ಇವರು ಭವಿಷ್ಯ ನುಡಿದರೆ ಸಾಕ್ಷಾತ್ ಶಿವನೇ ನುಡಿದಂತೆ!ದೇಶದ ಯಾವುದೇ ಶಿವನ ದೇವಸ್ಥಾನವನ್ನು ಅನೇಕರು ನೋಡಿರಬಹುದು. ದ್ವಾದಶ ಜ್ಯೋತಿರ್ಲಿಂಗಗಳನ್ನು ಅನೇಕರು ದರ್ಶನ ಮಾಡಿರಬಹುದು ಆ ಎಲ್ಲಾ ಲಿಂಗಗಳಲ್ಲಿ ಅಮರನಾಥ ವನ್ನು ಹೊರತು ಪಡಿಸಿ ಉಳಿದ ಎಲ್ಲ ಲಿಂಗಗಳು ಕಪ್ಪು ಬಣ್ಣದ್ದಾಗಿವೆ. ಆದರೆ ಕೆಂಪು ಬಣ್ಣದ ಲಿಂಗವನ್ನು ಎಲ್ಲಾದರೂ ನೋಡಿದ್ದೀರಾ. ಕೆಂಪು ಬಣ್ಣದ ಶಿವಲಿಂಗ ಒಂದು ಬೆಂಗಳೂರಿನ ಸಮೀಪದ ಒಂದು ಊರಿನಲ್ಲಿದೆ. ಬೆಂಗಳೂರಿನ ಬಿಡದಿ ಸಮೀಪದ ಜಡೇನಹಳ್ಳಿ ಎಂಬಲ್ಲಿ ಕೆಂಪು ಬಣ್ಣದ ಶಿವಲಿಂಗ ಇದೆ. ಇದು ಅತ್ಯಂತ ಪ್ರಭಾವವುಳ್ಳ ಲಿಂಗ. ಈ ಈಶ್ವರ ಕೇಳಿದ್ದನ್ನು ಕೊಡುತ್ತಾನೆ.ನಿಜವಾದ ಅರ್ಥದಲ್ಲಿ ಈ ಪರಮೇಶ್ವರ ಭಕ್ತ ಪರಾದಿನ ಅಂತ ಹೇಳುತ್ತಾರೆ. ಈ ದೇವಾಲಯವು ಬಿಡದಿಯಲ್ಲಿ ಇರುವ ವಂಡರ್ ಲಾ ದಿಂದ ಕೇವಲ ಒಂದು ಕಿಮೀ ದೂರದಲ್ಲಿದೆ.ಇಲ್ಲಿನ ಶಿವನ ಹೆಸರು ವರದ ರಾಜೇಶ್ವರ ಸ್ವಾಮಿ. ಶಿವನಿಗೆ ವರದ ರಾಮೇಶ್ವರ ಸ್ವಾಮಿ ಅಂತ ಕರೆಯುತ್ತಾರಾ, ಏಕೆ ಕರೆಯುತ್ತಾರೆ, ಈ ವರದ ರಾಜೇಶ್ವರ ಸ್ವಾಮಿ ಮೊದಲು ಎಲ್ಲಿದ್ದ ಇಲ್ಲಿಗೆ ಏಕರ ಬಂದ ಈ ಎಲ್ಲದರ ಮಾಹಿತಿಯನ್ನು ಇಲ್ಲಿ ತಿಳಿಸುತ್ತೇವೆ. ಈ ದೇವಾಲಯ ಬಗ್ಗೆ ಅಲ್ಲಿನ ಧರ್ಮದರ್ಶಿ ನಾರಾಯಣ ರೆಡ್ಡಿ ಅವರನ್ನು ಕೇಳಲಾಯಿತು. ಅದಕ್ಕೆ ಅವರು ಕೊಟ್ಟ ಉತ್ತರ ಆಶ್ಚರ್ಯಕರವಾಗಿದೆ.
ಇದೊಂದು ವಿಶೇಷವಾದ ಶಿವನ ಕ್ಷೇತ್ರ.ಶಿವನು ಇಲ್ಲಿ ಪ್ರತಿಷ್ಠಾನೆ ಆಗಿರುವುದೇ ಆಶ್ಚರ್ಯ ಮಯ. ಈ ಜಾಗದಲ್ಲಿ ಸರ್ಪ ಸಂಚಾರವಾಗುತ್ತಿತ್ತು. ಇದನ್ನು ತಾಯಿ ಕಬ್ಬಾಳಮ್ಮನ ಪೂಜೆಯ ಮೂಲಕ ವಿಚಾರಿಸಿದಾಗ ಒಬ್ಬ ಮುನಿಗಳ ದರ್ಶನ ಆಗುತ್ತದೆ.ಅವರನ್ನು ಕೇಳಿದಾಗ ಇಲ್ಲಿ ಸರ್ಪ ಸಂಚಾರ ಆಗುತ್ತಿದೆ ಇಲ್ಲಿ ಶಿವನ ಲಿಂಗ ಪ್ರತಿಷ್ಠಾಪನೆ ಮಾಡು ನಾವೆಲ್ಲ ಇಲ್ಲೆ ಇದ್ದು ಜನರಿಗೆ ಒಳ್ಳೆಯದು ಮಾಡೋಣ ಎಂದರು. ಇದಾದ ಮೂರು ದಿನಗಳ ನಂತರ ನರ್ಮದಾ ತೀರದ ಸ್ನೇಹಿತರೊಬ್ಬರು ಕರೆ ಮಾಡಿ ಲಿಂಗ ದೊರಕಿದೆ ಎಂದರು ಆಗ ಆಶ್ಚರ್ಯ ಆಯಿತು. ಆ ಲಿಂಗವನ್ನು ಕಳುಹಿಸಿಕೊಡಿ ಎಂದು ತಿಳಿಸಿ, ಆ ಲಿಂಗವನ್ನು ತರೆಸಿಕೊಂಡು ಇಲ್ಲಿ ಪ್ರತಿಷ್ಠಾಪನೆ ಮಾಡಿದೆವು ಎಂದು ತಿಳಿಸಿದರು. ಅಲ್ಲದೆ ಇಲ್ಲಿ ಒಂದು ಪವಾಡವು ನಡೆಯುತ್ತದೆ. ಅದೆಂದರೆ ನರ್ಮದಾ ತೀರದಿಂದ ಆ ಲಿಂಗದ ಬಾಕ್ಸ್ ತೆಗೆದ ಕೂಡಲೆ ಜೋರಾದ ಸಿಡಿಲು ಮಿಂಚು , ಆ ಸಿಡಿಲಿಗೆ ಅಲ್ಲಿದ್ದ ಒಂದು ತೆಂಗಿನಮರವು ಸುಟ್ಟು ಹೋಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
ಇವರು ಭವಿಷ್ಯ ನುಡಿದರೆ ಸಾಕ್ಷಾತ್ ಶಿವನೆ ನುಡಿದಂತೆ,ನೀವು ತಿಳಿಯದ ಕೆಂಪು ಶಿವಲಿಂಗದ ಶಕ್ತಿ ಇದು ನೋಡಿ..

Astro plus
[irp]