ಕರ್ನಾಟಕದ ಏಕೈಕ ಮಾತನಾಡುವ ದೇವರು ! ದಸರಿಘಟ್ಟ ಚೌಡೇಶ್ವರಿ ದೇವಿ!ತುಂಬಾ ಜನಕ್ಕೆ ಇರುವ ಅನುಮಾನವೆಂದರೆ ದೇವರು ಇದ್ದಾನೋ ಇಲ್ಲವೋ ಎಂದು ಅದಕ್ಕೆ ಉತ್ತರ ಅವರವರ ನಂಬಿಕೆ ಮತ್ತು ಅವರ ಅವರ ವಿಶ್ವಾಸ ಕೆಲವರು ಇದ್ದಾರೆ ಎಂದರೆ ಇನ್ನು ಕೆಲವರು ಎಲ್ಲಿದ್ದಾನೆ ಎಂದು ಅವರದೇ ಆದ ಧೋರಣೆಯನ್ನು ಅವರದೇ ಆದ ಮಾತಿನಲ್ಲಿ ಮಾತನಾಡುತ್ತಾರೆ. ಕಲ್ಪತರು ನಾಡು ಎಂದೇ ಹೆಸರಾದ ತಿಪಟೂರು ತಾಲೂಕಿನ ದಸರಿಘಟ್ಟ ಕ್ಷೇತ್ರ ಚೌಡೇಶ್ವರಿ ದೇವಿಯ ನೆಲೆನಾಡು ಇದು ತುಮಕೂರು ಜಿಲ್ಲೆಯಲ್ಲಿದೆ ದಸರಿಘಟ್ಟ ಕ್ಷೇತ್ರದ ಚೌಡೇಶ್ವರಿ ಭಕ್ತರ ಕಷ್ಟನಷ್ಟಗಳಿಗೆ ತನ್ನ ಕಳಸದ ಬರವಣಿಗೆಯ ಮೂಲಕ ಪರಿಹಾರ ಸೂಚಿಸುತ್ತಾರೆ ಎನ್ನುವ ನಂಬಿಕೆ ಇದೆ. ಇಂಥ ಶಕ್ತಿಯನ್ನು ಹೊಂದಿರುವ ಚೌಡೇಶ್ವರಿಯನ್ನು ನೋಡಲು ಹಲವೆಡೆಯಿಂದ ಪ್ರತಿನಿತ್ಯ ಸಾವಿರಾರು ಭಕ್ತರು ಕಡೆಗಳಿಂದ ಇಲ್ಲಿಗೆ ಬರುತ್ತಾರೆ. ಅಷ್ಟೇ ಅಲ್ಲದೆ ಹಲವಾರು ಗಣ್ಯರು ಈ ಕ್ಷೇತ್ರಕ್ಕೆ ಬಂದು ದರ್ಶನ ಪಡೆದು ಪುನೀತರಾಗುತ್ತಾರೆ. ತಿಪಟೂರಿನಿಂದ ಈ ಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ ಬೆಳೆದಿರುವ ಸಾಲು ತೆಂಗಿನ ಮರಗಳು ಭಕ್ತರಿಗೆ ತಂಪಾದ ಗಾಳಿಯನ್ನು ಸೂಸುತ್ತಾ ದೇವಿಯ ದರ್ಶನಕ್ಕೆ ಕೈಬೀಸಿ ಕರೆಯುವಂತೆ ಇವೆ. ಸುಮಾರು ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ ಚೌಡೇಶ್ವರಿ ದೇವಾಲಯ ಅದ್ಭುತವಾಗಿದೆ ಪ್ರವೇಶದ್ವಾರದಲ್ಲಿಯೇ 28 ಅಡಿ
ಎತ್ತರದ ಭವ್ಯ ರಾಜಗೋಪುರವಿದೆ. ದೇವಾಲಯದ ಗರ್ಭ ದಲ್ಲಿ ಹುತ್ತದ ಮಣ್ಣಿನಿಂದ ನಿರ್ಮಿಸಲಾಗಿರುವ ಚೌಡೇಶ್ವರಿಯ ವಿಗ್ರಹವಿದೆ ಈ ಹುತ್ತದ ಮಣ್ಣಿನಲ್ಲಿ ಹಿಂದೆ ಚೌಡೇಶ್ವರಿ ವಿಲೀನವಾಗಿದ್ದನ್ನು ಎಂಬ ಪ್ರತೀತಿ ಇದೆ ಇನ್ನು ದೇಗುಲದ ಮುಂದಿರುವ ಪುಟ್ಟ ದೇವಾಲಯಗಳಲ್ಲಿ ಈ ಕ್ಷೇತ್ರಪಾಲ ಗಳಾದ ಕರಿಯಮ್ಮ ಕಲ್ಪ ಶಿಲೆಯ ಮೂರ್ತಿ ಇದೆ ಸುಂದರವಾಗಿರುವ ಈ ಶಿಲೆಗೆ ಅಭಿಷೇಕ ಮಾಡಲಾಗುತ್ತದೆ ಆದಿಚುಂಚನಗಿರಿ ಮಠ ವು ಈ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಇಲ್ಲಿರುವ ಚೌಡೇಶ್ವರಿ ಉತ್ಸವ ಮೂರ್ತಿಯನ್ನು ಬರೆಯುವ ಅಮ್ಮ ಹಾಗೂ ಮಾತಾಡುವ ಅಮ್ಮ ಎಂದು ಕೂಡ ಕರೆಯಲಾಗುತ್ತದೆ ಅಥವಾ ಮಾತನಾಡುವ ದೇವಿ ಎಂದೇ ಕರೆಯಲಾಗುತ್ತದೆ ಇದು ಈ ಕ್ಷೇತ್ರದ ವಿಶೇಷ ಮತ್ತು ಕುತೂಹಲಕಾರಿ ಸಂಗತಿಯಾಗಿದೆ ಭಕ್ತರ ಸಮಸ್ಯೆಗೆ ಉತ್ಸವಮೂರ್ತಿ ತನ್ನ ಕಳಸದ ಮೂಲಕ ಬರೆದು ಪರಿಹಾರ ಸೂಚಿಸುತ್ತದೆ ಎಂಬ ನಂಬಿಕೆ ಇದೆ ದೇವಿಯು ತನ್ನ ಮುಂದಿರುವ ಮಠದ ಹಲಗೆಯಲ್ಲಿ ಹರಡಿರುವ ರಾಗಿಹಿಟ್ಟು ಅಕ್ಕಿ ಅಥವಾ ಅರಿಶಿನದಲ್ಲಿ ಕಳಸದ ತುದಿಯಿಂದ ಅಕ್ಷರ ಮೂಡಿಸಿ ಭಕ್ತಾದಿಗಳಿಗೆ ಉತ್ತರ ಸೂಚಿಸುವುದರ ಜೊತೆಗೆ ಹಾಸ್ಯವನ್ನು ಕೂಡ ಉಂಟುಮಾಡುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ
ಮಾತನಾಡುವ ದೇವಿಯನ್ನು ಕಂಡಿದ್ದೀರಾ ? ಭಕ್ತರ ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡುವ ದಸರಿಗಟ್ಟ ಚೌಡೇಶ್ವರಿಯ ಈ ಪವಾಡ ನೋಡಿ ವಿಡಿಯೊ..

Astro plus
[irp]