ರಾಕಿಂಗ್ ಸ್ಟಾರ್ ಯಶ್ ಅವರ ಒಂದನೆ ವಯಸ್ಸಿನಿಂದ 34 ವರ್ಷದವರೆಗೂ ನೀವು ನೋಡಿರದ ಅಪರೂಪದ ಚಿತ್ರಗಳು..ಹೇಗಿದ್ರು ನೋಡಿ ಬಾಲ್ಯದಲ್ಲಿ ಯಶ್. - Karnataka's Best News Portal

ರಾಕಿಂಗ್ ಸ್ಟಾರ್ ಯಶ್ ಅವರ ಒಂದನೆ ವಯಸ್ಸಿನಿಂದ 34 ವರ್ಷದವರೆಗೂ ನೀವು ನೋಡಿರದ ಅಪರೂಪದ ಚಿತ್ರಗಳು..ಹೇಗಿದ್ರು ನೋಡಿ ಬಾಲ್ಯದಲ್ಲಿ ಯಶ್.

ಯಶ್ ಜೀವನ ಚರಿತ್ರೆ ಹೇಗಿದೆ ನೋಡಿ ಚಿಕ್ಕವಯಸ್ಸಿನಿಂದ ದೊಡ್ಡವರಾಗಿ ಬೆಳೆಯುವ ತನಕ ಅವರು ಯಾವ ರೀತಿ ನೆಡೆದು ಬಂದಿದ್ದಾರೆ ಅಂತ.ಯಶ್ ಇವರು ನಮ್ಮ ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಅಮೂಲ್ಯವಾದ ವ್ಯಕ್ತಿ ಅಂತ ಹೇಳಿದರೆ ತಪ್ಪಾಗಲಾರದು ಏಕೆಂದರೆ ಇಡೀ ಕನ್ನಡ ಚಿತ್ರರಂಗವನ್ನು ಇಂಟರ್ನ್ಯಾಷನಲ್ ಲೆವೆಲ್ ಗೆ ತೆಗೆದುಕೊಂಡು ಹೋದಂತಹ ನಟ ಇವರು. ಇಂದು ಕನ್ನಡ ಚಲನಚಿತ್ರರಂಗದ ಬಗ್ಗೆ ಇಡೀ ಪ್ರಪಂಚದಾದ್ಯಂತ ಮಾತನಾಡುತ್ತಿದ್ದಾರೆ ಅಂದರೆ ಅದಕ್ಕೆ ಮುಖ್ಯ ಕಾರಣ ಅವರು ನಟಿಸಿದಂತಹ ಕೆಜಿಎಫ್ ಸಿನಿಮಾದಿಂದಲೇ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಒಂದು ಕಾಲದಲ್ಲಿ ಕನ್ನಡ ಸಿನಿಮಾ ಅಥವಾ ಕನ್ನಡ ಇಂಡಸ್ಟ್ರಿ ಎಂದರೆ ಬಹಳ ಕೀಳರಿಮೆಯಿಂದ ನೋಡುತ್ತಿದ್ದಂತಹ ಜನರಿಗೆ ಕನ್ನಡ ಸಿನಿಮಾ ಅಂದರೆ ಏನು ಅದರ ಗತ್ತು ಅಂದರೆ ಏನು ಇಲ್ಲಿ ಇರುವಂತಹ ನಟರಲ್ಲಿ ಎಂತಹ ಪ್ರತಿಭೆ ಎಂಬುದು ಅಡಗಿದೆ ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿ ಕೊಟ್ಟಂತಹ ವ್ಯಕ್ತಿಯೆಂದರೆ ಅದು ಯಶ್.ಇನ್ನು ಯಶ್ ಹುಟ್ಟುತ್ತ ಶ್ರೀಮಂತ ಏನ್ ಅಲ್ಲ ಇವರು ಕೇವಲ ಒಬ್ಬ ಬಸ್ ಡ್ರೈವರ್ ಮಗ ಆಗಿದ್ದರೂ ಕೂಡ ಇಂದು ಇಂಟರ್ನ್ಯಾಷನಲ್ ಲೆವೆಲ್ ಗೆ ಬೆಳಗಿದ್ದಾರೆ ಅಂದರೆ ಅವರ ಪರಿಶ್ರಮವನ್ನು ನಾವು ಮೆಚ್ಚಲೇಬೇಕು. ಚಿಕ್ಕವಯಸ್ಸಿನಿಂದಲೂ ಕೂಡ ನಟನೆಯಲ್ಲಿ ನಟನೆಯಲ್ಲಿ ತುಂಬಾನೇ ಆಸಕ್ತಿ ವಹಿಸಿದ್ದರು ಆದಕಾರಣ

ಶಾಲೆಯಲ್ಲಿ ಮಾಡುವಂತಹ ಪ್ರತಿಯೊಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗುತ್ತಿದ್ದರು.ಹಾಡು ಹೇಳುವುದು ಅಥವಾ ಏಕಪಾತ್ರಾಭಿನಯ ಮಾಡುವುದು ನಾಟಕಗಳನ್ನು ಮಾಡುವುದು ಡಾನ್ಸ್ ಗಳನ್ನು ಮಾಡುವುದು ಹೀಗೆ ಸಾಂಸ್ಕೃತಿಕ ಕೊಡುಗೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ ಅವರು ಹಲವಾರು ನಾಟಕಗಳಲ್ಲಿ ಮತ್ತು ಧಾರಾವಾಹಿಗಳಲ್ಲಿಯೂ ಕೂಡ ನಟನೆ ಮಾಡಿದ್ದಾರೆ ಮೊಗ್ಗಿನ ಮನಸು ಎಂಬ ಸಿನಿಮಾದಲ್ಲಿ ನಾಯಕನಟನಾಗಿ ನಟಿಸುವುದರ ಮೂಲಕ ಮೊಟ್ಟಮೊದಲ ಬಾರಿಗೆ ಕನ್ನಡ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು‌. ಈ ಸಿನಿಮಾದಿಂದ ಅವರ ಅದೃಷ್ಟ ಖುಲಾಯಿಸಿತು ಅಂತನೇ ಹೇಳಬಹುದು‌ ಒಂದು ಹಂತದವರೆಗೂ ಕೂಡ ಯಶ್ ಅವರು ತುಂಬಾನೇ ಕಷ್ಟಪಟ್ಟು ಜೀವನವನ್ನು ನಡೆಸಿದರು.ಆದರೆ ಕೆಜಿಎಫ್ ಸಿನಿಮಾ ದಲ್ಲಿ ಇವರು ನಟನೆ ಮಾಡಿದ ನಂತರ ಇವರ ಜೀವನ ಸಂಪೂರ್ಣ ಬದಲಾಯಿತು ಅಂತ ಹೇಳಿದರೂ ಕೂಡ ತಪ್ಪಾಗಲಾರದು ಯಶ್ ಬಾಲ್ಯದಲ್ಲಿ ಹೇಗಿದ್ದರು ಹೇಗೆ ಜೀವನವನ್ನು ನಡೆಸುತ್ತಿದ್ದಾರೆ ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ.

WhatsApp Group Join Now
Telegram Group Join Now
[irp]


crossorigin="anonymous">