ಮಸೀದಿ ಶೋಧಿಸಲು ಬಂದವರಿಗೆ ಅಚ್ಚರಿ,ಈ ಮಸೀದಿಯ ಕೆರೆಯಲ್ಲಿ ಶಿವಲಿಂಗ ಅನಾಥವಾಗಿದ್ದು ಹೇಗೆ ನೋಡಿ‌ - Karnataka's Best News Portal

ಮಸೀದಿ ಶೋಧಿಸಲು ಬಂದವರಿಗೆ ಅಚ್ಚರಿ,ಈ ಮಸೀದಿಯ ಕೆರೆಯಲ್ಲಿ ಶಿವಲಿಂಗ ಅನಾಥವಾಗಿದ್ದು ಹೇಗೆ ನೋಡಿ‌

ಮಸೀದಿ ಶೋಧಿಸಲು ಬಂದವರಿಗೆ ಅಲ್ಲಿ ಸಿಕ್ಕಿದ್ದೇನು ಗೊತ್ತಾ? ಅದರ ಇತಿಹಾಸದ ಹಿಂದಿರುವ ಕರಾಳ ಕಥೆಯೇನು ಗೊತ್ತಾ?ಜ್ಞಾನವ್ಯಾಪಿ ಮಸೀದಿಯಲ್ಲಿ ಶಿವ ಪ್ರತ್ಯಕ್ಷನಾಗಿದ್ದಾನೆ. ಇದು ನಿಜ, ಹೇಗೆಂದರೆ ಕಾಶಿಯ ಜ್ಞಾನವ್ಯಾಪಿ ಮಸೀದಿ ಬಾವಿಯೊಳಗೆ 12 ಅಡಿ 8 ಇಂಚು ವ್ಯಾಸ ಹೊಂದಿರುವ ಶಿವಲಿಂಗ ಪತ್ತೆಯಾಗಿದೆ. ಮಸೀದಿಯ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿರುವುದು ಈಗ ದೇಶದಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಜ್ಞಾನವ್ಯಾಪಿ ಮಸೀದಿಯಲ್ಲಿ ಸರ್ವೇ ಕಾರ್ಯ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು. ಕೋರ್ಟ್ನ ಆದೇಶದಂತೆ ಮಸೀದಿ ಆವರಣದಲ್ಲಿ ಸರ್ವೆ ಕಾರ್ಯ ನಡೆಯುತ್ತಿತ್ತು. ವಿಡಿಯೋ ಚಿತ್ರೀಕರಣ ಕೂಡ ನಡೆಯುತ್ತಿತ್ತು. ಇದೇ ವೇಳೆ ಮಸೀದಿಯ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ. ಮಸೀದಿಯ ಬಾವಿಗಳಿಗೆ ಪತ್ತೆಯಾಗಿರುವ ಶಿವಲಿಂಗವು ಕಾಶಿಯ ಮೂಲ ಶಿವಲಿಂಗ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಹಿಂದೆ ಆ ಜಾಗದಲ್ಲಿ ಹಿಂದೂ ದೇವಾಲಯ ಇತ್ತು ಅದನ್ನು ಕೆಡವಿ ಮಸೀದಿ ಕಟ್ಟಲಾಗಿದೆ ಎನ್ನುವುದಕ್ಕೆ ಇದೇ ದೊಡ್ಡ ಸಾಕ್ಷಿ ಎಂದು ಹಿಂದೂ ಪರ ವಕೀಲರು ವಾದಿಸುತ್ತಿದ್ದಾರೆ.

ಅಷ್ಟಕ್ಕೂ ಏನಿದು ಜ್ಞಾನವ್ಯಾಪಿ ಮಂದಿರ ಹಾಗೂ ಮಸೀದಿ ವಿವಾದ ಮತ್ತು ಅದರ ಹಿಂದಿರುವ ಇತಿಹಾಸ ಏನು ಎಂದು ನೋಡುವುದಾದರೆ ಜ್ಞಾನವ್ಯಾಪಿ ಎಂದರೆ ಹಿಂದುಗಳ ಪವಿತ್ರ ಸ್ಥಳ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಈ ಸ್ಥಳವನ್ನು ಹಿಂದಿಯಲ್ಲಿ ಜ್ಞಾನ್ ವಾಪಿ ಎಂದು ಕರೆಯುತ್ತಾರೆ. ಅದನ್ನೇ ನಾವು ಕನ್ನಡದಲ್ಲಿ ಜ್ಞಾನವ್ಯಾಪಿ ಎಂದು ಕರೆಯಬಹುದು. ಇಲ್ಲಿರುವ ಪ್ರದೇಶಕ್ಕೆ ಅಥವಾ ಮಸೀದಿಗೆ ಜ್ಞಾನವ್ಯಾಪಿ ಎಂದು ಹೆಸರು ಬರುವುದಕ್ಕೆ ಕಾರಣ ಅಲ್ಲಿರುವ ಒಂದು ಬಾವಿ. ಜ್ಞಾನ ವ್ಯಾಪಿ ಎನ್ನುವ ಹೆಸರಿನಲ್ಲಿ ಅಲ್ಲೊಂದು ಬಾವಿ ಇದೆ. ಜ್ಞಾನ ವಾಪಿ ಎಂದರೆ ಜ್ಞಾನದ ಬಾವಿ ಎಂದರ್ಥ. ಇದೇ ಹೆಸರು ಮುಂದೆ ಅಲ್ಲಿ ಕಟ್ಟಿದ ಮಸೀದಿಗೂ ಸಹ ಬರುತ್ತದೆ. ಇದೇ ಮಸೀದಿಯ ಆವರಣದಲ್ಲಿ ಈಗ ಅದೇ ಬಾವಿಯಲ್ಲಿ ಶಿವಲಿಂಗ ಪ್ರತ್ಯಕ್ಷವಾಗಿದೆ. ಅಷ್ಟಕ್ಕೂ ಮಸೀದಿಯಲ್ಲಿ ಶಿವಲಿಂಗ ಇರುವುದಕ್ಕೆ ಹೇಗೆ ಸಾಧ್ಯ?

WhatsApp Group Join Now
Telegram Group Join Now
See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ

ಈ ಮೂಲಕ ಇದು ಕೊಡುತ್ತಿರುವ ಸೂಚನೆಯಾದರೂ ಏನು? ಕಾಶಿಯ ಶಿವಲಿಂಗ ಈ ಬಾವಿಯಲ್ಲಿ ಸಿಕ್ಕಿದ್ದು ಹೇಗೆ? ಈ ವಿಷಯಗಳ ರೋಚಕ ಸತ್ಯಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ವೀಡಿಯೋವನ್ನು ಪೂರ್ತಿಯಾಗಿ ನೋಡಿ.

[irp]


crossorigin="anonymous">