ವೃಷಭ ರಾಶಿ 2022 ಜೂನ್ ಮಾಸದ ಭವಿಷ್ಯ!ವೃಷಭ ರಾಶಿ ಹೊಂದಿರುವವರಿಗೆ ಜೂನ್ 2022 ರ ಮಾಸದಲ್ಲಿನ 4 ಶುಭ ವಿಚಾರಗಳು ಹಾಗೂ 5 ಅಶುಭ ವಿಚಾರಗಳನ್ನು / ಎಚ್ಚರಿಕೆಗಳನ್ನು ಇಲ್ಲಿ ತಿಳಿಸಿ ಕೊಡಲಾಗಿದೆ. ಬಹಳ ಮುಖ್ಯವಾಗಿ ಕುಜ ಯೋಗ ಕುಜ ಫಲ ಸಿಗುತ್ತಲೊದೆ. ಗುರು ಹಾಗೂ ಕುಜ ಬಲಗಳು ಜೂನ್ ತಿಂಗಳಲ್ಲಿ ಸಿಗಲಿವೆ. ಜೂನ್ 26 ನೇ ತಾರೀಖಿನ ತನಕ ಗುರು ಮಂಗಳ ಯೋಗ, ಗುರು ಯೋಹ ಸಿಗಲಿದೆ. ಜೂನ್ 15 ಕ್ಕೆ ಮಿಥುನ ರಾಶಿಗೆ ರವಿ ಪ್ರವೇಶ, ಜೂನ್ 18 ಕ್ಕೆ ವೃಷಭ ರಾಶಿಗೆ ಶುಕ್ರ ಪ್ರವೇಶ, ಜೂನ್ 26 ಕ್ಕೆ ಮೇಷ ರಾಶಿಗೆ ವ್ಯಯ ಸ್ಥಾನಕ್ಕೆ ವ್ಯಾ ಅಧಿಪತಿ ಆದ ಕುಜನ ಪ್ರವೇಶ ಆಗುತ್ತಾನೆ. ಈ ರೀತಿ ಇದ್ದಾಗ ಗುರು ಮಂಗಳ ಯೋಗ ಒಂದಿಷ್ಟು ಎಚ್ಚರವನ್ನು ಕೊಡುತ್ತದೆ. ಏಕೆ ಅಂದರೆ ಕುಜ ಬಲನು ಹೌದು ಕುಜ ವ್ಯಯನು ಹೌದು. ಈ ಕುಜ ವ್ಯಯಯದ ಬಲವನ್ನು ಹೋಮ ಹವನಗಳನ್ನು ಮಾಡಿ ಶಾಂತಿ ಮಾಡುತ್ತೀರೋ ಆಗ ಮಾತ್ರ ಕುಜ ಬಲ ಚೆನ್ನಾಗಿ ಕೆಲಸ ಮಾಡುತ್ತದೆ. ಇದನ್ನು ಸೀಕ್ಷಮವಾಗಿ ಗಮನಿಸಬೇಕು. ವೃಷಭ ರಾಶಿ ಅವರೊಗೆ ಮೊದಲನೆ ಎಚ್ಚರಿಕೆ ಜೂನ್ 15 ರ ತನಕ ಆಡುವ ಪ್ರತಿ ಮಾತಿನ ಬಗ್ಗೆ ಎಚ್ಚರ ವಹಿಸಿ.
ಎರಡನೆಯದು ವಿವಾಹಿತ ಸ್ತ್ರೀಯರು ತಾಳ್ಮೆ ವಹಿಸಿಕೊಳ್ಳದಿದ್ದರೆ ತವರು ಮನೆಯವರೊಂದಿಗೆ ದೊಡ್ಡ ಪ್ರಮಾಣದ ಮನಸ್ಥಾಪ ಉಂಟಾಗುತ್ತದೆ. ಮೂರನೆಯದು ಈ ತಿಂಗಳು ನೀವು ಅವಮಾನಿತರಾಗುವ ಸಾಧ್ಯತೆ ಅಥವಾ ಕಳೆದುಕೊಳ್ಳುವ ಯೋಗ ಜೂನ್ 18 ರ ನಂತರ ಜಾಸ್ತಿ ಇರುತ್ತದೆ. ನಾಲ್ಕನೇ ಎಚ್ಚರಿಕೆ: ಹೂಡಿಕೆ ವಿಷಯದಲ್ಲಿ ಒಬ್ಬರು ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆ ಇದೆ. ಐದನೆಯದು ಜೂನ್ 18 ರ ನಂತರ ಸ್ತ್ರೀ ಶತ್ರುಗಳು ಜಾಸ್ತಿ ಆಗುತ್ತಾರೆ. ಇನ್ನು ವೃಷಭ ರಾಶಿ ಅವರ ನಾಲ್ಕು ಶುಭ ವಿಚಾರಗಳು ಎಂದರೆ ಅವಿವಾಹಿತರಿಗೆ ವಿವಾಹ ಯೋಗ ತುಂಬಾ ಚೆನ್ನಾಗಿ ಇದೆ. ಅನಿರೀಕ್ಷಿತ ಕ್ಷೇತ್ರ ಪ್ರಯಾಣಗಳ ಯೋಗ ಇದೆ. ಉದ್ಯೋಗದಲ್ಲಿ ವರ್ಗಾವಣೆ ಬಯಸುವವರು, ಹುದ್ದೆ ಬದಲಾವಣೆ ಬಯಸುವವರು ಗೋಚಾರ ರೀತಿಯಲ್ಲಿ ಆಗಬಹುದು ಆದರೆ ವೈಯಕ್ತಿಕ ಜಾತಕ ಪರಿಶೀಲನೆ ಮಾಡಿಸಿಕೊಳ್ಳುವುದು ಉತ್ತಮ. ಕೈ ಹಾಕಿದ ಹೊಸ ಕೆಲಸಗಳು ನೆರವೇರುತ್ತವೆ.
ವೃಷಭ ರಾಶಿ ಜೂನ್ ಮಾಸ ಭವಿಷ್ಯ, ಈ ತಿಂಗಳು ನಿಮಗೆ ಸಿಗಲಿದೆ ಗುರು ಮಂಗಳ ಯೋಗ,5+4 =9 ಈ ವಿಷಯದಲ್ಲಿ ಬಾರಿ ಎಚ್ಚರ..

Astro plus
[irp]