾಮಿ ಅವರ ಮಗ. ರವಿಚಂದ್ರನ್ ಅವರು ವರ್ಸೈಟಲ್ ಆ್ಯಕ್ಟರ್ ಆಗಿ ಎಲ್ಲದರಲ್ಲೂ ಸೈ ಎನ್ನಿಸಿಕೊಂಡಿದ್ದು ಭಾರತೀಯ ಚಿತ್ರ ರಂಗ ಕನ್ನಡ ಚಿತ್ರರಂಗದತ್ತ ತಿರುಗಿ ನೊಡುವಂತೆ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *