ರಾತ್ರಿ ಚೂರೇಚೂರು ಮುಖಕ್ಕೆ ಹಚ್ಚಿದರೆ ಸಾಕು ಮುಖ ಪಳಪಳ ಹೊಳೆಯುತ್ತದೆ. ಬಂಗು ಸುಕ್ಕು ಪಿಂಪಲ್ ಕಪ್ಪು ಕಲೆ ಬರುವುದೇ ಇಲ್ಲ.ಬ್ಯೂಟಿ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಕಾಸ್ಟ್ಲಿ ಕಾಸ್ಮೆಟಿಕ್ಸ್ ಗಳು, ಬ್ಯೂಟಿ ಪಾರ್ಲರ್ ಗಳು, ಬ್ಯೂಟಿ ಥೆರಪಿಗಳು ಇನ್ನು ಮುಂತಾದವುಗಳು. ಆದರೆ ಯಾವುದೇ ಕೆಮಿಕಲ್ ಯುಕ್ತ ಕಾಸ್ಮೆಟಿಕ್ ಗಳ ಬಳಕೆ ಇಲ್ಲದೆ ಕೂಡ ನಮ್ಮ ತ್ವಛೆಯನ್ನು ಹೊಳೆಯುವಂತೆ ಮಾಡಬಹುದು ಎಂದರೆ ಕೆಲವರಿಗೆ ಆಶ್ಚರ್ಯ ಆಗಬಹುದು ಆದರೆ ಒಂದು ನ್ಯಾಚುರಲ್ ಆದ ಮನೆಮದ್ದು ಮಾಡಿ ರಾತ್ರಿ ಹೊತ್ತು ಮಲಗುವ ಮುನ್ನ ಕೈಕಾಲುಗಳಿಗೆ ಮತ್ತು ಮುಖಕ್ಕೆ ಅಪ್ಲೈ ಮಾಡುವುದರಿಂದ ಬಹಳ ಹೆಣ್ಣುಮಕ್ಕಳಿಗೆ ಕಾಡುವ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಸಿಗುತ್ತದೆ. ಇದನ್ನು ಮಾಡುವುದರಿಂದ ನಿಮ್ಮ ಸ್ಕಿನ್ ತುಂಬಾ ಸಾಫ್ಟ್ ಆಗುತ್ತದೆ ಮತ್ತು ವೈಟ್ ಕೂಡ ಆಗುತ್ತದೆ ಮುಖದಲ್ಲಿರುವ ಬ್ಲಾಕೆಡ್ಸ್ ಗಳು ಮತ್ತು ವೈಟೆಟ್ಸ್ ಗಳು ಕೂಡ ರಿಮೂವ್ ಆಗುತ್ತದೆ. ಎಷ್ಟೇ ಡೀಪ್ ಆದ ಪೋರ್ಸ್ ಗಳು ಇದ್ದರೂ ಅದರಲ್ಲಿರುವ ಕೊಳೆಗಳನ್ನು ತೆಗೆಯುತ್ತದೆ.
ಕಪ್ಪು ಕಲೆಗಳನ್ನು ಕಡಿಮೆ ಮಾಡುವುದರ ಜೊತೆಗೆ ರಿಂಕಲ್ಸ್ ಗಳನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಸುತ್ತ ಕಪ್ಪು ಕಲೆಗಳಿದ್ದರೆ ಅದನ್ನು ಕೂಡ ಕಡಿಮೆ ಮಾಡುತ್ತದೆ. ಪಿಗ್ಮೆಂಟೇಶನ್ ಆಗಿರುವವರಿಗೆ ಹಾಗೂ ಸನ್ ಟ್ಯಾನ್ ಆಗಿರುವವರಿಗೆ ಕೂಡ ನೀಟಾಗಿ ರಿಮೂವ್ ಮಾಡುತ್ತದೆ. ಯಾವುದೇ ರೀತಿ ಕಲೆ ಮುಖದಲ್ಲಿ ಆಗಿದ್ದರೂ ಕ್ಲಿಯರ್ ಆಗುತ್ತದೆ. ಈ ಮನೆಮದ್ದನ್ನು ಅಪ್ಲೆ ಮಾಡುವುದರಿಂದ ನಿಮಗೆ ಬೆಳಗ್ಗೆ ಎದ್ದ ಕೂಡಲೆ ಮುಖ ಫ್ರೆಶ್ ಫೀಲ್ ಬರುತ್ತದೆ. ಈ ಮನೆಮದ್ದು ತುಂಬಾ ನೈಸರ್ಗಿಕವಾಗಿದ್ದು ಇದನ್ನು ತಯಾರಿ ಮಾಡಿಕೊಳ್ಳುವುದು ಕೂಡ ಬಹಳ ಸುಲಭ. 1 ಟೇಬಲ್ ಸ್ಪೂನ್ ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಟೇಬಲ್ ಸ್ಪೂನ್ ಹಸಿ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದೆರಡು ಚೆನ್ನಾಗಿ ಮಿಕ್ಸ್ ಆದಮೇಲೆ ಇದಕ್ಕೆ ಒಂದು ಟೇಬಲ್ ಚಮಚದಷ್ಟು ಅಲೋವೆರ ಜೆಲ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.
ಈಗ ಇದೊಂದು ಕ್ರೀಮ್ ರೀತಿ ರೆಡಿಯಾಗುತ್ತದೆ. ಮಾರ್ಕೆಟ್ ಗಳಲ್ಲಿ ಸಿಗುವ ಕ್ರೀಮ್ ಗಳ ತಯಾರಿಕೆಯಲ್ಲಿ ಪ್ರಿಸರ್ವೇಟಿವ್ ಬಳಸುವುದರಿಂದ ಸ್ಕಿನ್ ಗ್ಲೋ ಆಗಿ ಕಾಣುವ ಬದಲು ಡಲ್ ಆಗುವ ಸಾಧ್ಯತೆಗಳು ಹೆಚ್ಚು. ಆದರೆ ಈ ಕ್ರೀಮ್ ಅನ್ನು ನ್ಯಾಚುರಲ್ ಆಗಿ ಮನೆಯಲ್ಲಿಯೇ ತಯಾರಿಸುವುದರಿಂದ ಯಾವ ಸೈಡ್ ಎಫೆಕ್ಟ್ ಕೂಡ ಸ್ಕಿನ್ಗೆ ಆಗುವುದಿಲ್ಲ.