ಅಂಬಾನಿಯ ವಿಶ್ವದ ದುಬಾರಿ ಮನೆ ಆಂಟಿಲಿಯಾವನ್ನ ನಿರ್ಮಿಸಿದ್ದು ಹೇಗೆ ಗೊತ್ತಾ? ಈ ಮನೆ ಹಿಂದಿನ ಸಂಪತ್ತಿನ ಸತ್ಯ ಏನು ನೋಡಿ.

ಅಂಬಾನಿಯು ವಿಶ್ವದ ಅತಿ ದುಬಾರಿ ಅಂಟಿಲಿಯಾ ವನ್ನು ನಿರ್ಮಿಸಿದ್ದ ಹೇಗೆ ಗೊತ್ತಾ? ಆತನ ಸಂಪತ್ತಿನ ಹಿಂದಿರುವ ರಹಸ್ಯ ಏನು ಗೊತ್ತಾ?ಶ್ರೀಮಂತ,ಅಗರ್ಭ ಶ್ರೀಮಂತ ಈ ಹೆಸರನ್ನು ಕೇಳಿದ ತಕ್ಷಣ ಮೊದಲು ನೆನಪಿಗೆ ಬರುವುದು ಮುಕೇಶ್ ಅಂಬಾನಿ. ಮುಕೇಶ್ ಅಂಬಾನಿ ಯನ್ನು ಭಾರತದ ಕುಬೇರ ಎಂದು ಕರೆಯುತ್ತಾರೆ. ಮುಕೇಶ್ ಅಂಬಾನಿ ಮುಟ್ಟಿದ್ದೆಲ್ಲ ಈಗ ಚಿನ್ನವಾಗುತ್ತಿದೆ. ತಂದೆಯಿಂದ ಸಿಗಬೇಕಾಗಾದ ಪಾಲು ಸರಿಯಾಗಿ ಸಿಗದೇ ಹೋದರೂ ಮುಕೇಶ್ ಅಂಬಾನಿ ಅವರು ಸ್ವಪ್ರಯತ್ನದಿಂದ ಈಗ ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ಪ್ರತಿ ನಿಮಿಷಕ್ಕೆ ಕೋಟಿ ಕೋಟಿ ಹಣ ಗಳಿಸುತ್ತಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಮುಕೇಶ್ ಅಂಬಾನಿ ಅವರು ತಿರು ಬಾಯಿ ಅಂಬಾನಿಯವರ ದೊಡ್ಡ ಮಗ. ಹುಟ್ಟುವಾಗಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ್ದರೂ ಸಹಾ ಮುಕೇಶ್ ಅಂಬಾನಿ ಅವರು ತಮ್ಮ ಸ್ವಂತ ನಿರ್ಧಾರಗಳಿಂದಲೇ ಇಂದು ದೊಡ್ಡ ಸ್ಥಾನದಲ್ಲಿ ಕುಳಿತಿದ್ದಾರೆ. ಮುಖೇಶ್ ಅಂಬಾನಿಯವರ ಶ್ರೀಮಂತಿಕೆ, ಲಕ್ಸುರಿ ಲೈಫ್, ಹೈಫೈ ಮನೆ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ.

ಇದರ ಬಗ್ಗೆ ಹೇಳುವುದಾದರೆ ಮುಕೇಶ್ ಅಂಬಾನಿ ಅವರ ತಂದೆ ತಿರು ಬಾಯಿ ಅಂಬಾನಿಯವರು ತುಂಬಾ ಕಷ್ಟಪಟ್ಟು ಮೇಲೆ ಬಂದವರು. ಅವರು ಮುಂಬೈನ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಹಾಕುವ ಕೆಲಸವನ್ನು ಮಾಡುತ್ತಿದ್ದರು. ಆ ಕೆಲಸದಿಂದ ಜೀವನ ಸಾಗಿಸಲು ಕಷ್ಟವಾದಾಗ ದೂರದ ಯಮನ್ ದೇಶಕ್ಕೆ ಹೋಗಿ ಅಲ್ಲಿ ಬಂದರೊಂದರಲ್ಲಿ ಕ್ಲರ್ಕ್ ಕೆಲಸ ಮಾಡಲು ಶುರುಮಾಡುತ್ತಾರೆ. ಅಲ್ಲಿ ಕೆಲಸ ಮಾಡುತ್ತಿರುವಾಗ ತಿರುಬಾಯಿ ಅಂಬಾನಿ ಅವರಿಗೆ ಮದುವೆ ಕೂಡ ಆಗುತ್ತದೆ. 1957ರಲ್ಲಿ ಯಮನ್ ದೇಶದಲ್ಲಿ ಮುಖೇಶ್ ಅಂಬಾನಿ ಅವರು ಜನಿಸುತ್ತಾರೆ. ಮುಕೇಶ್ ಅಂಬಾನಿ ಅವರು ಹುಟ್ಟಿದಾಗ ತಿರುಬಾಯಿ ಅಂಬಾನಿ ಅವರು ಅಷ್ಟೊಂದು ಶ್ರೀಮಂತರಾಗಿರಲಿಲ್ಲ. ಆಗ ಅವರ ಬಳಿ ಇದ್ದದ್ದು ಬರೀ ಎರಡು ರೂಮಿನ ಮನೆ ಮಾತ್ರ. ಯಮನ್ ದೇಶದಲ್ಲಿ ದುಡಿದ ಹಣವನ್ನೆಲ್ಲಾ ಕೂಡಿ ಇಟ್ಟಿದ್ದ ತಿರುಬಾಯಿ ಅಂಬಾನಿ ಅವರು ಭಾರತದಲ್ಲಿ ಯಾವುದಾದರೂ ಒಂದು ಬಿಸಿನೆಸ್ ಮಾಡಬೇಕು ಎಂದು ಕೊಂಡಿದ್ದರು.

WhatsApp Group Join Now
Telegram Group Join Now

ಅಂದುಕೊಂಡತೆ 1958ರಲ್ಲಿ ಭಾರತಕ್ಕೆ ಬರುತ್ತಾರೆ. ಭಾರತದಲ್ಲಿ ಬಟ್ಟೆ ಮತ್ತು ಮಸಾಲೆ ಪದಾರ್ಥಗಳ ವ್ಯಾಪಾರವನ್ನು ಶುರುಮಾಡುತ್ತಾರೆ. ಆರಂಭದಲ್ಲಿ ಸಣ್ಣಮಟ್ಟದಲ್ಲಿ ಈ ವ್ಯಾಪಾರವನ್ನು ಶುರುಮಾಡಿದ್ದ ಅಂಬಾನಿ ಅವರು 1966 ರ ವೇಳೆಗೆ ದೊಡ್ಡ ಕಾರ್ಖಾನೆಯನ್ನು ರೆಡಿ ಮಾಡುತ್ತಾರೆ. ಇವರ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

[irp]