ತುಲಾ ರಾಶಿ ಶನಿ 5 ವರ್ಷ ನಿಮ್ಮ ಜೀವನದಲ್ಲಿ ಹಲವು ಅದ್ಬುತಗಳು ನಡೆಯಲಿವೆ.ಶನಿ ದೇವ ತರಲಿದ್ದಾನೆ ಬಾರಿ ಅದೃಷ್ಟ‌…!

ತುಲಾ ರಾಶಿಯವರಿಗೆ 5ವರ್ಷಗಳಲ್ಲಿ ಶನಿ ಅದೃಷ್ಟ ತರಲಿದ್ದಾರಂತೆ, ಅದು ಹೇಗೆ ಗೊತ್ತಾ?ತುಲಾ ಲಗ್ನ ಶನಿಯ ಉಚ್ಚ ಸ್ಥಾನ, ತುಲಾ ರಾಶಿಯ ಜೊತೆ ತುಲಾ ಲಗ್ನವೂ ಆಗಿದ್ದರೆ ತುಲಾ ಲಗ್ನದವರಿಗೆ ಶನಿಯು ತುಂಬಾ ಒಳ್ಳೆಯ ಫಲಗಳನ್ನು ಕೊಡಲಿದ್ದಾರೆ. ಶನಿಯಿಂದ ಮುಂದಿನ ಐದು ವರ್ಷಗಳಲ್ಲಿ ಲಾಭಪಡೆಯುವ ಜನರಲ್ಲಿ ನೀವೇನಾದರೂ ತುಲಾ ಲಗ್ನದವರಾಗಿದ್ದರೆ ಅದರಲ್ಲಿ ನೀವು ಕೂಡ ಒಬ್ಬರು. ಶನಿಗೆ ಬಹಳ ಪ್ರಿಯವಾದ ಜನರು ಇವರು. ನಿಮ್ಮ ಪರಿಶ್ರಮದಿಂದ ನಿಮಗೆ ಹೆಚ್ಚಿನ ಯಶಸ್ಸು ಸಿಗುತ್ತದೆ. ಯಾವ ಸವಲತ್ತು ಹಾಗೂ ಸೌಕರ್ಯಗಳಿಗೂ ನಿಮಗೆ ಬರ ಇರುವುದಿಲ್ಲ. ರಾಜ ಕೊನೆಯವರೆಗೂ ರಾಜನಾಗಿ ಇರುವುದಿಲ್ಲ, ಶ್ರೀಮಂತನು ಸಹ ಕೊನೆಯವರೆಗೂ ಶ್ರೀಮಂತನಾಗಿ ಇರುವುದಿಲ್ಲ ಹಾಗೆಯೇ ಬಡವನು ಸಹ ಕೊನೆಯವರೆಗೂ ಬಡವನಾಗಿ ಉಳಿಯುವುದಿಲ್ಲ. ಹಾಗಾಗಿ ಪರಿವರ್ತನೆ ಜಗದ ನಿಯಮ ಎನ್ನುವ ಮಾತಿನ ಮೇಲೆ ನಂಬಿಕೆ ಇಡಬೇಕು. ಯಾರಿಗೆ ಯಾವುದು ಶಾಶ್ವತವಾಗಿ ಇರುವುದಿಲ್ಲ.ತುಲಾ ಲಗ್ನದವರಿಗೆ ಆಗಲ್ಲ ಎಂದು ನೀವು ಕೈ ಚೆಲ್ಲಿ ಕುಳಿತಿದ್ದ ಕೆಲಸಗಳು ಆಗುವ ಕಾಲ ಬಂದಿದೆ. ಜಾಬ್ ಫೀಲ್ಡಿನಲ್ಲಿ ಹೊಸ ಹೊಸ ಅನುಭವಗಳನ್ನು ಹಾಗೂ ಹೊಸ ಹೊಸ ವಿಷಯಗಳನ್ನು ನೀವು ಕಲಿಯುತ್ತೀರಿ. ತುಂಬಾ ದಿನಗಳಿಂದ ಪ್ರಯತ್ನಪಟ್ಟು ನೀವು ಬಯಸುತ್ತಿದ್ದ ಪ್ರಮೋಷನ್ ಆಗಲಿ ಟ್ರಾನ್ಸ್ಫರ್

ಆಗಲಿ ಸುಲಭವಾಗಿ ನಿಮಗೆ ಸಿಗುತ್ತದೆ. ಹೊಸದಾಗಿ ವ್ಯಾಪಾರ ಶುರು ಮಾಡಲು ನಿಮ್ಮ ಸ್ನೇಹಿತರು ಯಾರಾದರು ಸಹಾಯ ಕೇಳಿದರೆ ಅದಕ್ಕೆ ನೀವು ಬೇಡ ಎಂದು ಒಂದೇ ಬಾರಿ ನಿರ್ಧಾರ ಮಾಡಿ ಬಿಡಬೇಡಿ ಯೋಚನೆ ಮಾಡಿ ಸ್ವಲ್ಪ ಸ್ವಲ್ಪವೇ ಇನ್ವೆಸ್ಟ್ ಮಾಡುತ್ತಾ ಬನ್ನಿ. ಮುಂದಿನ ದಿನಗಳಲ್ಲಿ ನಿಮಗೆ ಹೆಚ್ಚು ಆರ್ಥಿಕ ಲಾಭಗಳಾಗುವ ಸಾಧ್ಯತೆಗಳಿವೆ. ಆಸ್ತಿ ಜಮೀನು ಅಥವಾ ಚಿನ್ನ ಖರೀದಿ ಮಾಡಲು ಆಸಕ್ತಿ ಹೆಚ್ಚಾಗಬಹುದು. ಮನೆ ಖರೀದಿ ಮಾಡುವುದು ಅಥವಾ ಮಾರಾಟ ಮಾಡುವ ಮೊದಲು ಮನೆಯಲ್ಲಿ ದೊಡ್ಡವರ ಸಲಹೆ ಕೇಳಿ ಮುಂದುವರೆದರೆ ಲಾಭ ಇದೆ.ಯಾವುದಾದರೂ ಬಿಲ್ಡಿಂಗ್ ಅಥವಾ ಕಾರ್ ಖರೀದಿ ಮಾಡಬೇಕು ಎಂದು ಆಸೆ ಪಟ್ಟಿದ್ದರು ಒಂದಲ್ಲ ಒಂದು ಅಡೆತಡೆ ನಿಮ್ಮನು ತಡೆಯುತಿದ್ದರೆ ಇನ್ನು ಮುಂದಿನ ದಿನಗಳಲ್ಲಿ ಆ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ. ನಿಮ್ಮ ಅನುಕೂಲತೆಗೆ ತಕ್ಕಂತೆ ಎಲ್ಲವೂ ನಿಮಗೆ ಒಲಿದು ಬರಲಿದೆ. ತುಲಾ ರಾಶಿ ಹಾಗೂ ತುಲಾ ಲಗ್ನದವರ ಭವಿಷ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ.

WhatsApp Group Join Now
Telegram Group Join Now
[irp]