20 ದಿನಗಳಲ್ಲಿ ನಿಮ್ಮ ಉದುರುವ ತಲೆ ಕೂದಲು ಸಮಸ್ಯೆ ನಿವಾರಣೆಯಾಗಲು ಈ ರೀತಿ ಮಾಡಿ.ಕೂದಲು ಉದುರುವಿಕೆ ಎನ್ನುವುದು ಈಗ ಗಂಡು-ಹೆಣ್ಣು ಎನ್ನುವ ವ್ಯತ್ಯಾಸವಿಲ್ಲದೆ ಚಿಕ್ಕಮಕ್ಕಳಿಗೂ ಸೇರಿದಂತೆ ಎಲ್ಲರಿಗೂ ಕಾಡುತ್ತಿರುವ ಸಮಸ್ಯೆ. ಕೂದಲು ಉದುರುವಿಕೆಗೆ ಹಲವಾರು ಕಾರಣಗಳಿವೆ ಈಗ ನಾವು ಸೇವಿಸುತ್ತಿರುವ ಆಹಾರಗಳು ಪೌಷ್ಟಿಕಾಂಶ ಇಲ್ಲದೆ ಇರುವುದು, ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಪದಾರ್ಥಗಳ ಬಳಕೆ ಹೆಚ್ಚಾಗಿರುವುದು ಈ ಕಾರಣಗಳಿಂದ ಚಿಕ್ಕ ವಯಸ್ಸಿಗೆ ಕೂದಲು ಉದುರುವುದು ಶುರುವಾಗುತ್ತದೆ. ಅದರೊಂದಿಗೆ ಅತಿಯಾದ ಒತ್ತಡ, ಥೈರಾಡ್, ಶುಗರ್ ಸಮಸ್ಯೆ ಇರುವವರು ಮತ್ತು ಉಷ್ಣ ಶರೀರ ಇರುವವರೆಗೂ ಸಹ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯವಾಗಿರುತ್ತದೆ. ನಮ್ಮ ಪ್ರಕೃತಿಯಲ್ಲಿ ನೈಸರ್ಗಿಕವಾಗಿಯೇ ಲಕ್ಷಾಂತರ ಸಮಸ್ಯೆಗಳಿಗೆ ಪರಿಹಾರ ಇದೆ ಆದರೆ ನಾವು ಅದನ್ನು ಗುರುತಿಸಿ ತಿಳಿದುಕೊಳ್ಳಬೇಕು ಅಷ್ಟೇ. ಅದೇ ರೀತಿಯಾಗಿ ಕೂದಲು ಉದುರುವಿಕೆ ಸಮಸ್ಯೆಗಳಿಗೆ ಕೂಡ ನೈಸರ್ಗಿಕವಾಗಿ ಖಚಿತವಾಗಿ 20 ದಿನಗಳ ಒಳಗೆ ಪರಿಹಾರವಾಗುವ ಔಷಧಿಗಳು ಇದೆ.
ಇದಕ್ಕಿರುವ ಮೊದಲ ನೈಸರ್ಗಿಕ ಔಷಧಿ ಯಾವುದೆಂದರೆ ಕಾಡು ಮುಳ್ಳು ಬದನೆ ಗಿಡ. ಈ ಗಿಡದ ತುಂಬೆಲ್ಲ ಮುಳ್ಳೇ ತುಂಬಿರುತ್ತದೆ. ಆದರೆ ಇದರ ಔಷಧೀಯ ಗುಣ ಮಾತ್ರ ಬಹಳ ಉಪಯುಕ್ತವಾಗಿದೆ. ಈ ಕಾಡು ಮುಳ್ಳು ಬದನೆ ಗಿಡದ ಕಾಯಿಯನ್ನು ಮಾತ್ರ ತೆಗೆದುಕೊಂಡು ಅದರ ಒಳಗಿರುವ ಬೀಜಗಳನ್ನು ಕೂದಲಿನಲ್ಲಿ ಹೊಟ್ಟು ಇರುವವರು, ಕೂದಲು ಉದುರುವವರು ಮತ್ತು ತಲೆಯಲ್ಲಿ ಹೇನು ಕಚ್ಚುವುದರಿಂದ ಪ್ಯಾಚಸ್ ಆಗಿರುವವರು ಉಜ್ಜುತ್ತಾ ಬರುವುದರಿಂದ ಈ ಸಮಸ್ಯೆಗಳಿಗೆ ತುಂಬಾ ಅದ್ಭುತವಾದ ಫಲಿತಾಂಶವನ್ನು ಕೆಲವೇ ದಿನಗಳಲ್ಲಿ ನೀವು ಕಾಣಬಹುದು. ಇನ್ನೊಂದು ಗಿಡ ತುಂಗೆ ಗೆಡ್ಡೆ ಗಿಡ. ಈ ಗಿಡವು ಶುಂಠಿ ಗಿಡದ ತರ ತುಂಬಾ ಸುವಾಸನೆ ಭರಿತವಾಗಿರುತ್ತದೆ. ಇದರ ಜೊತೆ ಕಾಡು ತುಳಸಿ ಸೊಪ್ಪು ಮತ್ತು ಕಾಚಿ ಗಿಡ ಇದರ ಎಲೆಗಳನ್ನು ಸಹ ತೆಗೆದುಕೊಳ್ಳಬೇಕು. ಈಗ ಇವೆಲ್ಲವನ್ನು ಸಮಪ್ರಮಾಣದಲ್ಲಿ ಮುಳ್ಳು ಬದನೆಕಾಯಿ ಕಾಲು ಕೆಜಿ ಮತ್ತು ಉಳಿದ ಸೊಪ್ಪುಗಳೆಲ್ಲವೂ ತಲಾ ಕಾಲು ಕಾಲು ಕೆಜಿ ತೆಗೆದುಕೊಂಡು ಮೂರು ಲೀಟರ್ ಶುದ್ಧವಾದ ಕೊಬ್ಬರಿ ಎಣ್ಣೆಯ ಒಳಗೆ ಹಾಕಿ ಚೆನ್ನಾಗಿ ಸಣ್ಣ ಉರಿಯಲ್ಲಿ ಕಾಯಿಸಬೇಕು.
ಹಾಗೂ ಮೂರ್ನಾಲ್ಕು ದಿನಗಳವರೆಗೆ ಈ ಸೊಪ್ಪು ಗಳೆಲ್ಲವೂ ಎಣ್ಣೆ ಒಳಗಡೆ ಇರುವಂತೆ ಬಿಡಬೇಕು ಹಾಗೆ ಮಾಡಿದಾಗ ಸೊಪ್ಪಿನಲ್ಲಿರುವ ಎಲ್ಲಾ ಸಾರವು ಎಣ್ಣೆಯೊಳಗೆ ಬರುತ್ತದೆ. ನಂತರ ಈ ಎಣ್ಣೆಯನ್ನು ಇದನ್ನು ತಲೆ ಕೂದಲಿಗೆ ಹಚ್ಚಲು ಬಳಸುವುದರಿಂದ ನಿಮ್ಮ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗುತ್ತದೆ.